ಪತ್ನಿಯ ಶಿರಚ್ಛೇದ ಮಾಡಿ, ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡ ವ್ಯಕ್ತಿ । ವರದಿಗಾರ ಸಂದರ್ಶನ ಮಾಡುವವರೆಗೂ ಮನೆಯಿಂದ ಹೊರಬರಲು ನಿರಾಕರಿಸಿದ ಕೊಲೆಗಾರ !
ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿ ಆಕೆಯ ಕತ್ತರಿಸಿದ ತಲೆಯಾ ಜತೆ ತೆಗೆದ ಸೆಲ್ಫಿಯನ್ನು ಆಕೆಯ ಪೋಷಕರಿಗೆ ಕಳುಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ, ಅಜೌಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ತಾನು ಮಾಡಿದ ಕೊಲೆಯ ಕೃತ್ಯದ ಬಗ್ಗೆ ವಿವರಿಸಲು ಪತ್ರಕರ್ತರನ್ನು ಕಳಿಸಿ, ನಂತರ ನಾನು ರೂಮಿಂದ ಬಂದು ಸರಂಡರ್ ಆಗ್ತೇನೆ ಎಂದು ಆ ವ್ಯಕ್ತಿ.
ಘಟನೆಯು ಈಜಿಪ್ಟ್ ನಲ್ಲಿ ನಡೆದಿದೆ. ಆ ವ್ಯಕ್ತಿಯ ಪತ್ನಿ ಆತನನ್ನು ಮೂರು ಚಿಕ್ಕ ಹುಡುಗಿಯರಿಂದ ದೂರವಿಟ್ಟಿರುವುದು ಕೊಲೆಗೆ ಕಾರಣ ಎನ್ನಲಾಗಿದೆ. ಅಲರಾಬಿಯಾ ವರದಿಯ ಪ್ರಕಾರ, ಮೃತಳನ್ನು 26 ವರ್ಷ ವಯಸ್ಸಿನ ಝೈನಾಬ್ ಇಬ್ರಾಹಿಂ ಎಂದು ಗುರುತಿಸಲಾಗಿದೆ. ದಖ್ಲಿಯಾ ಗವರ್ನರೇಟ್‌ನ ತಿರಾಹ್ ಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ನನ್ನ ಪರಿಸ್ಥಿತಿ ಏನಿತ್ತು, ಮತ್ತು ನಾನು ಈ ಪರಿಸ್ಥಿತಿಯಲ್ಲಿ ಯಾಕೆ ಈ ನಿರ್ಧಾರ ಕೈಗೊಂಡೆ ಎಂದು ವಿವರಿಸಲು ಟಿವಿ ಚಾನೆಲ್ ತನ್ನ ವರದಿಗಾರರನ್ನು ಕಳುಹಿಸುವವರೆಗೆ ನಾನು ಅಪಾರ್ಟ್ಮೆಂಟ್ ಬಿಟ್ಟು ಬರುವುದಿಲ್ಲ ಎಂದು ಆ ವ್ಯಕ್ತಿ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಇದೆಲ್ಲವೂ ನಾನು ಮಾಡಿದ್ದು ಆ ನನ್ನ ಮೂವರು ಹುಡುಗಿಯರ ಸಲುವಾಗಿ. ಜೀವನ ಎಷ್ಟು ಸುಂದರ ಅಥವಾ ಕೊಳಕು ಎಂದು ಲೆಕ್ಕಿಸದೆ ನಾನು ಅವರೊಂದಿಗೆ ಇರಲು ಬಯಸುತ್ತೇನೆ. ನಾನು ನನ್ನ ಮಕ್ಕಳೊಂದಿಗೆ ಬದುಕಲು ಬಯಸುತ್ತೇನೆ, ಯಾರೂ ನನ್ನ ಮೇಲೆ ಕರುಣೆ ತೋರಿಸಲಿಲ್ಲ, ದೂರದರ್ಶನ ಚಾನೆಲ್‌ಗಳು ಬಂದು ರೆಕಾರ್ಡ್ ಮಾಡುವ ಮೊದಲು ನಾನು ನನ್ನ ಅಪಾರ್ಟ್ಮೆಂಟ್ ಅನ್ನು ಬಿಡುವುದಿಲ್ಲ. ನಾನು ನಿಜವಾಗಿಯೂ ಯಾರು ಮತ್ತು ಇದನ್ನು ಮಾಡಲು ಯಾವುದು ನನ್ನನ್ನು ಪ್ರೇರೇಪಿಸಿತು ಎಂಬುದನ್ನು ಜನರು ತಿಳಿದುಕೊಳ್ಳಲು ಸಂದರ್ಶನ ನೀಡುವುದು ಅಗತ್ಯ ಎಂದು ಆ ವ್ಯಕ್ತಿ ಬೇಡಿಕೆ ಇಟ್ಟಿದ್ದಾನೆ.
ಟಿಕ್‌ಟಾಕ್‌ನಲ್ಲಿ ಚಿತ್ರೀಕರಿಸಲಾದ ವೀಡಿಯೊದ ಇನ್ನೊಂದು ಭಾಗದಲ್ಲಿ, ಆ ವ್ಯಕ್ತಿಯ ಹಿಂದೆ ಮೂವರು ಭಯ ಭೀತರಾದ ಆತನ ಹುಡುಗಿಯರನ್ನು ನೋಡಬಹುದು. ಆ ಇಬ್ಬರು ಮಕ್ಕಳು ಇರುವ ಹಾಗೆಯೇ ಅವರ ಅಮ್ಮನ ತಲೆ ಕಡಿದಿದ್ದ ಆ ಅಪ್ಪ. ಅವರಲ್ಲಿ ಇಬ್ಬರು ಎದ್ದು ಕ್ಯಾಮೆರಾ ಎದುರಿಸುತ್ತಿದ್ದರೆ ಮತ್ತು ಮೂರನೆಯವರು ಹಾಸಿಗೆಯಲ್ಲಿ ಮಲಗಿದ್ದಳು.
ಸಂತ್ರಸ್ತೆಯ ತಂದೆಯ ಪ್ರಕಾರ, ಅವರ ಮಗಳು ಒಂಬತ್ತು ವರ್ಷಗಳ ಹಿಂದೆ ಅಜೌಜ್ ಅವರನ್ನು ವಿವಾಹವಾಗಿದ್ದ. ಆದರೆ ಅವನಿಂದ ವಿಚ್ಛೇದನವನ್ನು ಪಡೆಡಿದ್ದ. ಆದರೆ ಇತ್ತೀಚಿಗೆ ಮಕ್ಕಳ ಸಲುವಾಗಿ ಅವರನ್ನು ಮರು ಮದುವೆಯಾದರು. ಕೊಲೆಗಾರ ಅಜೌಜ್ ಇತ್ತೀಚೆಗೆ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ. ಮತ್ತು ತನ್ನನ್ನು ಮದುವೆಯಾಗುವಂತೆ ತನ್ನ ಮಾಜಿ ಪತ್ನಿಯನ್ನು ಬೇಡಿಕೊಂಡಿದ್ದ. ಮರುಮದುವೆ ಆದ ನಂತರ ಒಟ್ಟಿಗೆ ವಾಸಿಸಲು ಶುರುಮಾಡಿದರು. ಅವರು ಈ ತಿಂಗಳ ಆರಂಭದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅಜೌಜ್ ಡ್ರಗ್ಸ್ ಸೇವಿಸಿದ್ದ ಎಂದು ಸಂತ್ರಸ್ತೆಯ ತಂದೆ ಹೇಳಿಕೆ ನೀಡಿದ್ದು, ತನ್ನ ಮಗಳನ್ನು ಏಕೆ ಕೊಂದಿದ್ದಾನೆ ಎಂಬ ಬಗ್ಗೆ ಖಚಿತ ಕಾರಣ ಮತ್ತು ಸುಳಿವು ಸಿಕ್ಕಿಲ್ಲ ಎಂದು ಮೃತಳ ಅಪ್ಪ ಹೇಳಿದ್ದಾರೆ.