7th Pay Commission: ಕೇಂದ್ರ ಸರ್ಕಾರಿ ನೌಕರರೇ ನಿಮಗೊಂದು ಮುಖ್ಯವಾದ ಮಾಹಿತಿ | ಈ ಸೌಲಭ್ಯ ಕಡಿತ ಸಾಧ್ಯತೆ

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದ್ದು, ಇದು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಎಲ್ಲ ನೌಕರರಿಗೂ ಅನ್ವಯವಾಗಿತ್ತು. ಕೇಂದ್ರ ನೌಕರರ ಡಿಎ ಹೆಚ್ಚಳದ ಬಳಿಕ ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದು, ಇದರಿಂದ ನೌಕರರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಉದ್ಯೋಗಿಗಳು 2023ರ DA ಹೆಚ್ಚಳಕ್ಕಾಗಿ ಎದುರು ನೋಡುತ್ತಿದ್ದು ಈ ನಡುವೆ ಮಾರ್ಚ್ 31ರ ನಂತರ ಕೇಂದ್ರ ನೌಕರರಿಗೆ ಶಾಕ್ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. 7 ನೇ ವೇತನ ಆಯೋಗದ ಶಿಫಾರಸುಗಳ ಅನುಸಾರ ಅನೇಕ ಪ್ರಯೋಜನಗಳು ಕೇಂದ್ರ ನೌಕರರಿಗೆ ಲಭ್ಯವಿದ್ದು, ಅದರಲ್ಲಿ ಮನೆ ನಿರ್ಮಾಣ ಮುಂಗಡ ಕೂಡ ಒಂದಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಗೃಹ ಸಾಲ ಪಡೆಯಲು ಈ ಯೋಜನೆ ಉಪಯುಕ್ತವಾಗಿದ್ದು ಅಲ್ಲದೆ ಗೃಹ ಸಾಲಗಳು ಕಡಿಮೆ ಬಡ್ಡಿದರದಲ್ಲಿ ಲಭ್ಯವಾಗುತ್ತವೆ.

ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಗೃಹ ನಿರ್ಮಾಣ ಮುಂಗಡವನ್ನು ಶೇ 7.1 ವಾರ್ಷಿಕ ಬಡ್ಡಿ ದರದಲ್ಲಿ ಗೃಹ ಸಾಲವನ್ನು ಪಡೆಯುತ್ತಿದ್ದು ಈ ಬಡ್ಡಿ ದರವು 31 ಮಾರ್ಚ್ 2023 ರವರೆಗೆ ಅನ್ವಯವಾಗಲಿದೆ. ಈ ಹಿಂದೆ ಬಡ್ಡಿ ದರ ಹೆಚ್ಚಿದ್ದು ಕೇಂದ್ರ ಸರ್ಕಾರವು 2022-23ನೇ ಹಣಕಾಸು ವರ್ಷದ ಬಡ್ಡಿ ದರವನ್ನು ಕಡಿಮೆ ಮಾಡಿದೆ.

ಮಾರ್ಚ್ 31, 2023 ರವರೆಗೆ ಸರ್ಕಾರವು ಕಡಿಮೆಗೊಳಿಸುವುದರ ಜೊತೆಗೆ ಗೃಹ ನಿರ್ಮಾಣದ ಮುಂಗಡಗಳನ್ನು 7.1 ಶೇಕಡಾ ವಾರ್ಷಿಕ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು. ಆದರೆ ಈ ಬಡ್ಡಿ ದರ ಮಾರ್ಚ್ 31ರ ನಂತರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಹಣಕಾಸು ವರ್ಷದಿಂದ ಮನೆ ನಿರ್ಮಾಣದ ಮುಂಗಡ ಬಡ್ಡಿ ದರವನ್ನು ಕೇಂದ್ರ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರಿ ನೌಕರರು ಮನೆ ನಿರ್ಮಾಣ ಮುಂಗಡ ನಿಯಮಗಳ ಪ್ರಕಾರ ಬಡ್ಡಿ ಸಹಿತ ಮುಂಗಡಗಳಿಗೆ ಅರ್ಹರಾಗಿರಿದ್ದು ಹೊಸ ಮನೆ ನಿರ್ಮಿಸಲು, ಪ್ಲಾಟ್ ಖರೀದಿಸಲು, ವಾಸಸ್ಥಳವನ್ನು ವಿಸ್ತರಿಸಲು, ಹೌಸಿಂಗ್ ಬೋರ್ಡ್ ಗಳು, ಅಭಿವೃದ್ಧಿ ಅಧಿಕಾರಿಗಳು, ನೋಂದಾಯಿತ ಬಿಲ್ಡರ್ಗಳು ಇತ್ಯಾದಿಗಳಿಂದ ಮೊದಲೇ ನಿರ್ಮಿಸಲಾದ ಮನೆಗಳು ಅಥವಾ ಅಪಾರ್ಟ್ಮೆಂಟ್ ಗಳನ್ನು ಖರೀದಿಸಲು ಮುಂಗಡಗಳನ್ನು ತೆಗೆದುಕೊಳ್ಳಲು ಅವಕಾಶವಿದೆ.

ಹೌಸ್ ಬಿಲ್ಡಿಂಗ್ ಅಡ್ವಾನ್ಸ್ 2017 ರ ನಿಯಮಗಳ ಅನುಸಾರ, ಕೇಂದ್ರ ಸರ್ಕಾರಿ ನೌಕರರು 34 ತಿಂಗಳ ಮೂಲ ವೇತನವನ್ನು ಮನೆ ನಿರ್ಮಾಣ ಮುಂಗಡವಾಗಿ ಪಡೆದುಕೊಳ್ಳಬಹುದಾಗಿದೆ. ಗರಿಷ್ಠ ಮಿತಿ ರೂ.25 ಲಕ್ಷಗಳಾಗಿದ್ದು, 25 ಲಕ್ಷದೊಳಗಿನ ಮನೆ ಇಲ್ಲವೇ ಅಪಾರ್ಟ್ ಮೆಂಟ್ ಖರೀದಿಸಿದರೆ ಅಷ್ಟು ಮೊತ್ತಕ್ಕೆ ಮಾತ್ರ ಸಾಲ ದೊರೆಯಲಿದೆ. ಅಸ್ತಿತ್ವದಲ್ಲಿರುವ ಮನೆಯನ್ನು ವಿಸ್ತರಿಸಲು ಮನೆ ನಿರ್ಮಾಣದ ಮುಂಗಡವನ್ನು ಕೂಡ ಬಳಸಬಹುದಾಗಿದೆ.

ಈ ನಿಬಂಧನೆಯ ಅನುಸಾರ, 34 ತಿಂಗಳ ಮೂಲ ವೇತನವು ಮನೆ ನಿರ್ಮಾಣ ಮುಂಗಡವಾಗಿ ಲಭ್ಯವಿದ್ದು, ಗರಿಷ್ಠ ಮಿತಿ ರೂ.10 ಲಕ್ಷವಾಗಿದೆ. ಎಚ್ ಬಿಎ ಪಡೆಯಲು ಕನಿಷ್ಠ 10 ವರ್ಷಗಳ ನಿರಂತರ ಸೇವೆಯ ಅತ್ಯಗತ್ಯವಾಗಿದ್ದು ಆದರೆ ಆಯೋಗ ಅದನ್ನು 5 ವರ್ಷಕ್ಕೆ ಇಳಿಸಲು ಶಿಫಾರಸು ಮಾಡಿದೆ.

ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಇಬ್ಬರಿಗೂ ಪ್ರತ್ಯೇಕ ಎಚ್ ಬಿಎಯನ್ನು ಅನುಮತಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರಿ ನೌಕರರು ಮಾರ್ಚ್ 31, 2023 ರವರೆಗೆ 7.1 ಪ್ರತಿಶತದವರೆಗೆ ಮನೆ ನಿರ್ಮಾಣ ಮುಂಗಡವನ್ನು ಪಡೆಯಬಹುದಾಗಿದ್ದು, ಹೀಗಾಗಿ ಕಡಿಮೆ ಬಡ್ಡಿಯ ಸಾಲವನ್ನು ಪಡೆಯಬಹುದು. ಆ ನಂತರ ಬಡ್ಡಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.