ಇನ್ಮುಂದೆ ವಾಟ್ಸಪ್ ನಲ್ಲಿ ಸುಲಭವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸಬಹುದು | ಹೇಗೆ? ಇಲ್ಲಿದೆ ವಿವರ
ಇತ್ತೀಚೆಗೆ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ಸ್ ಗಳು ಅಪ್ಡೇಟ್ ಆಗುತ್ತಿವೆ. ವಾಟ್ಸಪ್ ಕಾಲ್, ಮೇಸೇಜ್ ಗಳಿಗೆ ಮಾತ್ರವಲ್ಲದೆ ಹಲವು ಪ್ರಯೋಜನಗಳಿಂದ ಕೂಡಿದೆ. ವಿವಿಧ ರೀತಿಯಲ್ಲಿ ತನ್ನ ವೈಶಿಷ್ಟ್ಯವನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಹಾಗೇ ಇದೀಗ ವಾಟ್ಸಪ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸದ್ಯ ವಾಟ್ಸಪ್ ನಲ್ಲಿ ಭಾರತೀಯ ಗ್ರಾಹಕರಿಗೆ ಉಚಿತ ಕ್ರೆಡಿಟ್ ಸ್ಕೋರ್‌ಗಳನ್ನು ಒದಗಿಸಲು ಎಕ್ಸ್ಪೀರಿಯನ್ ಸೇವೆಯನ್ನು ಪ್ರಕಟಿಸಿದೆ. ಪರವಾನಗಿ ಪಡೆದ ಭಾರತದ ಮೊದಲ ಕ್ರೆಡಿಟ್ ಬ್ಯೂರೋ ಕಂಪನಿ ಎಕ್ಸ್ ಪೀರಿಯನ್ ಇಂಡಿಯಾ, ಇಂತಹ ಸೇವೆಯನ್ನು ನೀಡುವ ಬಗ್ಗೆ ಇತ್ತೀಚೆಗೆ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ ಗಳು ವ್ಯಕ್ತಿಗೆ ಸಾಲ ನೀಡುವ ಮೊದಲು ಅವರ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ. ಈ ಕ್ರೆಡಿಟ್ ಸ್ಕೋರ್ ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಬಡ್ಡಿದರಗಳಲ್ಲಿ ರಿಯಾಯಿತಿ ಪಡೆಯಲು ಮುಖ್ಯವಾಗಿರುತ್ತದೆ. ಆದರೆ ಇದರ ಪರಿಶೀಲನೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ, ಡೇಟಾ ಅನಾಲಿಟಿಕ್ಸ್ ಮತ್ತು ನಿರ್ಧಾರ ಸಂಸ್ಥೆ ಎಕ್ಸ್ಪೀರಿಯನ್ ಇಂಡಿಯಾ ವಾಟ್ಸಪ್ ನಲ್ಲಿ ಉಚಿತ ಕ್ರೆಡಿಟ್ ಸ್ಕೋರ್ ವರದಿಗಳನ್ನು ನೀಡಲು ಪ್ರಾರಂಭಿಸಿದೆ. ಇದರಿಂದ ನೀವು ವಾಟ್ಸಪ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ.
ಇದರಲ್ಲಿ ನೀವು ಸೆಕೆಂಡುಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ವರದಿಯನ್ನು ಪಡೆಯಬಹುದು. ಹೇಗೆ? ಎಂಬುದು ಇಲ್ಲಿದೆ.
- ವಾಟ್ಸಪ್ ಬಳಕೆದಾರರು ಮೊದಲು ಎಕ್ಸ್‌ಪೀರಿಯನ್ ಇಂಡಿಯಾದ ವಾಟ್ಸಪ್ ಸಂಖ್ಯೆಯಾದ 9920035444 ಅನ್ನು ಸೇವ್ ಮಾಡಬೇಕು.
- ನಂಬರ್ ಸೇವ್ ಮಾಡಿದ ನಂತರ ಈ ಸಂಖ್ಯೆಗೆ ‘ಹಾಯ್’ ಎಂದು ವಾಟ್ಸಪ್ ನಲ್ಲಿ ಮೆಸೇಜ್ ಕಳಿಸಿ.
- ನಂತರ ನಿಮ್ಮ ಹೆಸರು, ನೋಂದಾಯಿತ ಇಮೇಲ್ ಐಡಿ, ಪೋನ್ ಸಂಖ್ಯೆ ಸೇರಿದಂತೆ ಕೆಲವು ವಿವರಗಳನ್ನು ಕಳುಹಿಸಬೇಕು. ಈ ವಿವರಗಳು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಖಾತೆಯಲ್ಲಿರುವಂತೆ ಇರಬೇಕು. ಅಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿರುವ ಹೆಸರು ಮತ್ತು ನೀವು ಕಳುಹಿಸುವ ಹೆಸರು ಒಂದೇ ರೀತಿ ಇರಬೇಕು.
- ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಪಾಸ್‌ವರ್ಡ್ ಸೇಫ್ಟಿಯ ಜೊತೆಗೆ ಎಕ್ಸ್ಪೀರಿಯನ್ ಕ್ರೆಡಿಟ್ ವರದಿಯನ್ನು ಕೇಳಿ, ಬಳಿಕ ನೀವು ನಿಮ್ಮ ಕ್ರೆಡಿಟ್ ವರದಿಯನ್ನು ಅತಿಬೇಗನೆ ಮತ್ತು ಸುರಕ್ಷಿತವಾಗಿ ಪಡೆಯಬಹುದು.