Cuddling after sex : ಸೆಕ್ಸ್ ನಂತರ ಮುದ್ದಾಡುವುದು ಅಥವಾ ಕಡ್ಲಿಂಗ್ ಹೇಗೆ ಉತ್ತಮ ? ಈ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ
ಲೈಂಗಿಕ ತೃಪ್ತಿ ಸಹ ಜೀವನದ ಒಂದು ಭಾಗ ಆಗಿದೆ. ಲೈಂಗಿಕತೆ ಅನ್ನುವುದು ಕೆಲವರಿಗೆ ಭರವಸೆ ಮತ್ತು ನಂಬಿಕೆ ಹುಟ್ಟಿಸುವುದು. ಮನುಷ್ಯನಾದಮೇಲೆ ಅವನು ಸಂಘ ಜೀವಿಯಾಗಲು ಬಯಸುತ್ತಾನೆ ಮತ್ತು ಹತ್ತು ಹಲವಾರು ಆಸೆಗಳು ಭಾವನೆಗಳು ಇರುತ್ತವೆ. ಅದಲ್ಲದೆ ಸಾರ್ಥಕ ಲೈಂಗಿಕ ಜೀವನ ದಂಪತಿಗಳ ಸಂಬಂಧವನ್ನು ಬಲಪಡಿಸಲು ಮತ್ತು ಅವರ ನಡುವೆ ಬಾಂಧವ್ಯ ಬೆಸೆಯಲು ಸಹಾಯವಾಗುತ್ತದೆ.
ಜೊತೆಗೆ ಲೈಂಗಿಕ ಕ್ರಿಯೆಯ ನಂತರ ಆರಾಮದಾಯಕ ಅಪ್ಪುಗೆಗಾಗಿ ನಿಮ್ಮ ಸಂಗಾತಿಯೊಂದಿಗೆ ಗಟ್ಟಿಯಾಗಿ ತಬ್ಬಿಕೊಂಡು ಮಲಗೋದು ಆರೋಗ್ಯಕ್ಕೆ ಉತ್ತಮ. ನಿಮ್ಮ ಬಂಧ ಮತ್ತು ಆರೋಗ್ಯವನ್ನು ಹೆಚ್ಚಿಸಲು ಸೆಕ್ಸ್ ನಂತರ ಮುದ್ದಾಡುವುದು ಅಥವಾ ಕಡ್ಲಿಂಗ್ ಹೇಗೆ ಉತ್ತಮ ಎಂದು ಇಲ್ಲಿ ವಿವರಿಸಲಾಗಿದೆ.
ಲೈಂಗಿಕತೆಯ ನಂತರ ಮುದ್ದಾಡುವುದು ನಿಮ್ಮ ಬಂಧವನ್ನು ಬಲಪಡಿಸಲು ಸಹಾಯ ಮಾಡುವ ಅತ್ಯುತ್ತಮ ವಿಷಯ. ಹೌದು ಸಂಗಾತಿಯೊಂದಿಗೆ ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದರೆ, ಸೆಕ್ಸ್ ಬಳಿಕ ನಿಮ್ಮ ಕೆಲಸದಲ್ಲಿ ನೀವು ತೊಡಗುವುದು, ನಿದ್ರೆ ಮಾಡೋದು ಅಥವಾ ಎದ್ದು ಬೇರೆಲ್ಲೋ ಹೋಗೋದನ್ನು ಮಾಡಬೇಡಿ. ಬದಲಾಗಿ ಸೆಕ್ಸ್ ಬಳಿಕ ಸಂಗಾತಿಯನ್ನು ಗಟ್ಟಿಯಾಗಿ ಹಿಡಿಯೋದು, ಅವರ ಜೊತೆಗೆ ಮಲಗೋದು, ಮುದ್ದಾಡುವುದು ಮುಖ್ಯವಾಗಿದೆ.
ಹೌದು ಲೈಂಗಿಕ ಕ್ರಿಯೆಯ ನಂತರ ಮುದ್ದಾಡುವುದು ಹಲವಾರು ಮಾನಸಿಕ ಮತ್ತು ದೈಹಿಕ ಪ್ರಯೋಜನಗಳನ್ನು ಹೊಂದಿದೆ ಮತ್ತು ನಿಮ್ಮ ಸಂಬಂಧದ ಆರೋಗ್ಯ ಸಹ ಸುಧಾರಿಸಬಹುದು. ಲೈಂಗಿಕ ಕ್ರಿಯೆಯ ನಂತರ ಕಡಲಿಂಗ್ ಮಾಡೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯಿರಿ.
- ಅಧ್ಯಯನದ ಪ್ರಕಾರ, ಆಕ್ಸಿಟೋಸಿನ್ ಆತಂಕದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮನ್ನು ಸುಲಭವಾಗಿ ನಿದ್ರಿಸುವಂತೆ ಮಾಡುತ್ತದೆ. ಮನಸ್ಸು ಸಂತೋಷವಾಗಿರುವಂತೆ ನೋಡಿಕೊಳ್ಳಲು ಈ ಹಾರ್ಮೋನ್ ಸಹಾಯ ಮಾಡುತ್ತೆ.
- ದೇಹದಲ್ಲಿ ಸೆರೊಟೋನಿನ್ ಮತ್ತು ಡೋಪಮೈನ್ ಹೆಚ್ಚಿಸಲು ಮುದ್ದಾಡುವಿಕೆ ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಹಾನಿಕಾರಕ ಸೋಂಕುಗಳಿಂದ ರಕ್ಷಿಸಲು ಇದು ಲವ್ ಹಾರ್ಮೋನುಗಳೊಂದಿಗೆ ಕೆಲಸ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯ ರೋಗಗಳು ಕಾಡೋದಿಲ್ಲ.
- ತಬ್ಬಿಕೊಳ್ಳುವು ಅಥವಾ ನಿಮ್ಮ ಸಂಗಾತಿಯನ್ನು ಆವರಿಸಿಕೊಂಡು ಮಲಗೋದರಿಂದ ದೇಹದಲ್ಲಿ ಆಕ್ಸಿಟೋಸಿನ್ ಅಥವಾ ಪ್ರೀತಿಯ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪರಾಕಾಷ್ಠೆಯ ಸಮಯದಲ್ಲಿ ಇದರ ಸ್ರವಿಸುವಿಕೆಯು ಹೆಚ್ಚಾಗುತ್ತದೆ, ಮತ್ತು ಇದು ನಿಮ್ಮ ಮೂಡ್ ಹೆಚ್ಚಿಸುವಲ್ಲಿ ಮತ್ತು ಸಂಗಾತಿಯ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತೆ.
- ಆಕ್ಸಿಟೋಸಿನ್, ಇದನ್ನು ಲವ್ ಹಾರ್ಮೋನ್ ಅಥವಾ ಬಾಂಡಿಂಗ್ ಹಾರ್ಮೋನ್ ಎಂದೂ ಕರೆಯಲಾಗುತ್ತದೆ, ಇದು ಸಂಗಾತಿ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ. ಲೈಂಗಿಕ ಕ್ರಿಯೆಯ ನಂತರ ಮುದ್ದಾಡುವುದು ನಿಮಗೆ ಆತ್ಮವಿಶ್ವಾಸ ಮತ್ತು ಆರಾಮದಾಯಕ ಅನುಭವ ನೀಡುತ್ತದೆ. ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಬಯಸಿದರೆ, ಲೈಂಗಿಕತೆಯು ಉತ್ತಮ ಆಯ್ಕೆಯಾಗಿದೆ.
- ಸಂಗಾತಿಯೊಂದಿಗೆ ಬೆರೆಯುವುದರಿಂದ ಆಕ್ಸಿಟೋಸಿನ್ ಅಂದರೆ ನಿಮ್ಮ ದೇಹದಲ್ಲಿ ಪ್ರೀತಿಯ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಆಕ್ಸಿಟೋಸಿನ್ ಸ್ರವಿಸುವಿಕೆಯು ನಿಮ್ಮ ಮೂಡ್ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ. ಇದರಿಂದ ಲೈಂಗಿಕ ಜೀವನ ಮತ್ತಷ್ಟು ಹಿತವಾಗಿರುತ್ತೆ.
- ಅಧಿಕ ರಕ್ತದೊತ್ತಡವು ಹೃದಯಾಘಾತದ ಸಮಸ್ಯೆಗಳನ್ನು ಉಂಟುಮಾಡಬಹುದು. ಮುದ್ದಾಡುವುದು ಮತ್ತು ತಬ್ಬಿಕೊಳ್ಳುವುದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಸಂಗಾತಿಯೊಂದಿಗೆ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಹೆಚ್ಚಿನ ಜನರು ಒತ್ತಡದಿಂದ ತೊಂದರೆಗೀಡಾಗಿದ್ದಾರೆ. ಲೈಂಗಿಕತೆಯ ನಂತರ ತಬ್ಬಿಕೊಳ್ಳುವುದು ಒತ್ತಡವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. ಅಪ್ಪುಗೆಯಿಂದ ಬಿಡುಗಡೆಯಾಗುವ ಆಕ್ಸಿಟೋಸಿನ್ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ರೀತಿಯಾಗಿ ನೀವು ನಿಮ್ಮ ಸಂಗಾತಿಯನ್ನು ಲೈಂಗಿಕತೆ ನಂತರ ಮುದ್ದಿಸುವುದರಿಂದ ನಿಮ್ಮ ಸಂಗಾತಿ ಜೊತೆಗಿನ ಸಂಬಂಧ ಇನ್ನೂ ಗಟ್ಟಿಯಾಗಲಿವೆ.