Viral Video : ಏನೂ ಖರ್ಚಿಲ್ಲದೆ ಲಭ್ಯವಾಗುತ್ತೆ ಜಿಮ್ ಮಾಡುವ ‘ಥ್ರೆಡ್ ಮಿಲ್ ‘ | ಆನಂದ್ ಮಹೀಂದ್ರಾರನ್ನು ಆಕರ್ಷಿಸಿದ ಈ ವಿನೂತನ ಯಂತ್ರ !
ಜೀವನದಲ್ಲಿ ಹೊಸತೇನಾದರು ಸಾಧಿಸಬೇಕೆಂದು ಹೆಚ್ಚಿನವರು ಯೋಚಿಸುತ್ತಾರೆ. ಹೀಗಿರುವಾಗ ನಾವು ಎಷ್ಟೇ ಪ್ರಯತ್ನಿಸಿದರೂ ಅಂದುಕೊಂಡದ್ದು ಸಾಧ್ಯವಾಗುವುದಿಲ್ಲ. ಆದರೆ ಇನ್ನು ಕೆಲವೊಮ್ಮೆ, ನಾವು ಸುಮ್ಮನೆ ಏನಾದರೂ ಪ್ರಯೋಗಾತ್ಮಕವಾಗಿ ಮಾಡಿದಾಗ ಅದುವೇ ನಮಗೆ ಸೂಪರ್ ಸಕ್ಸಸ್ ಅನ್ನು ತಂದು ಕೊಡುತ್ತದೆ. ಅಂತದೇ ಒಂದು ಘಟನೆ ಇತ್ತೀಚೆಗೆ ಒಬ್ಬ ವ್ಯಕ್ತಿಯಿಂದ ನಡೆದಿದ್ದು, ಅದನ್ನು ಗಮನಿಸಿದ ಆನಂದ್ ಮಹೀಂದ್ರ ಅವರು ಆ ವ್ಯಕ್ತಿಯೇ ವರ್ಷದ ನಾವಿನ್ಯತೆ ಪ್ರಶಸ್ತಿ ಪಡೆಯಬೇಕೆಂದು ಅಪೇಕ್ಷಿಸುತ್ತಾರೆ. ಹಾಗಾದರೆ ಆ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಒಬ್ಬ ವ್ಯಕ್ತಿ ಹಂಚಿಕೊಂಡ ವಿಡಿಯೋ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದನ್ನು ಗಮನಿಸಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾರನ್ನು ಕೂಡ ಬೆಚ್ಚಿ ಬೀಳಿಸುವಂತೆ ಮಾಡಿದೆ. ಅಲ್ಲದೆ ಆನಂದ್ ಮಹೀಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ನೋಡುಗರಿಗೂ ಅದು ಆಶ್ಚರ್ಯ ಉಂಟುಮಾಡುತ್ತದೆ.
ಹೌದು, ವ್ಯಕ್ತಿಯೊಬ್ಬ ತಮ್ಮ ಮನೆಯಲ್ಲಿ ಕೆಲವು ಹನಿ ಡಿಶ್‌ವಾಶ್ ದ್ರವವನ್ನು ನೆಲದ ಮೇಲೆ ಸುರಿಯುವುದರ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಅವನು ಕೆಲವು ಹನಿ ನೀರನ್ನು ನೆಲದ ಮೇಲೆ ಸುರಿದ ಡಿಶ್ ವಾಶ್ ಹನಿಗಳಿಗೆ ಸೇರಿಸುತ್ತಾನೆ ಮತ್ತು ನೆಲವನ್ನು ಜಾರುವಂತೆ ಮಾಡುತ್ತಾನೆ. ವೀಡಿಯೊ ಮುಂದುವರಿದಂತೆ ಆ ವ್ಯಕ್ತಿಯು, ನಾವು ಸಾಮಾನ್ಯವಾಗಿ ಜಿಮ್ ಗಳಲ್ಲಿರುವ ಟ್ರೆಡ್‌ಮಿಲ್‌ನ ಜಾರು ಮೇಲ್ಮೈಯಲ್ಲಿ ಹೇಗೆ ನಡೆಯುತ್ತೇವೆಯೋ ಹಾಗೇ ನಡೆಯಲು ಪ್ರಾರಂಬಿಸುತ್ತಾನೆ. ಬರ ಬರುತ್ತ ಅದು ತುಂಬಾ ಸ್ಪೀಡ್ ಕೂಡ ಆಗುತ್ತದೆ. ಕೊನೆಗಂತೂ ಆತ ತಾನು ಟ್ರೆಡ್‌ಮಿಲ್ ಮೇಲೆಯೇ ಇದ್ದೇನೆ ಎಂಬಂತೆ ಆರಾಮಾಗಿ ನಡೆಯುತ್ತಾನೆ.
ಮಹೀಂದ್ರಾ ಸಮೂಹದ ಅಧ್ಯಕ್ಷರು ‘ಕಡಿಮೆ ವೆಚ್ಚದ’ ಟ್ರೆಡ್‌ಮಿಲ್ ಅನ್ನು ಕಂಡು ಅದಕ್ಕೆ ಫಿದಾ ಆಗಿದ್ದು, ಆ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವರ್ಷದ ನಾವೀನ್ಯತೆ ಪ್ರಶಸ್ತಿ ಅಂದರೆ ವರ್ಷದ ಇನ್ನೋವೇಶನ್ ಅವಾರ್ಡ್ ಟ್ರೋಫಿಯು ಕೂಡ ಕಡಿಮೆ ವೆಚ್ಚದ ಟ್ರೆಡ್‌ಮಿಲ್ ಅನ್ನು ಕಂಡು ಹಿಡಿದ ಈ ವ್ಯಕ್ತಿಗೆ ಸೇರಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸುತ್ತಾರೆ.
ಸದ್ಯ ಆ ವೀಡಿಯೊ 1.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ಈ ವ್ಯಕ್ತಿಯ ತಂತ್ರದಿಂದ ಪ್ರಭಾವಿತರಾಗಿದ್ದು, ನಾವೂ ಕೂಡ ಪ್ರಯತ್ನಿಸಲು ಇದು ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ, ಕೆಲವರು ಉದ್ದೇಶಪೂರ್ವಕವಾಗಿ ನೆಲವನ್ನು ಜಾರುವಂತೆ ಮಾಡುವುದು ಕೆಲವು ಅನಗತ್ಯ ಅಪಘಾತಗಳಿಗೆ ಕಾರಣವಾಗಬಹುದು. ಹಾಗಾಗಿ ಜಾಗರೂಕರಾಗಿರಬೇಕು.
ವಿಡಿಯೋಗೆ ಸುಹೇಲ್ ಹಲೀಮ್ ಎಂಬುವವರು ಪ್ರತಿಕ್ರಿಯಿಸಿ ‘ನಾನು ಇದರ ಕುರಿತು ಎಚ್ಚರಿಕೆ ನೀಡುತ್ತಿದ್ದೇನೆ, ದಯವಿಟ್ಟು ಯಾರೂ ಕೂಡ ಇದನ್ನು ನಿಮ್ಮ ನಿಮ್ಮ ಮನೆಯಲ್ಲಿ ಪ್ರಯತ್ನಿಸಬಾರದು. ಒಂದು ವೇಳೆ ಪ್ರಯತ್ನಿಸಿದ್ದೇ ಆದಲ್ಲಿ ನಿಮ್ಮ ಮೂಗು, ಬಾಯಿ ರಕ್ತಸಿಕ್ತವಾಗುವುದರೊಂದಿಗೆ, ಕೆಲವು ಬೆರಳೆಣಿಕೆಯ ಹಲ್ಲುಗಳು ಮಾತ್ರ ನಿಮ್ಮೊಂದಿಗೆ ಉಳಿಯುತ್ತವೆ. ಆದರೆ ಇದು ವ್ಯಾಯಾಮದಿಂದ ನೀವು ಬಯಸಿದ ಫಲಿತಾಂಶವಲ್ಲ’ ಎಂದು ಎಚ್ಚರಿಸಿದ್ದಾರೆ.