Heart Attack : 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Share the Article

ಕೆಲವೊಮ್ಮೆ ವಿಧಿಯ ಆಟ ಅರಿಯಲು ಅಸಾಧ್ಯ. ವಿಧಿಯ ಕ್ರೂರತೆಗೆ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಹೌದು!!! ಶಿವಮೊಗ್ಗದಲ್ಲಿ ಶಾಲೆಗೆ ಹೋಗಲು ತಯಾರಾಗುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತ ಪಟ್ಟ ಘಟನೆ ನಡೆದಿದೆ.

ಅರಳಬೇಕಿದ್ದ ಹೂವೊಂದು ಅರಳುವ ಮುನ್ನವೇ ಕಾಲದ ಕರೆಗೆ ಓಗೊಟ್ಟು ಇಹಲೋಕದ ಪಯಣ ಮುಗಿಸಿದ ಘಟನೆ ನಡೆದಿದೆ. ರಾಜ್ಯದಲ್ಲಿ ಮಕ್ಕಳಲ್ಲಿ, ಯುವಕರಲ್ಲಿ ಹೃದಯಾಘಾತದಿಂದ ನಿಧನರಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಲೇ ಇವೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದ್ದು, 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ದುರ್ದೈವಿ ಎನ್ನಲಾಗಿದ್ದು ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದ್ದು, ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಜವರಾಯನ ಮನೆಗೆ ತೆರಳಿದ ಘಟನೆ ನಡೆದಿದೆ.

ಜಯಂತ್ ಎದ್ದಿನಂತೆ ಬೆಳಗ್ಗೆ ಎದ್ದು ಇಂದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ ಎನ್ನಲಾಗಿದ್ದು, ಈ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ , ತಕ್ಷಣವೇ ಜಯಂತ್​ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ, ಈ ನಡುವೆಯೇ ಜಯಂತ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು, ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಇದೀಗ, ಬಾಲಕನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.