‘BHIM UPI’ ವಹಿವಾಟುಗಳಿಗೆ ಪ್ರೋತ್ಸಾಹಧನ – ಕೇಂದ್ರ ಸಚಿವ ಸಂಪುಟ ಅನುಮೋದನೆ

ಇದೀಗ ಮೋದಿ ನೇತೃತ್ವದಲ್ಲಿ ಮಹತ್ತರವಾದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸದ್ಯ ಸಣ್ಣ ಮೊತ್ತದ ಡಿಜಿಟಲ್ ವಹಿವಾಟಿಗೆ 2600 ಕೋಟಿ ರೂ.ಗಳ ಪ್ರೋತ್ಸಾಹಧನ ನೀಡಲು ಮೋದಿ ಸಂಪುಟ ಅನುಮೋದನೆ ನೀಡಿದೆ. BHIM UPI ನಿಂದ ವಹಿವಾಟುಗಳ ಮೇಲೆ ಪ್ರೋತ್ಸಾಹ ಲಭ್ಯವಿರುತ್ತದೆ ಮತ್ತು ಇದರೊಂದಿಗೆ ಮೂರು ಬಹುಹಂತದ ಸಹಕಾರಿ ಸಂಘಗಳನ್ನ ರಚಿಸಲು ಸಂಪುಟ ಸಭೆ ನಿರ್ಧರಿಸಿದೆ.

 

ಜೊತೆಗೆ ಈಗಾಗಲೇ ಪ್ರಧಾನಿ ಉಚಿತ ಆಹಾರ ಯೋಜನೆಯ ಹೆಸರನ್ನು ಬದಲಾಯಿಸಲು ಮೋದಿ ಸಂಪುಟ ನಿರ್ಧರಿಸಿದ್ದು ಇನ್ನು ಮುಂದೆ ಕಾರ್ಯಕ್ರಮದ ಹೆಸರು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಾಗಿದೆ. ಈ ಕುರಿತು ಹಿಂದಿನ ಸಚಿವ ಸಂಪುಟದಲ್ಲಿ ಉಚಿತ ಆಹಾರ ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿತ್ತು ಎಂದು ಮಾಹಿತಿ ನೀಡಲಾಗಿದೆ.

ಸದ್ಯ ಆಹಾರ ಯೋಜನೆ ಡಿಸೆಂಬರ್ 31ರಂದು ಕೊನೆಗೊಳ್ಳುತ್ತಿತ್ತು ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಏಪ್ರಿಲ್ 2020ರಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನ ಪ್ರಾರಂಭಿಸಲಾಯಿತು. ಇದನ್ನ ಒಂದು ವರ್ಷದವರೆಗೆ ವಿಸ್ತರಿಸಲಾಯಿತು ಎಂದು ಮಾಹಿತಿ ನೀಡಲಾಗಿದೆ.

ಇದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಕೇಂದ್ರ ಸರ್ಕಾರದ ಚಿಂತನೆ ಆಗಿದೆ. ಅಲ್ಲದೆ ಆಧುನಿಕರಣಗೊಳ್ಳುತ್ತಿರುವ ಸಮಾಜಕ್ಕೆ ಕೆಲವೊಂದು ಬದಲಾವಣೆಯ ಅಗತ್ಯವಿದ್ದು ಕೇಂದ್ರ ಸರ್ಕಾರದ ಈ ಬದಲಾವಣೆಗಳಿಗೆ ನಾವೆಲ್ಲರೂ ಬದ್ಧರಾಗಿಬೇಕಾಗುತ್ತದೆ.

Leave A Reply

Your email address will not be published.