ಚಿಕನ್ ಬಿರಿಯಾನಿ ತಿಂದು ಯುವತಿ ಸಾವು ಪ್ರಕರಣ : ಆತ್ಮಹತ್ಯೆ ಶಂಕೆ, ಪತ್ರ ವಶ

ಕೇರಳದ ಕಾಸರಗೋಡಿನಲ್ಲಿ ಇತ್ತೀಚೆಗೆ ಯುವತಿಯೊಬ್ಬಳು ಫುಡ್‌ ಪಾಯಿಸನ್‌ನಿಂದ ಸಾವನ್ನಪ್ಪಿರೋದಾಗಿ ಸುದ್ದಿಯೊಂದು ಪ್ರಕಟವಾಗಿತ್ತು. ಕಾಸರಗೋಡು ಸಮೀಪದ ಪೆರುಂಬಳ ನಿವಾಸಿ ಅಂಜು ಶ್ರೀಪಾರ್ವತಿ ಎಂಬ ಯುವತಿ ಡಿಸೆಂಬರ್ 31 ರಂದು ಕಾಸರಗೋಡಿನ ರೊಮ್ಯಾನ್ಸಿಯಾ ಎಂಬ ರೆಸ್ಟೊರೆಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಿದ ಕುಜಿಮಂಡಿಯನ್ನು ಸೇವಿಸಿದ್ದಾರೆ. ಆಹಾರ ಸೇವಿಸಿದ ನಂತರ ಅವರು ಅಸ್ವಸ್ಥಗೊಂಡ ಯುವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜನವರಿ 7ರಂದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರದಂದು ಆಕೆ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಈಗ ಹಲವು ಅನುಮಾನಗಳು ಮೂಡಿ ಬರುವಂತಹ ಸಾಕ್ಷ್ಯಾಧಾರಗಳು ದೊರಕಿವೆ ಎನ್ನಲಾಗಿದೆ.

 

ಉದುಮದಲ್ಲಿರುವ ಹೋಟೆಲ್‌ ಒಂದರಲ್ಲಿ ಆನ್‌ಲೈನ್‌ ಮೂಲಕ ಚಿಕನ್‌ ಆಹಾರ ಆರ್ಡರ್‌ ಮಾಡಿ ತಿಂದ ನಂತರ ಅಂಜುಶ್ರೀ ಸಾವಿಗೀಡಾಗಿದ್ದಳು ಎಂದು ಹೇಳಲಾಗಿತ್ತು. ಅಂಜುಶ್ರೀ ಈ ಆಹಾರ ತಿಂದ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರಾಗಿತ್ತು, ನಂತರ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಜುಶ್ರೀ ಮೃತ ಪಟ್ಟಿದ್ದಳು. ಆ ಸಮಯದಲ್ಲಿ ಇದು ಫುಡ್‌ಪಾಯಿಸನ್‌ನಿಂದ ಮೃತ ಹೊಂದಿದ್ದು ಎಂದು ಹೇಳಲಾಗಿತ್ತು. ಆದರೆ ಈಗ ನಡೆದಿರುವ ತನಿಖೆಯ ಆಧಾರದಿಂದ ಇದೊಂದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ ಬೆಳಕಿಗೆ ಬರ್ತಿದ್ದಂತೆ, ಸಂಬಂಧಪಟ್ಟ ಹೋಟೆಲ್‌ನಲ್ಲಿರುವ ನೀರು ಮತ್ತು ಆಹಾರ (Food)ವನ್ನು ಪರಿಶೀಲಿಸಲಾಯಿತು. ಈ ಘಟನೆ ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ. ದಿ.ಕುಮಾರನ್ ನಾಯರ್ – ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀ ಅವರು ತಾಯಿ ಅಲ್ಲದೆ ಸಹೋದರರನ್ನು ಅಗಲಿದ್ದಾರೆ. ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳು ಈ ಮಾಹಿತಿಯನ್ನೂ ಖಚಿತಪಡಿಸಿಲ್ಲ.

ಯುವತಿ ಕುಂಜಿಮತಿ ಬಿರಿಯಾಗಿ ಸೇವಿಸಿದ ನಂತರ ಮೃತಪಟ್ಟ ಕಾರಣ ಈಕೆ ಆಹಾರ ವಿಷದಿಂದ ಸಾವನ್ನಪ್ಪಿದ್ದಾಳೆ ಎಂದೇ ಊಹಿಸಲಾಗಿತ್ತು. ಕಾಸರಗೋಡು ಪೊಲೀಸ್ ಕಮಿಷನರ್ ವೈಭವ್ ಸಕ್ಸೇನಾ ಮಾತನಾಡಿ, ‘ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಆಂತರಿಕ ಅಂಗಗಳ ರಾಸಾಯನಿಕ ಪರೀಕ್ಷೆಯ ಫಲಿತಾಂಶ ಬಂದ ನಂತರವೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಬಹುದು’ ಎಂದು ಹೇಳಿದರು.

‘ಸಾಮಾನ್ಯ ವಿಷದಿಂದ ಸಾವು ಸಂಭವಿಸುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅವರು ಕೆಲವು ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಅದು ರಾಸಾಯನಿಕ ಪರೀಕ್ಷೆಯ ಫಲಿತಾಂಶಗಳೊಂದಿಗೆ ಹೊಂದಾಣಿಕೆಯಾಗಬೇಕು. ಆಕೆಯ ಯಕೃತ್ತು ತೀವ್ರವಾಗಿ ಹಾನಿಗೊಳಗಾಗಿತ್ತು. ಸಾಮಾನ್ಯ ಆಹಾರ ವಿಷದಲ್ಲಿ, ಇದು ಸಂಭವಿಸುವುದಿಲ್ಲ. ಅವರು ಡಿಸೆಂಬರ್ 31 ರಂದು ಆಹಾರವನ್ನು ಸೇವಿಸಿದರು ಮತ್ತು ಜನವರಿ 2ರಂದು ರೋಗಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿತ್ತು. ಆಹಾರ ವಿಷದ ಸಂದರ್ಭದಲ್ಲಿ, ಎರಡು ಮೂರು ಗಂಟೆಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ’ ಎಂದು ಪೊಲೀಸ್‌ ಕಮಿಷಬರ್ ಸಕ್ಸೇನಾ ಹೇಳಿದ್ದಾರೆ.

‘ನಾವು ವಶಪಡಿಸಿಕೊಂಡ ಪುರಾವೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಪತ್ರ ಸಿಕ್ಕಿದ್ದರೂ, ಅದನ್ನು ಅದೇ ಹುಡುಗಿ ಬರೆದಿದ್ದಾರೋ, ಈ ಸಮಯದಲ್ಲಿ ಅಥವಾ ಹಿಂದೆಯೇ ಬರೆದಿದ್ದಾ ಎಂದು ಪರಿಶೀಲಿಸಬೇಕು ಮತ್ತು ಇತರ ಹಲವು ಹೊಂದಾಣಿಕೆಯ ಅಂಶಗಳನ್ನು ಪರಿಶೀಲಿಸಬೇಕು. ಆದರೆ ರಾಸಾಯನಿಕ ಫಲಿತಾಂಶಗಳು ಹೊಂದಾಣಿಕೆಯಾದರೆ ಫುಡ್ ಪಾಯ್ಸನ್‌ ಅಲ್ಲ ಎಂಬುದನ್ನು ಹೇಳುವ ನಿರ್ಣಾಯಕ ಪುರಾವೆಗಳು ನಮ್ಮ ಬಳಿ ಇವೆ’ ಎಂದು ಅವರು ಹೇಳಿದರು.

Leave A Reply

Your email address will not be published.