3 ಬೈಕ್‌ಗಳಲ್ಲಿ 14 ಯುವಕರ ಪ್ರಯಾಣ, ಇಷ್ಟೇನಾ ಅಂತೀರಾ? ಮುಂದೇನಾಯ್ತು ಎಂಬ ಕುತೂಹಲ ಮಾಹಿತಿ ಇಲ್ಲಿದೆ

ಇತ್ತೀಚಿನ ಯುವಕ ಯುವತಿಯರು ಯಾವಾಗ ಯಾಕೆ ಏನು ಎಲ್ಲಿ ಹೇಗೆ ವರ್ತಿಸುತ್ತಾರೆ ಅನ್ನೋದು ತಿಳಿಯೋದಿಲ್ಲ. ಕೆಲವೊಮ್ಮೆ ಅವರ ಅಸಭ್ಯ ವರ್ತನೆ, ಹುಚ್ಚಾಟಗಳಿಂದ ಸಮಾಜಕ್ಕೆ ತೊಂದರೆ ಆಗಬಹುದು ಅನ್ನುವ ಪರಿಜ್ಞಾನ ಕೂಡ ಇರುವುದಿಲ್ಲ ಅನ್ನಿಸುತ್ತೆ. ಈ ವಯಸ್ಸೇ ಅಂಥದ್ದು, ಸಾಹಸವೇ ತನ್ನ ಅಸ್ತಿತ್ವ ಎನ್ನುವಷ್ಟು ಮೈಮರೆತು ತೂರಾಡುತ್ತಾರೆ .

ಇಲ್ಲೊಂದು ಕಡೆ ಮೂರು ಬೈಕ್​ಗಳಲ್ಲಿ ಒಟ್ಟು ಹದಿನಾಲ್ಕು ಜನರು ಚಲಿಸುತ್ತಿದ್ದಾರೆ. ಒಂದು ಬೈಕ್​ನಲ್ಲಿ ಆರು ಜನರು. ಇನ್ನೊಂದೆರಡು ಬೈಕ್​ ನಾಲ್ಕುನಾಲ್ಕು ಜನರು ಚಲಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ಧಾರೆ. ಅಂತೂ ಇವರನ್ನು ಇವರುಗಳ ಬೈಕುಗಳನ್ನ ಪತ್ತೆ ಹಚ್ಚಿ ಬೈಕುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪೊಲೀಸ್ ಮಾಹಿತಿ ಪ್ರಕಾರ ‘ಮಾಹಿತಿ ತಿಳಿಯುತ್ತಿದ್ದಂತೆ ಈ ಯುವಕರ ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈ ಯುವಕರ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬರೇಲಿಯ ಹಿರಿಯ ಪೊಲೀಸ್​ ಅಧಿಕಾರಿ ಅಖಿಲೇಶ್​ ಕುಮಾರ್ ಚೌರಾಸಿಯಾ ಎಎನ್​ಐ ಮಾಹಿತಿ ನೀಡಿದ್ದಾರೆ.

ಈ ವೀಡಿಯೋ ನೋಡಿದ ವೀಕ್ಷಕರು ಇಂತಹ ಪುಂಡರಿಗೆ ಸರಿಯಾಗಿ ಶಿಕ್ಷೆ ನೀಡಬೇಕು. ಜವಾಬ್ದಾರಿ ಇಲ್ಲದ ಇಂತಹ ಯುವಜನತೆ ಬಿಸಿ ಮುಟ್ಟಿಸದೆ ಇದ್ದರೆ ನಾಳಿನ ಭವಿಷ್ಯ ದ ಗತಿ ಏನು ಎಂದು ಹಲವರ ಅಭಿಪ್ರಾಯ ಆಗಿದೆ.

Leave A Reply

Your email address will not be published.