ಸ್ಮಾರ್ಟ್ ಫೋನ್ ರಿಸೆಟ್ ಮಾಡುವ ಅಗತ್ಯವಿಲ್ಲ | ಸ್ಟೋರೇಜ್ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ

ಇತ್ತೀಚಿಗೆ ಸ್ಮಾರ್ಟ್ ಫೋನಿನಲ್ಲಿ ಸ್ಟೋರೇಜ್ ಸಮಸ್ಯೆ ಅನ್ನೋದು ಎಲ್ಲರಿಗೂ ಇದ್ದೇ ಇದೆ. ವೀಡಿಯೋ, ಸಾಂಗ್,ಫೋಟೋಗಳನ್ನು ಸೇವ್ ಮಾಡಿಕೊಂಡು, ಸಿಕ್ಕ ಸಿಕ್ಕ ಅಪ್ಲಿಕೇಶನ್ ಮೊಬೈಲ್ ಲ್ಲಿ ತುಂಬಿಸಿ ಕೊನೆಗೆ ಸ್ಟೋರೇಜ್ ಫುಲ್ ಅನ್ನೋ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಸ್ಮಾರ್ಟ್​ಫೋನ್​ನ ಸ್ಟೋರೇಜ್​ ಫುಲ್​ ಆದಂತೆ ನಿಮ್ಮ ಮೊಬೈಲ್​ಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೌದು ಕೊನೆಗೆ ಮೊಬೈಲ್ ಹ್ಯಾಂಗ್ ಸಮಸ್ಯೆ ಅಂತ ಚಿಂತೆ ಮಾಡಬೇಕಾಗುತ್ತದೆ. ಆದರೆ ಸ್ಮಾರ್ಟ್‌ಫೋನ್ ರಿಸೆಟ್ ಮಾಡದೆಯೇ ಸ್ಟೋರೇಜ್ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ.

ಪ್ರತಿದಿನ ಸ್ಮಾರ್ಟ್‌ಫೋನ್‌ನಲ್ಲಿ ಬಹಳಷ್ಟು ಕ್ಯಾಶೆ ಸಂಗ್ರಹವಾಗುತ್ತಲೇ ಇರುತ್ತದೆ. ಇದರೊಂದಿಗೆ, ವೀಡಿಯೊಗಳು ಮತ್ತು ಫೋಟೋಗಳು ಕೂಡಾ ಸ್ಟೋರೇಜ್ ಖಾಲಿ ಮಾಡುತ್ತದೆ. ಹೀಗೆ ಸ್ಟೋರೇಜ್ ಫುಲ್ ಆಗುತ್ತಿದ್ದಂತೆಯೇ ಫೋನ್ ಹ್ಯಾಂಗ್ ಆಗುವ ಸಮಸ್ಯೆಯನ್ನು ಎದುರಿಸುತ್ತದೆ. ವೀಡಿಯೊ ಪ್ಲೇ ಮಾಡುವಾಗಲೂ ಸಮಸ್ಯೆ ಎದುರಾಗುತ್ತದೆ. ಹೀಗಾದಾಗ ಫೋನ್ ನಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.

ಈ ಅಪ್ಲಿಕೇಶನ್‌ ಮೂಲಕ ಸ್ಟೋರೇಜ್ ಖಾಲಿ ಮಾಡಬಹುದಾಗಿದೆ:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅತಿಯಾದ ಕ್ಯಾಶೆ ಸಂಗ್ರಹವಾಗಿದ್ದರೆ, ಜಂಕ್ ಫೈಲ್‌ಗಳು ಸಂಗ್ರಹವಾಗುತ್ತಿದ್ದರೆ, ಫೋಟೋಗಳು ಮತ್ತು ವೀಡಿಯೊಗಳು ಅತಿಯಾಗಿದ್ದರೆ, ಚಿಂತಿಸಬೇಕಾಗಿಲ್ಲ. ಒಮ್ಮೊಮ್ಮೆ ಜನರು ಸಾಮಾನ್ಯವಾಗಿ ಅಗತ್ಯವಿರುವ ಫೈಲ್‌ಗಳನ್ನು ಡಿಲೀಟ್ ಮಾಡುತ್ತಾರೆ. ಆದರೆ, ಈ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಸಣ್ಣ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಈ ಕೆಲಸವನ್ನು ಮಾಡಬಹುದು. Google Play Storeನಿಂದ Storage Analyzer & Disk Usage ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಅಷ್ಟೇ.

Storage Analyzer & Disk Usage ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ನಿಂದ ಯಾವ ಫೈಲ್ ಗಳನ್ನು ಡಿಲೀಟ್ ಮಾಡಬೇಕು, ಯಾವ ಫೈಲ್ ಗಳನ್ನು ಹಾಗೆಯೇ ಉಳಿಸಬೇಕು ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ನೀವು Google Play Store ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ಇತರೆ ಕ್ರಮದ ಮೂಲಕ ಸ್ಟೋರೇಜ್ ಖಾಲಿ ಮಾಡಬಹುದಾಗಿದೆ:

  • ಬಹುಮುಖ್ಯವಾಗಿ ಹೇಳುವುದೆಂದರೆ ಹಲವಾರು ಮಂದಿ ತಮ್ಮ ಮೊಬೈಲ್​ಗಳಲ್ಲಿ ಅನಗತ್ಯ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಈ ಅಪ್ಲಿಕೇಶನ್​ಗಳು ನಿಮ್ಮ ಮೊಬೈಲ್​ನ ಸ್ಟೋರೇಜ್​ ಇನ್ನಷ್ಟು ಹೆಚ್ಚಿಸುತ್ತದೆ. ಅದ್ರಲ್ಲೂ ಒಟಿಟಿಗೆ ಸಂಬಂಧಪಟ್ಟ ಅಪ್ಲಿಕೇಶನ್​ಗಳನ್ನು ಬಳಸುತ್ತಿದ್ದರೆ ಅದರ cache ಯನ್ನು ಆಗಾಗ ಕ್ಲಿಯರ್ ಮಾಡ್ತಾ ಇರಿ ಇದರಿಂದ ನಿಮ್ಮ ಸ್ಟೋರೇಜ್​ ಫುಲ್​ ಆಗುವುದನ್ನು ತಪ್ಪಿಸಬಹುದು. • ನೀವು ಡೌನ್​ಲೋಡ್ ಮಾಡಿದ ಫೋಟೋ ಅಥವಾ ವಿಡಿಯೋಗಳನ್ನು ಕ್ಲೌಡ್​ ಸ್ಟೋರೇಜ್​ನಲ್ಲಿ ಆ್ಯಡ್​ ಮಾಡಿ. ಏಕೆಂದರೆ ಗೂಗಲ್​ ಈ ರೀತಿಯ ಫೈಲ್​ಗಳನ್ನು ಆ್ಯಡ್​ ಮಾಡಲೆಂದೇ 15 ಜಿಬಿಯಷ್ಟು ಸ್ಟೋರೇಜ್​ ಅನ್ನು ನೀಡಿರುತ್ತೆ. ಅದಕ್ಕಾಗಿ ಅಲ್ಲಿ ನೀವು ಆ್ಯಡ್​ ಮಾಡ್ಬಹುದು.
  • ವಾಟ್ಸಪ್​ನ ಸ್ಟೋರೇಜ್​ ಫುಲ್​ ಆಗದಾಗೆ ನೋಡಬೇಕಾದರೆ ವಾಟ್ಸಪ್​ ಸ್ಟೋರೇಜ್​ ಮ್ಯಾನೇಜರ್​ ಅನ್ನು ಬಳಸಬೇಕು. ಇದನ್ನು ಬಳಸುವುದರಿಂದ ನಿಮ್ಮ ವಾಟ್ಸಪ್​ಗೆ ಬರುವಂತಹ ಫೋಟೋ, ವಿಡಿಯೋಗಳನ್ನು ಇನ್​ಸ್ಟಂಟ್​ ಆಗಿ ಡಿಲೀಡ್​ ಮಾಡಬಹುದು.

ಒಟ್ಟಾರೆ ಸ್ಮಾರ್ಟ್ ಫೋನಲ್ಲಿ ಸ್ಟೋರೇಜ್ ಸಮಸ್ಯೆ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ ಹಾಗಾಗಿ ನೀವು ಗೂಗಲ್ ಅಕೌಂಟ್ ಮಾಡಿ ಇರಿಸಿಕೊಳ್ಳಬಹುದು ಅಥವಾ ಫೋಟೋ ವೀಡಿಯೋ ಗಳನ್ನು ಮೆಮೊರಿ ಅಥವಾ ಬೇರೆ ಸಿಸ್ಟಮ್ ನಲ್ಲಿ ಶೇಕರಿಸಿ ಇಡಬಹುದಾಗಿದೆ.

Leave A Reply

Your email address will not be published.