22 ವರ್ಷಗಳಿಂದ ಚರಂಡಿಯಲ್ಲೇ ಈ ಪ್ರೇಮಿಗಳ ವಾಸ! ಕಾರಣವೇನು ಗೊತ್ತಾ?

ಮನುಷ್ಯನು ಜೀವನದಲ್ಲಿ ತನಗೊಂದು ಸುಂದರವಾದ ಮನೆ ಬೇಕೆಂದು ಕನಸು ಕಾಣುತ್ತಾನೆ. ಅನುಕೂಲಸ್ಥರೇನೊ ಮನೆ ಕಟ್ಟಿಕೊಂಡು ಬದುಕುತ್ತಾರೆ. ಆದರೆ ಯಾವುದೇ ಅನಕೂಲವಿಲ್ಲದ ಜನರು ತಾವು ವಾಸವಿರುವ ಸ್ಥಳವನ್ನೇ ತಮ್ಮ ಮನೆಯೆಂದು ಭಾವಿಸಿ ಅಲ್ಲಿಯೇ ಇರುತ್ತಾರೆ. ಯಾಕೆಂದರೆ ಮನೆ ಕಟ್ಟುವ ಅದೃಷ್ಟ ಎಲ್ಲರಿಗೂ ಒದಗಿ ಬರುವುದಿಲ್ಲ. ಹೀಗೆ ಮನೆಯಿಲ್ಲದೆ ಹಲವು ವರುಷಗಳಿಂದ ಚರಂಡಿಯಲ್ಲೇ ಜೀವಿಸಿದ ದಂಪತಿಯೊಂದರ ಮನಕಲುಕುವ ಕಥೆ ನಿಮಗೆ ಗೊತ್ತೇ?

 

ಹೌದು, ಕೋಲಂಬಿಯಾ ದೇಶದ ಇಬ್ಬರು ದಂಪತಿಗಳ ನಿಜ ಜೀವನದ ಕಥೆ ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.. ಕೊಲಂಬಿಯಾ ದೇಶದ ಮರಿಯಾ ಮತ್ತು ಅವರ ಪತಿ ಮಿಗಿಲ್ ಇಬ್ಬರೂ ಕಳೆದ 22 ವರ್ಷಗಳಿಂದ ಚರಂಡಿಯಲ್ಲಿ ವಾಸಿಸುತ್ತಿದ್ದಾರೆ. ಕೊಲಂಬಿಯಾ ಮೊದಲಿನಿಂದಲೂ ದೇಶದಲ್ಲಿ ಅಪರಾಧ ಮತ್ತು ಡ್ರಗ್ ನಿಂದ ಕುಖ್ಯಾತಿ ಗಳಿಸಿದೆ.. ಮರಿಯಾ ಮತ್ತು ಮಿಗಿಲ್ ಕೂಡ ಈ ಚಟಕ್ಕೆ ದಾಸರಾಗಿದ್ದರು! ಆದರೆ ಇವರಿಬ್ಬರೂ ತುಂಬಾ ಪ್ರೀತಿಸಿ ಮದುವೆಯಾದ ನಂತರ ಇನ್ನು ಮುಂದೆ ಕೆಟ್ಟದ್ದನ್ನು ಸೇವಿಸಬಾರದು ಎಂದು ಶಪಥ ಮಾಡುತ್ತಾರೆ.

ಇವರಿಬ್ಬರು ಮೊದಲು ಬೇಟಿಯಾದಾಗ ಇವರ ಹತ್ತಿರ ಒಂದು ನಯಪೈಸೆ ದುಡ್ಡು ಇರಲಿಲ್ಲ. ಅಲ್ಲದೆ ಇವರಿಗೆ ಯಾವುದೇ ರೀತಿ ಬಂದು ಬಳಗ, ವಾಸಿಸಲು ಮನೆ ಇರಲಿಲ್ಲ. ಹೀಗಾಗಿ ಮರಿಯಾ ಮತ್ತು ಮಿಗಿಲ್ ಕೆಲವು ದಿನಗಳ ಕಾಲ ರಸ್ತೆಯಲ್ಲೇ ಸಂಸಾರ ಮಾಡುತ್ತಿರುತ್ತಾರೆ. ಆದರೆ ಎಷ್ಟು ದಿನ ರಸ್ತೆಯ ಬದಿಯಲ್ಲಿ ವಾಸಿಸಲು ಸಾಧ್ಯ ಹೇಳಿ.

ಇಂತಹ ಸಮಯದಲ್ಲಿ ಕೊಲಂಬಿಯಾ ನಗರದಿಂದ ಸ್ವಲ್ಪ ದೂರವಿದ್ದ ಚರಂಡಿಯೊಂದು ಮಿಗಿಲ್ ಗೆ ಕಾಣಿಸುತ್ತದೆ.
ಆ ಚರಂಡಿಯನ್ನು ಯಾವುದೇ ರೀತಿ ಉಪಯೋಗಿಸದಿದ್ದ ಕಾರಣ ಮಿಗಿಲ್ ನಾನು ಮತ್ತು ಪತ್ನಿ ಇದರಲ್ಲಿ ವಾಸಮಾಡಬಹುದು ಎಂದುಕೊಂಡು ತನ್ನ ಪತ್ನಿಯನ್ನು ಕರೆದು ಆ ದಿನದಿಂದ ಚರಂಡಿಯಲ್ಲೇ ಜೀವನ ನಡೆಸಲು ಶುರು ಮಾಡುತ್ತಾರೆ.

ದಿನಗಳು ಕಳೆದಂತೆ ಒಂದು ಸ್ವಲ್ಪ ಮಟ್ಟಿಗೆ ಮನೆಯ ಸೌಲಭ್ಯಗಳನ್ನೇಲ್ಲಾ ಇವರು ಮಾಡಿಕೊಳ್ಳುತ್ತಾರೆ. ಬೆಳಕಿಗೆ ಲೈಟ್, ಅಡುಗೆ ಮಾಡಲು ಸ್ಟವ್, ಟಿವಿ ಮತ್ತು ಮಂಚದ ಸೌಲಭ್ಯವನ್ನು ಮಾಡಿಕೊಳ್ಳುತ್ತಾರೆ.. ಅಷ್ಟೇ ಅಲ್ಲದೆ ಇವರ ಜೊತೆ ನಾಯಿಯೂ ಕೂಡ ವಾಸ ಮಾಡುತ್ತಿದ್ದೆ.. ಸುಮಾರು 22 ವರ್ಷಗಳಿಂದ ಈ ದಂಪತಿಗಳು ಈ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇವರಿಬ್ಬರ ಜೀವನ ಚರಂಡಿಯಲ್ಲಿ ನಡೆಯುತ್ತಿರುವ ವಿಷಯ ಹೊರ ಜಗತ್ತಿಗೆ ಗೊತ್ತಾದಾಗ ಮನೆಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು. ಆದರೆ ಈ ದಂಪತಿಗಳು ನಾವು ಇಲ್ಲೇ ಇರುತ್ತೇವೆ, ನಾವು ನೆಮ್ಮದಿ ಸಂತೋಷ ಎಲ್ಲವನ್ನು ಇಲ್ಲೇ ಅನುಭವಿಸುತ್ತಿದ್ದೇವೆ. ಈ ಸ್ಥಳ ಬಿಟ್ಟು ಎಲ್ಲಿಗೂ ಬರುವುದಿಲ್ಲ ಮನೆಯ ಅವಶ್ಯಕತೆ ಬೇಡ ಎಂದು ಹೇಳುತ್ತಾರೆ. ಅಲ್ಲದೆ ಈ 22 ವರ್ಷದಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದಂದು ತಮ್ಮ ಚರಂಡಿಯ ಮನೆಯನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಿ ಕ್ರಿಸ್ಮಸ್ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ.

Leave A Reply

Your email address will not be published.