Shivamogga Attack : ಬಜರಂಗದಳ ಸಂಚಾಲಕ ಸುನೀಲ್ ಹತ್ಯೆ ಯತ್ನ ಪ್ರಕರಣ! ಕೊಲೆ ಯತ್ನಕ್ಕೆ ಟ್ವಿಸ್ಟ್, ಎಸ್ ಪಿ ನೀಡಿದ್ರು ಕಂಪ್ಲೀಟ್ ವಿವರ
ಸಾಗರ ಪಟ್ಟಣದಲ್ಲಿ ಬಜರಂಗ ದಳ ಸಹ ಸಂಚಾಲಕ ಸುನಿಲ್ ಹತ್ಯೆಗೆ ಯತ್ನಿಸಿದ (Shivamogga attack) ಪ್ರಕರಣದ ಕುರಿತಾದ ರೋಚಕ ಮಾಹಿತಿ ಹೊರ ಬಿದ್ದಿದೆ. ಹೌದು!! ಸುನಿಲ್ ಸಮೀರ್‌ನ ತಂಗಿಯನ್ನು ರೇಗಿಸುತ್ತಿದ್ದ ಹಿನ್ನೆಲೆಯೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದಲ್ಲಿ ಬಜರಂಗ ದಳ ಸಹ ಸಂಚಾಲಕ ಸುನಿಲ್ ಹತ್ಯಾ ಯತ್ನ ಪ್ರಕರಣದ ಜಾಡು ಅರಸುತ್ತಾ ಹೊರಟ ಪೋಲೀಸರಿಗೆ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. (Shivamogga attack) ಹಿಂದು ಮತ್ತು ಮುಸ್ಲಿಂ ಸಂಘರ್ಷವೆ ಈ ಕೊಲೆ ಯತ್ನಕ್ಕೆ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಇದು ವೈಯಕ್ತಿಕ ಜಗಳದಿಂದ ನಡೆದಿರುವ ಹಲ್ಲೆ ಯತ್ನವಾಗಿದ್ದು, ಸುನಿಲ್ ತನ್ನ ಸೋದರಿಯನ್ನು ಚುಡಾಯಿಸಿದ ಕಾರಣಕ್ಕೆ ಕೋಪಗೊಂಡ ಸಮೀರ್ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಅವರು ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ತಮ್ಮ ಮನೆಯಿಂದ ಬಿ.ಎಚ್. ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ತೆರಳುತ್ತಿದ್ದ ವೇಳೆ ಸಮೀರ್ ಎಂಬಾತ ತಲವಾರಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಅದೃಷ್ಟವಶಾತ್ ಸುನಿಲ್ ದೊಡ್ಡ ಅಪಾಯದಿಂದ ಪಾರಾಗಿ ತಪ್ಪಿಸಿಕೊಂಡಿದ್ದಾರೆ. ಹೀಗಾಗಿ, ಸಮೀರ್‌ನ ಪತ್ತೆಗಾಗಿ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಸಾಗರ ಟೌನ್ ಪೊಲೀಸರು ಸಮೀರ್‌ನನ್ನು ಬಂಧಿಸಿದ್ದು, ಈ ಕೃತ್ಯ ಎಸಗಲು ಸಾಥ್ ನೀಡಿದ್ದಾರೆ ಎಂದು ಅನುಮಾನದ ದೃಷ್ಟಿಯಿಂದ ಇಮಿಯಾನ್ ಮತ್ತು ಮನ್ಸೂರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸಮೀರ್‌ನ ವಿಚಾರಣೆ ನಡೆಸಿದ ಖಾಕಿ ಪಡೆ, ಕೊಲೆ ಯತ್ನಕ್ಕೆ ಕಾರಣ ಕಂಡು ಹಿಡಿಯಲು ಮುಂದಾಗಿದ್ದು, ಸಾಗರದಲ್ಲಿ ನಡೆದಿರುವ ಘಟನೆ ವೈಯಕ್ತಿಕವಾದ ಘಟನೆ ಆಗಿದ್ದು, ಬಜರಂಗದಳದ ಸಹ ಸಂಚಾಲಕರಾಗಿರುವ ಸುನಿಲ್, ತನ್ನ ಸೋದರಿಯನ್ನು ಚುಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಮೀರ್ ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿರಬೇಕೆಂದು ತಿಳಿಸಿದ್ದಾರೆ.
ಸುನಿಲ್ ಸಮೀರ್‌ನ ಸೋದರಿಯನ್ನು ಚುಡಾಯಿಸಿದ್ದಕ್ಕೆ ಸಂಬಂಧಿಸಿದ ಕಾಲ್ ರೆಕಾರ್ಡ್ ಲಭ್ಯವಾಗಿದೆ ಎಂಬುದನ್ನು ಎಸ್ಪಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸುನಿಲ್ ಕಳೆದ ನಾಲೈದು ತಿಂಗಳಿನಿಂದ ಚುಡಾಯಿಸುತ್ತಿದ್ದ ಎನ್ನಲಾಗಿದ್ದು, ಈ ವಿಷಯದಲ್ಲಿ ಸಮೀರ್ ಹಲವು ಬಾರಿ ಸುನಿಲ್‌ಗೆ ಎಚ್ಚರಿಕೆಯನ್ನೂ ನೀಡಿದ್ದಾನೆ ಎನ್ನಲಾಗಿದೆ. ಆದರೂ ಕೂಡ, ಸುನಿಲ್ ಸಮೀರ್‌ನ ತಂಗಿಯ ಫೋನ್ ಕೂಡಾ ನಂಬರ್ ಕೇಳಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಕೋಪಗೊಂಡಿದ್ದಾನೆ.
ಸುನಿಲ್ ಗೆ ತಂಗಿಯ ವಿಷಯಕ್ಕೆ ಹೋಗದಂತೆ ಎಚ್ಚರಿಕೆ ನೀಡಿದರು ಕೂಡ ಸುನಿಲ್ ಮತ್ತೆ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ ಎನ್ನಲಾಗಿದ್ದು, ಸೋಮವಾರ ಸಮೀರ್ ಮೇಕೆಗೆ ಹುಲ್ಲು ತರಲೆಂದು ಹೊರಟಿದ್ದ ವೇಳೆ ಸುನಿಲ್ ದ್ವಿಚಕ್ರ ವಾಹನದಲ್ಲಿ ಬಂದಿದ್ದಾನೆ. ಆಗ ಹುಲ್ಲು ಕೊಯ್ಯಲೆಂದು ಹಿಡಿದಿದ್ದ ಕತ್ತಿಯನ್ನೇ ಹಿಡಿದು ಆತನ ಕಡೆಗೆ ಧಾವಿಸಿದ್ದ ಎನ್ನಲಾಗಿದೆ. ಈ ನಡುವೆ ಅವರಿಬ್ಬರು ಬೈದಾಡಿಕೊಂಡಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಜರಂಗ ದಳ ಸಹ ಸಂಚಾಲಕ ಸುನಿಲ್ ಸಮೀರ್‌ನ ಸೋದರಿಗೆ ಚುಡಾಯಿಸಿದ ವಿಚಾರಕ್ಕೆ ಸಂಬಂಧಿಸಿ ಕರೆಗಳ ದಾಖಲೆಗಳು ಸಿಕ್ಕಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಈ ನಡುವೆ ಸಮೀರ್ ಜತೆಗೆ ಇಮಿಯಾನ್ ಮತ್ತು ಮನೂರ್‌ನನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಇವರು ಈ ಹಲ್ಲೆ ಪ್ರಕರಣದಲ್ಲಿ ಹೇಗೆ ಶಾಮೀಲಾಗಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ್, ಇಮಿಯಾನ್, ಮನ್ಸೂರ್ ಒಂದು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಕೊಲೆ ಪ್ರಯತ್ನಕ್ಕೆ ಸಂಚು ರೂಪಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು ಹೀಗಾಗಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ, ಇಂಥ ವೈಯಕ್ತಿಕ ವಿಚಾರಗಳಿದ್ದಾಗ ಯಾರೂ ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗಬಾರದು. ಪೊಲೀಸರ ಗಮನಕ್ಕೆ ತರಬೇಕು ಎಂದು ಎಸ್‌ಪಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.