Rishab Shetty : ಈ ನಟ ಕಾಂತಾರ ನಟ ರಿಷಬ್ ಅವರಿಗೆ ಸ್ಪೂರ್ತಿ | ಯಾರವರು ?

ರಿಷಬ್ ಶೆಟ್ಟಿ (Rishab Shetty) ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ಕಾಂತಾರ (Kantara) ಸಿನಿಮಾ ಕನ್ನಡ ಚಿತ್ರರಂಗದಲ್ಲಿ 2022ರ ಬಿಗ್ ಹಿಟ್ ಆಗಿದ್ದು ಗೊತ್ತಿರುವ ವಿಚಾರವೇ!!. ಈ ಸಿನೆಮಾದ ಮೂಲಕ ರಿಷಬ್ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಆಗಿ ಮಿಂಚಿದ್ದು, ಗಣ್ಯಾತಿ ಗಣ್ಯರು ಸಿನಿಮಾಗೆ ಮೆಚ್ಚುಗೆಯ ಸುರಿಮಳೆ ಗೈದಿದ್ದು ಕೂಡ ಈಗ ಹಳೆ ವಿಚಾರ. ಈ ನಡುವೆ ರಿಷಬ್ ಶೆಟ್ಟಿ ಹೆಚ್ಚಿನ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಸಂದರ್ಶನ ಕೂಡ ನೀಡಿದ್ದಾರೆ. ಈ ವೇಳೆ ಸೀಕ್ರೇಟ್ ಒಂದನ್ನು ರಿವಿಲ್ ಮಾಡಿದ್ದಾರೆ

 

2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಜೋಡಿಯ ರಿಕ್ಕಿ ಸಿನಿಮಾಕ್ಕೆ ರಿಷಬ್ ಶೆಟ್ಟಿಯವರು ಆ್ಯಕ್ಷನ್ ಕಟ್ ಹೇಳಿ ವಿಮರ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿ ಪ್ರಶಂಸೆ ಗಳಿಸಿದರೂ ಕೂಡ ರಿಕ್ಕಿ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶ ಕಾಣಲಿಲ್ಲ. ಇದರ ಬಳಿಕ ರಿಷಬ್-ರಕ್ಷಿತ್ ಜೋಡಿಯ ಕಿರಿಕ್ ಪಾರ್ಟಿ ಮಾಡಿದ ಮೋಡಿ ಎಲ್ಲರಿಗೂ ಗೊತ್ತಿರುವ ವಿಚಾರವೇ!!

ರಕ್ಷಿತ್ ಶೆಟ್ಟಿ ಒಳಗೆ ಅಡಗಿದ್ದ ಪ್ರತಿಭೆಯನ್ನು ಅನಾವರಣ ಗೊಳಿಸುವಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮಹತ್ತರ ಪಾತ್ರ ವಹಿಸಿದೆ. ಈ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರ ಬಾಕ್ಸ್ ಆಫೀಸ್ ಧೂಳಿ ಪಟ ಮಾಡಿದ್ದು, ರಿಷಬ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಅವಕಾಶ ದೊರೆಯಿತು.
ಹೀಗಿದ್ದ ನಟ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸಿದ್ದು ಕಾಂತಾರ ಸಿನೆಮಾದ ಮೂಲಕ ನೇಮ್ ಫೇಮ್ ದೊರೆತು ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಅದೆಷ್ಟೋ ಮಂದಿ ಯುವ ಜನತೆಯ ಪಾಲಿನ ಹೀರೋ ಎಂದರೆ ತಪ್ಪಾಗದು. ಅಷ್ಟೆ ಅಲ್ಲದೆ,ಅನೇಕ ನಿರ್ದೇಶಕರಿಗೆ ಸ್ಫೂರ್ತಿಯಾಗಿದ್ದಾರೆ.

ಈ ನಡುವೆ ರಿಷಬ್ ಅವರಿಗೆ ಸ್ಪೂರ್ತಿಯಾದ ನಟ ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪ್ರತಿಯೊಬ್ಬರಿಗೂ ತಮ್ಮ ನೆಚ್ಚಿನ ನಟನ ಸ್ಟೈಲ್ ಫಾಲೋ ಮಾಡೋದು ಕಾಮನ್. ಈ ಕುತೂಹಲಕಾರಿ ಸಂಗತಿಯ ಕುರಿತು ರಿಷಬ್​ ಮಾತಾಡಿದ್ದಾರೆ. ರಿಷಬ್ ಶೆಟ್ಟಿ ಸಂದರ್ಶನದ ಸಂದರ್ಭ ಈ ಸೀಕ್ರೇಟ್ ರೀವಿಲ್ ಮಾಡಿದ್ದಾರೆ. ಹೌದು!! ತನಗೆ ತಮಿಳು ನಟ ಸೂರ್ಯ ಅವರೇ ಮಾಡೆಲ್ ಜೊತೆಗೆ ಸ್ಪೂರ್ತಿ ಎಂಬ ರಹಸ್ಯ ಬಹಿರಂಗ ಪಡಿಸಿದ್ದಾರೆ.

ತಮ್ಮ ಕಾಲೇಜು ದಿನಗಳ ವೇಳೆ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ರಿಷಬ್ ಶೆಟ್ಟಿ, ತಮಿಳು ನಟ ಸೂರ್ಯ ಅವರ ಅನೇಕ ಚಿತ್ರಗಳನ್ನು ನೋಡಿ ಅವರ ಸ್ಟೈಲ್​ ಅನ್ನು ಹೆಚ್ಚು ಅನುಕರಣೆ ಮಾಡುತ್ತಿದ್ದರು. ಸೂರ್ಯ ಸರ್ ಅವರ ಹೇರ್ ಸ್ಟೈಲ್ , ವಾಕಿಂಗ್ ಸ್ಟೈಲ್ನನ್ನು ಕಾಲೇಜು ದಿನಗಳಲ್ಲಿ ಕಾಪಿ ಮಾಡ್ತಿದ್ದೆ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಸೂರ್ಯ ಅವರು ಕೂಡ ಒಂದೊಂದು ಸಿನಿಮಾಗಳಲ್ಲೂ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಬಳಗ ಹೊಂದಿದ್ದು ಅವ್ರ ಮ್ಯಾನರಿಸಂ ಮೂಲಕ ತೆರೆ ಮೇಲೆ ರಂಜಿಸುತ್ತಿದ್ದರು. ಸೂರ್ಯ ಅವರ ಸ್ಟೈಲ್ ಅನ್ನೆ ನಾನು ಕೂಡ ಫಾಲೋ ಮಾಡುತ್ತಾ ಬಂದೆ ಎಂದು ರಿಷಬ್ ಅವರು ಹೇಳಿಕೊಂಡಿದ್ದಾರೆ.

ತಮಿಳು ನಟ ಸೂರ್ಯ ಅನೇಕರಿಗೆ ಸ್ಪೂರ್ತಿ ಆಗಿದ್ದು, ನಟನೆ ಅಷ್ಟೇ ಅಲ್ಲದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮಿಳುನಾಡಿನಲ್ಲಿ ಸೂರ್ಯ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಹೀಗೆ, ಕರ್ನಾಟಕದಲ್ಲೂ ಅನೇಕ ಫ್ಯಾನ್ಸ್ ಇದ್ದಾರೆ ಎಂಬುದು ಗೊತ್ತಿರುವ ವಿಷಯವೇ!! ಇದರಲ್ಲಿ ರಿಶಬ್ ಅವ್ರು ಕೂಡ ಒಬ್ಬರಾಗಿದ್ದಾರೆ. ರಿಷಬ್ ಶೆಟ್ಟಿ ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದರು ಕೂಡ ದೊಡ್ದ ಹೆಸರು ಗಳಿಸಲು ಸಾಧ್ಯವಾಗಿರಲಿಲ್ಲ. ಇದರ ನಡುವೆಯೇ 2014ರಲ್ಲಿ ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ ಬಳಿಕ ರಿಷಬ್ ಶೆಟ್ಟಿ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಐಡೆಂಟಿಟಿ ದೊರೆತು ತಮ್ಮ ಸುಧೀರ್ಘ ಶ್ರಮಕ್ಕೆ ಕಾಂತಾರ ಸಿನೆಮಾ ಪ್ರತಿಫಲ ನೀಡಿ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ.

Leave A Reply

Your email address will not be published.