Jio 5G : ಜಿಯೋದಿಂದ ಮೊಟ್ಟ ಮೊದಲ 5G ಪ್ಲ್ಯಾನ್‌ ಬಿಡುಗಡೆ | ಹೇಗಿದೆ ಗೊತ್ತಾ ಪ್ಲ್ಯಾನ್‌?

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ. ಇದೀಗ,ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ 5G ಡೇಟಾ ಬೆಲೆಯನ್ನು ಬಹಿರಂಗಪಡಿಸಿದೆ.

 

ರಿಲಯನ್ಸ್ ಜಿಯೋ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾಯೋಗಿಕವಾಗಿ 5G ಸೇವೆಗಳನ್ನು ಆರಂಭಿಸಿದ್ದು, 2022 ರ ವಿಜಯದಶಮಿ ಹಬ್ಬದ ಶುಭ ಜಿಯೋ ತನ್ನ ‘ವೆಲ್ಕಮ್ ಆಫರ್’ ಘೋಷಣೆ ಜೊತೆಗೆ ದೇಶದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ಹಲವಾರು ನಗರಗಳಲ್ಲಿ ಜಿಯೋ 5ಜಿ ಸೇವೆಯನ್ನು ಒದಗಿಸಿಕೊಟ್ಟಿದೆ.

ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ 5G ಡೇಟಾ ಬೆಲೆಯನ್ನು ಇದೀಗ ಬಹಿರಂಗಪಡಿಸಿದ್ದು, ಪ್ರಸ್ತುತ ಜಿಯೋ ವೆಲ್‌ಕಮ್ ಆಫರ್ ಅಡಿಯಲ್ಲಿ ದೇಶದ ಜನರಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿರುವ ಜಿಯೋ ಕಂಪೆನಿ ಎಲ್ಲಾ 5G ಸ್ಮಾರ್ಟ್‌ಫೋನ್ ಬಳಕೆದಾರರಿಗೆ 4G ರೀಚಾರ್ಜ್‌ ಯೋಜನೆಗಳಲ್ಲೇ 5G ಸೇವೆಯನ್ನು ಒದಗಿಸುತ್ತಿದೆ.

ದೇಶದಲ್ಲಿ 5G ಸೇವೆಗಳನ್ನು ವ್ಯಾಪಕವಾಗಿ ಆರಂಭಿಸಿದ ಬಳಿಕ 5G ಡೇಟಾ ಬೆಲೆಯನ್ನು ನಿರ್ಣಯ ಮಾಡಲು ಅಣಿಯಾಗಿದ್ದ ಜಿಯೋ, ಇದೀಗ ಮೊದಲ ಬಾರಿಗೆ 5G ಸೇವೆ ಸಂಬಂಧ ಮೊಟ್ಟ ಮೊದಲ ರೀಚಾರ್ಜ್‌ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಇದರಿಂದ ದೇಶದಲ್ಲಿ ಪ್ರತಿ ಜಿಬಿ 5G ಡೇಟಾ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಊಹಿಸಬಹುದು.

ಜಿಯೋ ಆರಂಭಿಸಿರುವ 5ಜಿ ಸೇವೆಯಲ್ಲಿ ಜಿಯೋ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ ಬದಲಿಸದೆಯೇ 5ಜಿ ನೆಟ್‌ವರ್ಕ್ ಬಳಸಬಹುದಾಗಿದೆ. ಆದರೆ, 5ಜಿ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲು ಆಗುವುದಿಲ್ಲ. ಹೀಗಾಗಿ, ನೀವು ನಿಮ್ಮ 5G ಸ್ಮಾರ್ಟ್‌ಫೋನಿನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಬೇಕಾಗಿದ್ದು, ಮತ್ತು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ 5G ನೆಟ್‌ವರ್ಕ್ ಸೆಟ್ಟಿಂಗ್ ಸಕ್ರಿಯಗೊಳಿಸುವ ಮೂಲಕ 1Gbps + ವೇಗದಲ್ಲಿ 5G ಸೇವೆಗಳನ್ನು ಪಡೆಯಲು ಅವಕಾಶ ಸಿಗಲಿದೆ. ಈ ಕುರಿತು ಸುಲಭವಾಗಿ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಜಿಯೋ ತನ್ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಜಿಯೋ 4G ಸೇವೆಯನ್ನು ಬಳಸುತ್ತಿರುವ ಗ್ರಾಹಕರು 5G ಸೇವೆಗಳನ್ನು ಬಳಸುವುದಕ್ಕಾಗಿ ಕನಿಷ್ಠ 239 ರೂ. ಯೋಜನೆಗೆ ರೀಚಾರ್ಜ್ ಮಾಡಿಸಿರಬೇಕು. 5G ಸಾಮರ್ಥ್ಯದ ಸ್ಮಾರ್ಟ್‌ಫೋನ್ ಹೊಂದಿರುವ ಜಿಯೋ 4G ಗ್ರಾಹಕರು 5G ಸೇವೆ ಪಡೆಯಲು ಕಂಪೆನಿಯಿಂದ ಆಹ್ವಾನವನ್ನು ಪಡೆಯುತ್ತಿರಿ. ಈ ವೇಳೆ ಅವರು 239 ರೂ.ಗಿಂತ ಹೆಚ್ಚಿನ ಬೆಲೆಯ ಯೋಜನೆಗೆ ಗ್ರಾಹಕರಾಗಿದ್ದರೆ ಅನಿಯಮಿತ 5G ಡೇಟಾ ಲಭ್ಯವಾಗಲಿದೆ. ಜಿಯೋ ಮುಂದಿನ ಪ್ರಕಟಣೆ ಹೊರಡಿಸುವವರೆಗೂ ಈ ಆಫರ್ ಇರಲಿದ್ದು, ಆದರೆ, ಇದು ಜಿಯೋ 5G ಸೇವೆಗಳನ್ನು ಪಡೆಯಲು ಪಾವತಿಸಬೇಕಾದ ನಿಗದಿ ಮಾಡಿದ ನಿರ್ದಿಷ್ಟ ಬೆಲೆಯಲ್ಲ ಎಂಬುದನ್ನು ಗಮನಿಸಬೇಕು. ಈ ಆಫರ್ ಮುಂದಿನ ಆರು ತಿಂಗಳಿನಿಂದ ಒಂದು ವರ್ಷವೇ ಇರಬಹುದು ಎಂದು ಜಿಯೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಯೋ 5G ಸೇವೆಗಳನ್ನು ಪಡೆಯಲು ಜಿಯೋ ಕಂಪೆನಿ ಮೊದಲ ಬಾರಿಗೆ ಪ್ರಕಟಿಸಿರುವ ರೀಚಾರ್ಜ್‌ ಯೋಜನೆಯು 5G ಡೇಟಾ-ಆನ್ ಯೋಜನೆಯಾಗಿದ್ದು, ಈ ಹೊಸ ಯೋಜನೆಯನ್ನು ಜಿಯೋ ಕೇವಲ 61 ರೂ.ಗೆ ಪರಿಚಯಿಸಿದೆ. ಈ ಬೆಲೆಯಲ್ಲಿ ಗ್ರಾಹಕರಿಗೆ 6GB ಹೈ-ಸ್ಪೀಡ್ 5G ಡೇಟಾವನ್ನು ಒದಗಿಸುವ ಜೊತೆಗೆ ಯೋಜನೆಯ ವ್ಯಾಲಿಡಿಟಿಯು ಸಕ್ರಿಯ ಯೋಜನೆಯ ಮಾನ್ಯತೆಯನ್ನು ಹೊಂದಿರುತ್ತದೆ ಎಂದು ಕಂಪೆನಿಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ದೇಶದಲ್ಲಿ ಜಿಯೋ 5G ಡೇಟಾ ಬೆಲೆ ಪ್ರತಿ ಜಿಬಿಗೆ ಅಂದಾಜು 10 ರೂ. ಇರಲಿದ್ದು, ಇದರಿಂದ ದೇಶದಲ್ಲಿ ಪ್ರತಿ ಜಿಬಿ 5G ಡೇಟಾದ ಅಂದಾಜು ಬೆಲೆ ಬಗ್ಗೆ ಮಾಹಿತಿ ದೊರೆಯಲಿದೆ.

Leave A Reply

Your email address will not be published.