ನನ್ನೊಳಗಿನ ‘ರಾಹುಲ್ ಗಾಂಧಿ’ಯನ್ನು ನಾನೇ ಕೊಂದಿದ್ದೇನೆ ಎಂದ ‘ರಾಹುಲ್ ಗಾಂಧಿ’!! ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಗೊತ್ತಾ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಗಾಗಾ ಯಾವುದಾದರೂ ಒಂದು ಹೇಳಿಕೆಯ ಮೂಲಕ ಸುದ್ಧಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಇದೇ ರೀತಿ ವಿಚಿತ್ರ ಹೇಳಿಕೆ ನೀಡುವುದರ ಮೂಲಕ ಎಲ್ಲರಲ್ಲೂ ಗೊಂದಲ ಸೃಷ್ಟಿಸಿದ್ದಾರೆ.
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ 118ನೇ ದಿನದ ಅಂಗವಾಗಿ ಹರಿಯಾಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಿಮ್ಮ ಮನಸ್ಸಿನಲ್ಲಿರುವ ರಾಹುಲ್ ಗಾಂಧಿಯನ್ನು ನಾನೇ ಕೊಂದಿದ್ದೇನೆ’ ಎಂದು ಹೇಳಿದ್ದಾರೆ. ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ರಾಹುಲ್ ಅವರು ಮಾಧ್ಯಮದ ಬಳಿ ಒಗಟಾಗಿ ಮಾತನಾಡಿದ್ದಾರೆ. ಇದು ಒಮ್ಮೆ ಎಲ್ಲರಿಗೂ ಆಶ್ಚರ್ಯವೆನಿಸಿದ್ದಂತೂ ಸತ್ಯ.
ದೇಶವನ್ನು ಐಕ್ಯತೆ ಕಡೆಗೆ ಕೊಂಡೊಯ್ಯುವ ಈ ಭಾರತ್ ಜೋಡೋ ಯಾತ್ರೆಯೂ ಅವರ ಯಾತ್ರೆಯಾಗಬಾರದು. ಹೀಗಾಗಿ ನಾನು ನನ್ನೋಳಗಿನ ರಾಹುಲ್ ಗಾಂಧಿ ಅವರನ್ನು ಕೊಂದಿದ್ದೇನೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನಾನು ಅವರನ್ನು ಕೊಂದಿದ್ದೇನೆ. ಅವರು ಎಲ್ಲಿಯೂ ಇಲ್ಲ, ನನ್ನ ಮನಸ್ಸಿನಲ್ಲಿಯೂ ಇಲ್ಲ. ಅವರು ನನ್ನ ತಲೆ, ಮನಸ್ಸನಿಂದ ಹೊರಟು ಹೋಗಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಯಾಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರ ಇಮೇಜ್ ಅನ್ನು ಹೇಗೆ ಬದಲಾಯಿಸಿತು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ‘ನಾನು ಇಮೇಜ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನೀವು ನೋಡುತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ನೀವು ಅವರನ್ನು ನೋಡಬಹುದು. ಆದರೆ, ನಿಮಗೆ ಅದು ಅರ್ಥವಾಗುತ್ತಿಲ್ಲ. ನೀವು ಹಿಂದೂ ಧರ್ಮಗ್ರಂಥಗಳನ್ನು ಓದಿ. ಭಗವಾನ್ ಶಿವನ ಬಗ್ಗೆ ಓದಿ, ನಿಮಗೆ ಅರ್ಥವಾಗುತ್ತದೆ. ಶಾಕ್ ಆಗಬೇಡಿ. ರಾಹುಲ್ ಗಾಂಧಿ ನಿಮ್ಮ ತಲೆಯಲ್ಲಿದ್ದಾರೆ, ನನ್ನ ತಲೆಯಲ್ಲಲ್ಲ, ಅವರು ಬಿಜೆಪಿಗರ ತಲೆಯಲ್ಲಿದ್ದಾರೆ” ಎಂದಿದ್ದಾರೆ.
ನೀವು ಅರ್ಥಮಾಡಿಕೊಂಡರೆ ನಿಮಗೆ ಒಳ್ಳೆಯದು ಕಾಣುತ್ತದೆ. ಅರ್ಥಮಾಡಿಕೊಳ್ಳದೇ ಹೋದರೆ ಕೆಟ್ಟದು. ಇದು ಈ ರಾಷ್ಟ್ರದ ತತ್ವಶಾಸ್ತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯ ಈ ಮಾತುಗಳು ಹಲವರಲ್ಲಿ ಗೊಂದಲ ಸೃಷ್ಟಿಸಿದ್ದರೆ, ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವು ಸಮಯದ ಹಿಂದೆ ಈ ಯಾತ್ರೆಯೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಅಲ್ಲ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ‘ಈ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಮಾಡುತ್ತಿಲ್ಲ. ಇದು ಸೈದ್ಧಾಂತಿಕ ಯಾತ್ರೆಯಾಗಿದ್ದು, ಇದರ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಯಾತ್ರೆಯಲ್ಲ’ ಎಂದು ಕಾಂಗ್ರೇಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದರು.