Pension Issues : ಹಿರಿಯ ನಾಗರಿಕರೇ ನಿಮಗೊಂದು ಮಹತ್ವದ ಮಾಹಿತಿ | ಪಿಂಚಣಿ ಸಿಗದಿದ್ದರೆ ದೂರು ಈ ರೀತಿ ನೀಡಿ!
ಪಿಂಚಣಿ ವಿಷಯದಲ್ಲಿ ಹಿರಿಯ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಬಗ್ಗೆ ದೂರು ನೀಡಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರಿ ಸಂಸ್ಥೆಗಳು ಈ ಸಮಸ್ಯೆಯನ್ನು ಪರಿಹರಿಸುತ್ತವೆ. ಹಿರಿಯ ನಾಗರಿಕರೇ ನೀವೇನಾದರೂ ಪಿಂಚಣಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ರೀತಿಯಾಗಿ ದೂರು ನೀಡಿ.
ಪಿಂಚಣಿ ವಿಳಂಬದ ಬಗ್ಗೆ ದೂರು ನೀಡುವುದು ಹೇಗೆಂದರೆ, ಪಿಂಚಣಿದಾರರು ತಮ್ಮ ಪಿಂಚಣಿ ದಾಖಲೆಗಳ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ cccpao@nic.in ಮೇಲ್ ಐಡಿಗೆ ಪಿಂಚಣಿ ಪಾವತಿ ಆದೇಶ (PPO) ಸಂಖ್ಯೆಯೊಂದಿಗೆ ಹಣಕಾಸು ಸಚಿವಾಲಯದ ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ (CPAO) ಗೆ ಇ-ಮೇಲ್ ಮಾಡಬಹುದಾಗಿದೆ.
ಅಲ್ಲದೆ, ಟೋಲ್ ಫ್ರೀ ನಂ.1800-11-77-88 ಮೂಲಕ ಕೂಡ ಸಿಪಿಎಒನಲ್ಲಿ ದೂರು ನೀಡಬಹುದು. ಪಿಂಚಣಿದಾರರು www.pensionersportal.gov.in ನಲ್ಲಿ ಕೇಂದ್ರೀಕೃತ ಪಿಂಚಣಿ ಸಮಸ್ಯೆ, ಪರಿಹಾರ ಮತ್ತು ಮಾನಿಟರಿಂಗ್ ಸಿಸ್ಟಮ್ ನ ಮುಖಾಂತರ ದೂರುಗಳನ್ನು ನೀಡಬಹುದು. ಇನ್ನೂ, ನೀವೇನಾದರೂ ನಿಮ್ಮ ಬ್ಯಾಂಕ್ ವಿರುದ್ಧ ದೂರು ಸಲ್ಲಿಸಬೇಕೆಂದಿದ್ದರೆ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ನೀಡಬಹುದು. ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಗದೇ ಹೋದರೆ, ಆಗ ಪಿಂಚಣಿದಾರರು ಆರ್‌ಬಿಐನ ಆನ್‌ಲೈನ್ ದೂರು ನಿರ್ವಹಣಾ ವ್ಯವಸ್ಥೆಯ ಮೂಲಕ ದೂರು ನೀಡಬಹುದು.
ಪರಿಷ್ಕೃತ ಪಿಂಚಣಿ ಮತ್ತು ಬಾಕಿ ವಿತರಣೆಯಲ್ಲಿನ ವಿಳಂಬದ ಬಗ್ಗೆ ಪಿಂಚಣಿದಾರರು ದೂರು ನೀಡಿದ್ದು, ಈ ಹಿನ್ನೆಲೆ ಆರ್‌ಬಿಐ ಸಹಿ ಮಾಡಿದ ಸ್ವೀಕೃತಿಗಳನ್ನು ನೀಡಲು ಏಜೆನ್ಸಿ ಬ್ಯಾಂಕ್‌ಗಳಿಗೆ ಕಡ್ಡಾಯ ಮಾಡಿದೆ. ಮುಂದಿನ ತಿಂಗಳ ಪಿಂಚಣಿಯಲ್ಲಿ ಸರ್ಕಾರ ಘೋಷಿಸಿದ ಪ್ರಯೋಜನಗಳನ್ನು ಪಿಂಚಣಿದಾರರು ಪಡೆಯುವಂತೆ ಬ್ಯಾಂಕ್‌ಗಳು ಕ್ರಮಕೈಗೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ.
ಏಜೆನ್ಸಿ ಬ್ಯಾಂಕ್‌ಗಳಿಗೆ ನೀಡಿದ ಸೂಚನೆ, ಪಿಂಚಣಿದಾರರಿಗೆ ಪಿಂಚಣಿ ಪಾವತಿ ಮಾಡುವ ಬ್ಯಾಂಕ್‌ಗಳು ಪಾವತಿಯಲ್ಲಿ ವಿಳಂಬ ಮತ್ತು ಬಾಕಿಗಳನ್ನು ಪಾವತಿಸದಿದ್ದಕ್ಕಾಗಿ ವಾರ್ಷಿಕ ಶೇ.8 ರ ದರದಲ್ಲಿ ಪರಿಹಾರ ಒದಗಿಸುತ್ತದೆ. ಅಲ್ಲದೆ, ಪಿಂಚಣಿ ಲೆಕ್ಕಾಚಾರದ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗಬೇಕು, ಅಗತ್ಯವಿರುವ ಅವಧಿಗೆ ಶಾಖೆಗಳಲ್ಲಿ ಲಭ್ಯವಾಗಬೇಕು ಮತ್ತು ಅಂತಹ ವ್ಯವಸ್ಥೆಗಳ ಬಗ್ಗೆ ಹಲವು ಜಾಹೀರಾತನ್ನು ಮಾಡಬೇಕು ಎಂಬುದಾಗಿದೆ.
ಅಲ್ಲದೆ, ವೃದ್ಧಾಪ್ಯ ಪಿಂಚಣಿದಾರರಿಗೆ ಸರಿಯಾದ ಗ್ರಾಹಕ ಸೇವೆಯನ್ನು ಒದಗಿಸಬೇಕು. ಹಾಗೇ ಅನಾರೋಗ್ಯ ಮತ್ತು ಅಂಗವಿಕಲ ಪಿಂಚಣಿದಾರರಿಗೆ ಈ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಸಿಗಲು ನೋಟಿಸ್ ಬೋರ್ಡ್‌ನಲ್ಲಿ ವಿವರಗಳನ್ನು ಪ್ರದರ್ಶಿಸಬೇಕು ಎಂದು ಆರ್‌ಬಿಐ ತಿಳಿಸಿದೆ.