ಮಗುವಿನ ನಿರೀಕ್ಷೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ! ಪ್ರೆಗ್ನೆಂಟ್ ಆದ್ರ ನಿವೇದಿತಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯಾಗಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಕೊಕ್ಕರೆ ಡ್ಯಾನ್ಸ್ ಅನ್ನು ಹಾಕಿ ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿದ್ರು. ಅದೇ ರೀತಿಯಾಗಿ ನಿವೇದಿತಾ ಸೋಲೋ ಟ್ರಿಪ್ ಕೂಡ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ರು.

ಇದೀಗ ಚೆಟ್ರು ಮತ್ತು ಗೌಡ್ರು ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಆ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ರೀಲ್ಸ್​ನಲ್ಲಿ ಚಂದನ್​ ಶೆಟ್ಟಿ ಅವರು ನಿವೇದಿತಾರನ್ನು ನಾನು ಹೇಳುವುದನ್ನು ಕೂಡಿಸಿ ಹೇಳು ಎಂದು ಹೇಳ್ತಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್​ ಶೆಟ್ಟಿ ಕೇಳಿದ್ದಾರೆ. Fat her ಅಂತಾರೆ ಬಳಿಕ ಸರಿಯಾಗಿ ಕೂಡಿಸು ಎಂದು ಹೇಳಿದಾಗ ನಿವೇದಿತಾ ಗೌಡ ‘ಫಾದರ್​ ‘ ಎಂದು ನಾಚಿಕೊಳ್ತಾರೆ. ಹಾಗಾಗಿ ಚಂದನ್​ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್​ ಊಹಿಸಿದ್ದಾರೆ.

ಆದರೆ ಈ ಹಿಂದೆ ಕೂಡ ನಿವೇದಿತಾ ಮಮ್ಮಿ ಆಗ್ತಾ ಇದ್ದಾಳೆ .ಅಂತ ಏಪ್ರಿಲ್ ಫೂಲ್ ಮಾಡಿದ್ರು. ಆದ್ರೆ ಈ ಬಾರಿ ನಿವೇದಿತಾ ಗೌಡ ನಿಜವಾಗಿಯೂ ಗರ್ಭಿಣಿ ಆಗಿದ್ದಾರ ಗೊತ್ತಿಲ್ಲ?

ಸದ್ಯದಲ್ಲೇ ಗಿಚ್ಚಿ ಗಿಲಿ ಗೆಲಿ ಸೀಸನ್ 2 ಕೂಡ ಕಲರ್ಸ್ ಕನ್ನಡದಲ್ಲಿ ಆರಾಮವಾಗಲಿದ್ದು, ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇರಲಿ ನಿವೇದಿತ ಗೌಡ ಇರಬಹುದ ಎಂಬುದು ಕೂಡ ಹಲವಾರು ಪ್ರೇಕ್ಷಕರ ಪ್ರಶ್ನೆಯಾಗಿದೆ!

https://www.instagram.com/reel/CnLzOu3NdQR/?igshid=YmMyMTA2M2Y=

Leave A Reply

Your email address will not be published.