Miley Cyrus: ನಟಿಯಿಂದ ತನ್ನದೇ ಬೆತ್ತಲೆ ಬಾತ್​ ರೂಂ ವಿಡಿಯೋ ಶೇರ್‌ | ನೆಟ್ಟಿಗರಿಂದ ಕಟು ಟೀಕೆ

Share the Article

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಲಿವುಡ್​ ನಟಿ, ಗಾಯಕಿ ಮೈಲಿ ಸೈರಸ್​ (Miley Cyrus) ಅವರು ಸಖತ್ ಸುದ್ದಿಯಲ್ಲಿದ್ದಾರೆ. ನಟಿ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದು, ತಮ್ಮ ಸಂಗೀತದಿಂದ ಖ್ಯಾತಿ ಪಡೆದಿದ್ದಾರೆ. ನಟಿ ಆಗಾಗ ತಮ್ಮ ವೈಯಕ್ತಿಕ ಕಾರಣಗಳಿಂದ ಸುದ್ದಿ ಆಗಿದ್ದುಂಟು. ಆದರೆ ಈ ಬಾರಿ ತಮ್ಮ ಒಂದು ಪೋಸ್ಟ್ ನಿಂದ ಜನರ ಟೀಕೆಗೆ ಗುರಿಯಾಗಿದ್ದಾರೆ.

ನಟಿ ಮೈಲಿ ಸೈರಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಕಾರಣ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ಬೆತ್ತಲಾಗಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಹಾಡು ರಿಲೀಸ್​ ಆಗುವ ನಗರ ಮತ್ತು ಸಮಯದ ಮಾಹಿತಿಯನ್ನು ಈ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ನಟಿ ಸೋಷಿಯಲ್ಸ್ ಗಳ ಟೀಕೆಗೆ ಒಳಗಾಗಿದ್ದಾರೆ.

ಈ ವೀಡಿಯೋವನ್ನು ಹಿಂಬದಿಯಿಂದ ಚಿತ್ರಿಸಲಾಗಿದ್ದು, ನಟಿ ಬಾತ್​ ರೂಮ್​ನಲ್ಲಿ ಬೆತ್ತಲಾಗಿ ಸ್ನಾನ ಮಾಡುತ್ತಿದ್ದಾರೆ. ಜೊತೆಗೆ ಹಾಡಿನ ಕೆಲವು ಸಾಲುಗಳನ್ನು ಗುನುಗುತ್ತಿದ್ದಾರೆ. ನಟಿಯ ವೀಡಿಯೋ ವೀಕ್ಷಿಸಿದ ಒಂದು ವರ್ಗದ ಜನರು ವ್ಹಾ!! ಎಂದರೆ ಇನ್ನೊಂದು ವರ್ಗದವರು ಟೀಕೆಯ ಮಳೆಗೈದಿದ್ದಾರೆ.

ಒಬ್ಬರು ನಟಿಯ ‘ಫ್ಲಾವರ್ಸ್​’ ಎಂಬ ಹೊಸ ಹಾಡು ರಿಲೀಸ್ ಆಗಲಿದೆ, ಈ ಹಾಡಿಗೆ ಪ್ರಚಾರ ನೀಡುವುದಕ್ಕಾಗಿ ಅವರು ಈ ರೀತಿ ಬೆತ್ತಲೆ ವೀಡಿಯೋ ಹಾಕಿದ್ದಾರೆ.‌ ಇದು ಸರಿಯಲ್ಲ ಎಂದು ಖಡಕ್ ಆಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ, ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ವೀಡಿಯೋ ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್ಸ್ ಗಳಿಸಿದೆ.

https://www.instagram.com/reel/CnMswYCgfdu/?igshid=Yzg5MTU1MDY=
Leave A Reply