ಮಾರುತಿ ಬಲೆನೊ ಕಾರುಗಳು ಅತಿಕಡಿಮೆ ಬೆಲೆಗೆ ಲಭ್ಯ | ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಸದ್ಯ ಮಾರುಕಟ್ಟೆಯಲ್ಲಿ ನೂತನ ಕಾರುಗಳು ಬಿಡುಗಡೆಯಾಗುತ್ತಲೇ ಇವೆ. ಇವುಗಳಂತು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಪ್ರಸಿದ್ಧ ಕಾರು ಕಂಪನಿಗಳು ಗ್ರಾಹಕರಿಗೆ ಒಂದಲ್ಲ ಒಂದು ಗುಡ್ ನ್ಯೂಸ್ ನೀಡುತ್ತಲೇ ಇವೆ. ಇತ್ತೀಚೆಗೆ ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಆಫರ್ ನೀಡಿತ್ತು. ಇದೀಗ ಈ ಮಾರುತಿ ಸುಜುಕಿಯ ಬಲೆನೊ ಕಾರು ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

 

ಬಲೆನೊ ಕಾರು ಡಿಸೆಂಬರ್ 2022 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಮನೆಮಾತಾಗಿದ್ದು, ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಸದ್ಯ ಈ ಬಲೆನೊ ಮಾರಾಟದಲ್ಲಿ ಉತ್ಕರ್ಷ ಕಂಡುಬಂದಿದ್ದು, ಇದರ ಬೆಲೆ 6.49 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಆದರೆ ನೀವು ಈ ಕಾರನ್ನು ಕಡಿಮೆ ಬಜೆಟ್ನಲ್ಲಿ ಖರೀದಿಸಬಹುದು. ಇದೀಗ ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಮಾರುತಿ ಸುಜುಕಿ ಬಲೆನೊ ಕಾರುಗಳು ಲಭ್ಯವಾಗಲಿದೆ. ನೀವು ದುಬಾರಿ ಕಾರುಗಳನ್ನು ಕೇವಲ 5 ಲಕ್ಷ ರೂಪಾಯಿಗಳಲ್ಲಿ ಖರೀದಿಸಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಬಲೆನೊ : ಮಾರುತಿ ಸುಜುಕಿಯ ಈ ಕಾರು 2019 ರ ಮಾಡೆಲ್ ನ ಪೆಟ್ರೋಲ್ ಎಂಜಿನ್ ಕಾರಾಗಿದ್ದು, ಇವರೆಗೆ ಒಟ್ಟು 87239 ಕಿಮೀ ಕ್ರಮಿಸಿದೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ, ಈ ಕಾರಿನ ಬೆಲೆ 5.44 ಲಕ್ಷ ರೂ. ಆಗಿದ್ದು, ಇದು ಜೆಮ್‌ಶೆಡ್‌ಪುರದಲ್ಲಿ ಲಭ್ಯವಿದೆ.

ಮಾರುತಿ ಬಲೆನೊ 1.2 DELTA : ಈ ಕಾರು 5 ಲಕ್ಷ ರೂ. ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದು ಕೂಡ 2019 ಮಾಡೆಲ್ ನ ಪೆಟ್ರೋಲ್ ಎಂಜಿನ್ ಕಾರಾಗಿದ್ದು, ಒಟ್ಟು 30661 ಕಿಮೀ ಕ್ರಮಿಸಿದೆ. ಆದರೆ ಮೂರನೇ ಮಾಲೀಕತ್ವ ಹೊಂದಿದೆ. ಇನ್ನೂ ಈ ಮಾರುತಿ ಬಲೆನೊ 1.2 DELTA ಕಾರು ಹೋಶಿಯಾರ್‌ಪುರದಲ್ಲಿ ಮಾರಾಟಕ್ಕೆ ಲಭ್ಯವಿದೆ.

ಮಾರುತಿ ಬಲೆನೊ 1.2 ಡೆಲ್ಟಾ : ಇದು ಕೂಡ 2019ರ ಮಾಡೆಲ್ ಕಾರ್ ಆಗಿದ್ದು, ಒಟ್ಟು 94199 ಕಿಮೀ ಓಡಿದೆ. ಸದ್ಯ ಈ ಮಾರುತಿ ಬಲೆನೊ 1.2 ಡೆಲ್ಟಾ ಕಾರು 5.5 ಲಕ್ಷ ರೂ.ಗೆ ಲಭ್ಯವಾಗಲಿದ್ದು, ಈ ಪೆಟ್ರೋಲ್ ಎಂಜಿನ್ ಕಾರು ಮೊದಲನೇ ಮಾಲೀಕತ್ವದಲ್ಲಿದೆ. ಈ ಕಾರು ಬೊಕಾರೊದಲ್ಲಿ ಮಾರಾಟಕ್ಕಿದೆ.

ಮಾರುತಿ ಬಲೆನೊ 1.2 ಡೆಲ್ಟಾ : ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಮತ್ತೊಂದು ಮಾರುತಿ ಬಲೆನೊ 1.2 ಡೆಲ್ಟಾದ ಕಾರಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು 2021ರ ಮಾದರಿಯದ್ದಾಗಿದ್ದು, ಇವರೆಗೆ ಒಟ್ಟು 58069 ಕಿಮೀ ಕ್ರಮಿಸಿದೆ. ಸದ್ಯ ಈ ಪೆಟ್ರೋಲ್ ಎಂಜಿನ್ ಕಾರು 5.7 ಲಕ್ಷ ರೂ. ಗಳಿಗೆ ಲಭ್ಯವಾಗಲಿದೆ.

Leave A Reply

Your email address will not be published.