Kantara : ಆಸ್ಕರ್‌ ಪ್ರಶಸ್ತಿಗೆ ʼಕಾಂತಾರʼ ಇನ್ನಷ್ಟು ಹತ್ತಿರ : 2 ವಿಭಾಗಗಳಲ್ಲಿ ಅರ್ಹತೆ ಪಡೆದ ಸಿನಿಮಾ | ಖುಷಿ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌

ಕಾಂತಾರ ಸಿನೆಮಾ ಒಂದಲ್ಲ ಒಂದು ವಿಚಾರಕ್ಕೆ ದಿನಂಪ್ರತಿ ಸುದ್ದಿಯಲ್ಲಿದೆ. ಭರ್ಜರಿ ಯಶಸ್ಸಿನ ನಗೆ ಬೀರುತ್ತಿರುವ ಸಿನೆಮಾದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಈ ಹಿಂದೆ ಆಸ್ಕರ್ ರೇಸ್ ಗೆ ಕಾಂತಾರ ಸಿನೆಮಾ ಎಂಟ್ರಿ ಕೊಡುವ ಬಗ್ಗೆ ಮಾಹಿತಿ ಹರಿದಾಡುತ್ತಿತ್ತು.

 

ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಆರ್ಭಟ ಕಮ್ಮಿ ಆಗಿಲ್ಲ.

ಎಸ್ಎಸ್ ರಾಜಮೌಳಿಯವರ RRR ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಅವರ ಆಕ್ಷನ್ ಥ್ರಿಲ್ಲರ್ ಕಾಂತಾರ ಸಿನಿಮಾವನ್ನು 2023 ರ ಆಸ್ಕರ್ ನಾಮಿನೇಷನ್​ ಕಳುಹಿಸಲಾಗಿದ್ದು ಈ ಬಗ್ಗೆ ವಿಜಯ್ ಕಿರಗಂದೂರು ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದರು. ಆಸ್ಕರ್ ಅಂಗಳಕ್ಕೆ ಕನ್ನಡದ ಕಾಂತಾರ ಸಿನಿಮಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದು, ಕೊನೆ ಕ್ಷಣದಲ್ಲಿ ಕಾಂತರ ತಂಡ ಆಸ್ಕರ್ ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದೀಗ ಆಸ್ಕರ್ ರೇಸ್‌ನಲ್ಲಿ ಭಾಗಿಯಾಗಲು ಕಾಂತಾರ ಸಿನಿಮಾಗೆ ಅಧಿಕೃತ ಎಂಟ್ರಿ ಸಿಕ್ಕಿದ್ದಕ್ಕಾಗಿ ಈ ಬಗ್ಗೆ ಹೊಂಬಾಳೆ ತಂಡ ಮಾಹಿತಿ ಹಂಚಿಕೊಂಡಿದೆ.

ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ಮಿಂಚಿರುವ ಸಿನಿಮಾವಾಗಿದ್ದು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ತೆರೆ ಹಂಚಿಕೊಂಡಿದ್ದು, ಇನ್ನೂ ಉಳಿದಂತೆ ಕಿಶೋರ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಅನೇಕ ದಾಖಲೆಗಳನ್ನು ಸೃಷ್ಟಿ ಮಾಡಿದ್ದು, ಇದೀಗ ಕಾಂತಾರ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಆಸ್ಕರ್ ಅವಾರ್ಡ್ ಪಡೆಯಲು ಕನ್ನಡದ ಕಾಂತಾರ ಸಿನಿಮಾ ಅಧಿಕೃತ ಎಂಟ್ರಿ ನೀಡಿದ್ದು, ಆಸ್ಕರ್ ರೇಸ್‌ನಲ್ಲಿ ಭಾಗಿಯಾಗಲು ಕಾಂತಾರ ಸಿನಿಮಾ ಅಧಿಕೃತ ಎಂಟ್ರಿ ಪಡೆದುಕೊಂಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ‘ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್‌ ಅರ್ಹತೆ ಪಡೆದುಕೊಂಡಿದೆ ಎಂಬ ವಿಚಾರ ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದ್ದು, ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದ್ದು, ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್‌ಗೆ ಅರ್ಹತೆ ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಆಸ್ಕರ್‌ಗೆ ರೇಸ್‌ಗೆ ಸೇರಿರುವ ಕಾಂತಾರ ಸಿನಿಮಾ ಆಸ್ಕರ್​​ ಪ್ರಶಸ್ತಿಯ ಗರಿಯನ್ನು ಬಾಚಿಕೊಳ್ಳಲಿದೆಯೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಒಟ್ಟು 301 ಚಿತ್ರಗಳ ಪೈಕಿ ಕಾಂತಾರ ಚಿತ್ರಕ್ಕೂ ಅರ್ಹತೆ ಸಿಕ್ಕಿದ್ದು, ಜನವರಿ 24 ರಂದು ಆಸ್ಕರ್​ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ.

ಆಸ್ಕರ್ ಅಂಗಳದಲ್ಲಿರುವ ಕಾಂತಾರ ಪ್ರಶಸ್ತಿ ಗೆದ್ದು ಬೀಗಲಿದೆಯೆ ಎಂದು ಕಾದು ನೋಡಬೇಕಾಗಿದ್ದು, ಈ ವಿಚಾರ ತಿಳಿದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಕಾಂತಾರ ತಂಡಕ್ಕೆ ಎಲ್ಲರೂ ಶುಭಹಾರೈಸುತ್ತಿದ್ದಾರೆ. ಆಸ್ಕರ್ ಬಿರುದು ಗೆದ್ದು ಬರಲಿ ಎಂದು ಆಶಿಸುತ್ತಿದ್ದಾರೆ.

Leave A Reply

Your email address will not be published.