ರೀಲ್ಸ್‌ ಮೂಲಕ ತಮಾಷೆ ಮಾಡಿ ಸಂಕಷ್ಟದಲ್ಲಿ ಸಿಲುಕಿದ ನಿವಿ ಚಂದು | ಅಪ್ಪ ಆಗ್ತಿರೋ ಬಗ್ಗೆ ಬಂತು ಸ್ಪಷ್ಟನೆ, ಏನಂದ್ರು ರ್ಯಾಪರ್‌ ?

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಕ್ಯೂಟ್ ಜೋಡಿ ನಿವಿ ಹಾಗೂ ಚಂದನ್ ಇದೀಗ ತಮ್ಮ ರೀಲ್ ಪ್ರಹಸನದಿಂದ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

 

ಕನ್ನಡ ಕಿರುತೆರೆ ಸೆಲೆಬ್ರಿಟಿ ಆಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಮಾಡುವ ಉದ್ದೇಶದಿಂದ ಮಾಡಿರುವ ವೀಡಿಯೋ ಈಗ ದೊಡ್ದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಡಿನ ಮೂಲಕ ಮೋಡಿ ಮಾಡುವ ಚಂದನ್ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ ಬಗ್ಗೆ ಎಲ್ಲೆಡೆ ಬಿರುಸಿನ ಚರ್ಚೆ ನಡೆಯುತ್ತಿವೆ.

ಈ ನಡುವೆ ಫಾದರ್‌ ಅನ್ನೋ ಇಂಗ್ಲಿಷ್‌ ತಮಾಷೆ ವಿಡಿಯೋ ಮಾಡಿ ಅಪ್ಲೋಡ್ ಮಾಡಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿ ಕ್ಯೂಟ್ ಜೋಡಿ ಖುಷಿ ಸುದ್ದಿ ನೀಡಲಿದ್ದಾರೆ ಎಂದುಕೊಂಡು ನಿವಿ ಚಂದನ್ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕಾಮೆಂಟ್ಸ್‌ನಲ್ಲಿ ಚಂದನ್ ಅವರು ಈ ಬಗ್ಗೆ ಅಭಿಮಾನಿಗಳಿಗೆ ಕ್ಲಾರಿಟಿ ನೀಡಿದ್ದಾರೆ.

ಹೌದು!! ರೀಲ್ಸ್‌ ಮೂಲಕ ತಮಾಷೆ ಮಾಡಲು ಹೋಗಿ ಸಂಕಷ್ಟದಲ್ಲಿ ಸಿಲುಕಿಕೊಂಡ ನಿವಿ- ಚಂದು. ಅಪ್ಪ ಆಗಿಲ್ಲ ಕಣ್ರೋ ಬಿಡ್ರೋ..ಎಂದು ಬೇಡಿಕೊಳ್ಳುವ ಹಾಗೆ ಆಗಿಬಿಟ್ಟಿದ್ದಾರೆ. ‘ಸ್ನೇಹಿತರೆ ನಾನು ತಂದೆ ಆಗುವ ವಿಚಾರವನ್ನು ನಿವಿನೇ ರಿವೀಲ್ ಮಾಡಬೇಕಾಗಿದ್ದು, ಸದ್ಯ ಮಾಡಿರುವ ವೀಡಿಯೋ ತಮಾಷೆ ಮಾಡುವ ಸಲುವಾಗಿ ಅಷ್ಟೇ!!

ಶುಭಾಶಯಗಳನ್ನು ತಿಳಿಸುವುದಕ್ಕೆ ತುಂಬಾ ಜನ ಕರೆ ಮಾಡುತ್ತಿದ್ದು, ಮಗು ಮಾಡಿಕೊಳ್ಳಲು ನಾವು ಇನ್ನೂ ತಯಾರಾಗಿಲ್ಲ. ನಿಜಕ್ಕೂ ತಂದೆ-ತಾಯಿ ಆಗುವಾಗ ನಾವೇ ಅನೌನ್ಸ್‌ ಮಾಡಲಿದ್ದೇವೆ. ಏನೇ ಹೇಳಿ ಇಂಗ್ಲಿಷ್ ಭಾಷೆ ತುಂಬಾನೇ ಫನ್ನಿ ಎಂದು ಹೇಳಿಕೊಂಡಿದ್ದು Fat + Her = Father, not Fat her’ ಎಂದು ಚಂದನ್ ಶೆಟ್ಟಿ ಬರೆದುಕೊಂಡಿದ್ದಾರೆ.

ನಿವೇದಿತಾ ಮತ್ತು ಚಂದನ್ ಏನೇ ಮಾಡಿದ್ದರೂ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೆ ಇರುತ್ತದೆ. ಬಿಗ್ ಬಾಸ್‌ ಸೀಸನ್ 5ರಿಂದ ಹೊರ ಬಳಿಕ ಇಬ್ಬರು ಸ್ನೇಹಿತರಾಗಿ ಆ ಬಳಿಕ, 2019ರಲ್ಲಿ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ಚಂದನ್ ರೊಮ್ಯಾಂಟಿಕ್ ಸಾಂಗ್ ಹಾಡಿ ಮಂಡಿಯೂರಿ ಪ್ರಪೋಸ್ ಮಾಡಿದ್ದು ನೆನಪಿರಬಹುದು. ಆರಂಭದಲ್ಲಿ ತಮಾಷೆ ಎಂದು ತಿಳಿದುಕೊಂಡು ನಿವಿಗೆ ನಿಜ ಎಂದು ತಿಳಿದು ವೇದಿಕೆ ಎದುರು ಕುಳಿತುಕೊಂಡಿದ್ದ ತಂದೆ ತಾಯಿ ಮುಖವನ್ನು ನೋಡಿ ನಿವಿ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟು ತಮ್ಮ ಬಾಳಿಗೆ ಬಾಳಿನ ಜೊತೆಗಾರನಾಗಲು ಅನುಮತಿ ಕೊಟ್ಟು ಬಿಟ್ಟಿದ್ದು ಹಳೆ ವಿಚಾರ.

ಸಾಮಾನ್ಯವಾಗಿ ನಿವೇದಿತಾ ತಮಾಷೆ ವಿಡಿಯೋಗಳನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಾರೆ. ಹೀಗಾಗಿ ಈ ಸಲ ಚಂದನ್ ನಿವಿಗೆ ಫೂಲ್ ಮಾಡಲು ಹೊರಟಿದ್ದು, ಫಾದರ್‌ ಅನ್ನೋ ಪದ ಹಿಡಿದುಕೊಂಡು ಮಂಗ ಮಾಡುವ ಪ್ರಯತ್ನ ನಡೆಸಿದ್ದಾರೆ. ಮೊದಲು Fat ಅಂದ್ರೆ ಏನು ಎಂದು ಅಕ್ಷರ ಬಿಡಿಸಿ ಚಂದನ್ ಹೇಳುತ್ತಾರೆ. ಆಗ ನಿವಿ ಫ್ಯಾಟ್ ಎನ್ನುತ್ತಾರೆ ಮತ್ತೊಮ್ಮೆ Her ಅನ್ನೋ ಪದದ ಅಕ್ಷರಗಳನ್ನು ಬಿಡಿಸಲು ಕೇಳುತ್ತಾರೆ. ಆಗ ಹರ್‌ ಎನ್ನುತ್ತಾರೆ. ಎರಡನ್ನೂ ಹೊಟ್ಟೆಗೆ ಸೇರಿಸಿದ್ದರೆ ಯಾವ ಪದ ಆಗುತ್ತೆ ಎಂದು ಕೇಳಿದ್ದಾರೆ.

https://www.instagram.com/reel/CnLzOu3NdQR/?igshid=Yzg5MTU1MDY=

ಅದಕ್ಕೆ ನಿವಿ ಫಾದರ್ ಎಂದು ಹೇಳುವುದನ್ನು ಬಿಟ್ಟು ಫ್ಯಾಟ್‌ ಹರ್‌ ಎನ್ನುತ್ತಾರೆ. ಇದು ತಪ್ಪು… ತಪ್ಪು… ಫ್ಯಾಟ್‌ ಹರ್‌ ಅಲ್ಲ ಫಾದರ್‌ ಎಂದು ಚಂದನ್ ಸರಿ ಮಾಡುತ್ತಾರೆ. ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿ ಇದನ್ನು ನೋಡಿದ ಮಂದಿ ಕ್ಯೂಟ್ ಜೋಡಿ ಮಗು ವಿನ
ನಿರೀಕ್ಷೆಯಲ್ಲಿದ್ದಾರೆ ಎಂದುಕೊಂಡು ಕಾಮೆಂಟ್ ಮಾಡಿ ಶುಭ ಹಾರೈಸಲು ಶುರುವಿಟ್ಟಾಗ ಚಂದನ್ ಈ ಅನುಮಾನಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

Leave A Reply

Your email address will not be published.