50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲೇ ಬಿಟ್ಟು ಗಗನಕ್ಕೇರಿದ ವಿಮಾನ! ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರಯಾಣಿಕರು!
ವಿಮಾನವೊಂದು ಟೇಕಾಫ್ ಆಗುವಾಗ ತನ್ನ 50 ಜನ ಪ್ರಯಾಣಿಕರನ್ನು ಎರ್ಪೋರ್ಟ್ ನಲ್ಲಿಯೇ ಬಿಟ್ಟು ಆಕಾಶಕ್ಕೆ ಹಾರಿದ ಘಟನೆ ನಿನ್ನೆ ನಡೆದಿದೆ.
ದೆಹಲಿಗೆ ಹೋಗಬೇಕಿದ್ದ ಗೋ ಫಸ್ಟ್ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಅಲ್ಲೇ ಬಿಟ್ಟು ಟೇಕಾಫ್ ಆಗಿರುವ ಘಟನೆ ವರದಿಯಾಗಿದೆ.
ಸೋಮವಾರ ಬೆಳಗ್ಗೆ 6:30ರ ವೇಳೆಗೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋ ಫಸ್ಟ್ ವಿಮಾನ ಜಿ8116 ತನ್ನ ಸರಿಯಾದ ಸಮಯಕ್ಕೆ ಟೇಕಾಫ್ ಆಗಿದೆ. ಆದರೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಗಗನಕ್ಕೇರಿದೆ. ಈ ಬಗ್ಗೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ವಿಮಾನಯಾನ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂದು ಸಂಸ್ಥೆಯ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಯಾಣಿಕರು ಬೋರ್ಡಿಂಗ್ ಪಾಸ್‌ಗಳನ್ನು ಹೊಂದಿದ್ದು, ಲಗೇಜ್‌ಗಳನ್ನೂ ಪರಿಶೀಲಿಸಲಾಗಿತ್ತು. ಆದರೆ ಪ್ರಯಾಣಿಕರು ವಿಮಾನದೆಡೆಗೆ ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿಯೇ ಉಳಿದುಕೊಂಡಿದ್ದರು. ಈ ವೇಳೆ ವಿಮಾನ ಟೇಕಾಫ್ ಆಗಿದೆ. ಇದು ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯವಾಗಿದೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
ಕೆಲ ಪ್ರಯಾಣಿಕರು ಟ್ವೀಟ್‌ನಲ್ಲಿ ಆರೋಪ ಮಾಡಿದಕ್ಕೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿ ನಮ್ಮಿಂದ ಉಂಟಾಗಿರುವ ಅನಾನುಕೂಲತೆಗೆ ವಿಷಾದಿಸುತ್ತೇವೆ. ಘಟನೆ ಕುರಿತು ಪ್ರಯಾಣಿಕರಲ್ಲಿ ಕ್ಷಮೆ ಕೇಳುತ್ತೇವೆ. ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದೆ.