ಅರೇ ಈ app ಬಳಸಿದರೆ ಪ್ರತಿ ತಿಂಗಳು ಸಿಗುವುದು 1000 ರೂಪಾಯಿ ಕ್ಯಾಶ್ ಬ್ಯಾಕ್ | Phone Pay, Google Pay ಗೆ ಪೈಪೋಟಿ ಕೊಡುತ್ತಾ ಈ app?
ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), ಪೇಟಿಎಂ (Paytm) ನಂತಹ ಆ್ಯಪ್‌ಗಳು ನೀಡುತ್ತಿವೆ.
ಹೇಳಿ ಕೇಳಿ ಡಿಜಿಟಲ್ ಯುಗ.. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬ ಮಾಯಾವಿ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಅನುವು ಮಾಡಿಕೊಟ್ಟಿದೆ.
Google Pay ಮತ್ತು Phone Pay ಬಳಸುವವರಿಗೆ ಪ್ರತಿ ಬಾರಿಯೂ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ ಆದರೆ ನಾವು ಹೇಳಲು ಹೊರಟಿರುವ ಅಪ್ಲಿಕೇಶನ್ ನಲ್ಲಿ ತಿಂಗಳಿಗೆ 1 ಸಾವಿರ ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದ್ದು, ಇದಕ್ಕಾಗಿ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಈ ಪೇಮೆಂಟ್ ಅಪ್ಲಿಕೇಶನ್‌ನ ಹೆಸರು ಭಾರತ್ ಪೆ ಎಂದಾಗಿದ್ದು, ಈ ಕಂಪನಿಯು ತನ್ನ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು ಈ ಆಪ್ ಮೂಲಕ ವಹಿವಾಟು ನಡೆಸಿದ್ದಲ್ಲಿ ತಿಂಗಳಿಗೆ 1 ಸಾವಿರ ರೂಪಾಯಿ ಗಳಿಸಲು ಅವಕಾಶವಿದೆ.
ಭಾರತ್ ಪೇ ಪ್ರಸ್ತುತ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಹೂಡಿಕೆ ಮಾಡಬಹುದಾಗಿದೆ. ಮಾರುಕಟ್ಟೆಗೆ ಹೋಲಿಸಿದರೆ, ಇಲ್ಲಿ ಮಾಡುವ ಹೂಡಿಕೆ ಮೇಲೆ ಉತ್ತಮ ಬಡ್ಡಿ ಪಡೆಯಬಹುದಾಗಿದೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿ ನಿಮಗೆ ದೈನಂದಿನ ಬಡ್ಡಿಯನ್ನು ನೀಡಲಾಗುತ್ತದೆ. ಇದರಿಂದಾಗಿ ಮಾಸಿಕವಾಗಿ ಹೆಚ್ಚು ಗಳಿಸುವ ಅವಕಾಶ ಕಲ್ಪಿಸಲಾಗಿದೆ. ಈ ಖಾತೆಗೆ 1 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ದಿನಕ್ಕೆ ಸುಮಾರು 32 ರೂ.ಗಳ ಬಡ್ಡಿಯನ್ನು ನೀಡಲಾಗುತ್ತದೆ. ಈ ಮೂಲಕ ತಿಂಗಳಿಗೆ 1000 ರೂ. ಗಳಿಸಬಹುದು.
ಇದಕ್ಕಾಗಿ ಏನು ಮಾಡಬೇಕು ? ಎಂದು ಚಿಂತಿಸುತ್ತಿದ್ದಿರಾ??
ಮೊದಲಿಗೆ, ನೀವು ಅಪ್ಲಿಕೇಶನ್‌ನಲ್ಲಿ“contribute money” ಆಯ್ಕೆಯನ್ನು ಕ್ಲಿಕ್ ಮಾಡಬೇಕು.. ಅಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ. ಆ ಬಳಿಕ, “Link Now” ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲಿ ಡ್ರಾಪ್ ಡೌನ್ ಮೆನುಗೆ ಹೋಗಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಬೇಕು. ಇದರ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿಕೊಂಡು OTP ಸಹಾಯದಿಂದ ವ್ಯಾಲಿಡೇಟ್ ಮಾಡಬೇಕು.
ಆಗ ನಿಮ್ಮ ಆಧಾರ್ KYC ಪೂರ್ಣಗೊಳ್ಳುತ್ತದೆ. ಇದರ ಫೋಟೋ ತೆಗೆದುಕೊಂಡು ಫಾರ್ಮ್ ಅನ್ನು ಸಬ್ಮಿಟ್ ಮಾಡಬೇಕು. ಇಲ್ಲಿ ನೀವು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಈ ಒಪ್ಪಿಗೆ ನೀಡಿದ ನಂತರವೇ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಕೊನೆಗೆ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಬೇಕಾಗುತ್ತದೆ. ಈ ಹಣದ ಮೇಲೆ 12% ವರೆಗೆ ಬಡ್ಡಿಯನ್ನು ಪಡೆಯಬಹುದಾಗಿದೆ.