Driving license Testing Rules: ಡಿಎಲ್ ಆಗ್ಬೇಕಾದ್ರೆ ಈ 24 ರೂಲ್ಸ್ ಪಾಲಸಿ | ಸಾರಿಗೆ ಆಯುಕ್ತರಿಂದ ಹೊಸ ನಿಯಮ
ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ.ಹೀಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಯಾವ ಸಮಯದಲ್ಲಿ ಮಾಡುತ್ತೀರಿ ಜೊತೆಗೆ ಹೇಗೆ ಮಾಡುತ್ತೀರಿ ಎನ್ನುವ ವಿಚಾರ ಕೂಡ ಗಮನಿಸಬೇಕಾದ ಸಂಗತಿಯಾಗಿದೆ.
ಇದೀಗ ಸಾರಿಗೆ ಆಯುಕ್ತರು ಡಿ ಎಲ್ ಟೆಸ್ಟ್ನ ಹೊಸ ನಿಯಮಗಳನ್ನು ಜಾರಿ ಮಾಡಿದ್ದು, ಇದು ರಸ್ತೆಯಲ್ಲಿ ನಡೆಯುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನ 1989 ನಿಯಮ 15ರ ಅಡಿಯಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಯಾವುದೇ ವಾಹನಗಳನ್ನು ಡ್ರೈವ್ (Drive) ಮಾಡಬೇಕಾದರೂ ಲೈಸೆನ್ಸ್ ಎಂಬುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದುವರೆಗೆ ಡ್ರೈವಿಂಗ್ ಲೈಸೆನ್ಸ್ ಮಾಡಬೇಕಾದರೆ ಅಷ್ಟೊಂದು ಯಾವುದೇ ರೀತಿಯ ನಿಯಮಗಳಿರಲಿಲ್ಲ. ಆದರೆ ಇನ್ಮುಂದೆ ಡಿಎಲ್ ಟೆಸ್ಟಿಂಗ್ (Driving License Test) ಮಾಡಿಸುವ ವೇಳೆ 24 ನಿಯಮಗಳನ್ನು (DL Test 24 Rules) ಪಾಲಿಸಲೇ ಬೇಕು. ಈ ನಿಯಮಗಳಲ್ಲಿ ಪಾಸಾದರೆ ಮಾತ್ರ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಕೈಗೆ ಸೇರಲಿದೆ.
ಇದೀಗ ಈ ಹೊಸ 24 ನಿಯಮಗಳನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಜಾರಿ ಮಾಡಿದ್ದು, ಸಾರಿಗೆ ಇಲಾಖೆಯಿಂದ ಬಿಡುಗಡೆಯಾದ ಈ ಸುದ್ದಿಯನ್ನು ನೋಡಿ ಜನರಿಗೆ ಶಾಕ್ ಆಗೋದು ಗ್ಯಾರಂಟಿ!!!
ಹೊಸ ರೂಲ್ಸ್ ಕುರಿತು ಸಾರಿಗೆ ಅಧಿಕಾರಿಗಳ ಅಭಿಪ್ರಾಯ ಹೀಗಿದೆ:
ಪರೀಕ್ಷೆಗೆ ಬಂದ ಅಭ್ಯರ್ಥಿಗಳು ವಾಹನವನ್ನು ಸ್ಟಾರ್ಟ್ ಮಾಡಿದ ಕೂಡಲೇ ಆತನಿಗೆ ವಾಹನ ಬಿಡಲು ತಿಳಿದಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಆ ಬಳಿಕ ಆತನ ಬುದ್ಧಿವಂತಿಕೆಯ ಮೇಲೆ ಪಾಸ್ ಮಾಡಬಹುದಾಗಿದ್ದು, ಈ ಹೊಸ ರೂಲ್ಸ್ನಿಂದ ದಿನಕ್ಕೆ 4 ಮಂದಿಯನ್ನು ಮಾತ್ರ ಪರೀಕ್ಷಿಸಬಹುದಾಗಿದೆ. ಈ ರೂಲ್ಸ್ ಪ್ರಕಾರ ಒಬ್ಬರ ಡಿಎಲ್ ಟೆಸ್ಟ್ ಮಾಡಲು ಸರಿಸುಮಾರು ಒಂದು ಗಂಟೆಯಾದರೂ ಬೇಕಾಗುತ್ತದೆ. ಆದ್ದರಿಂದ 4 ಮಂದಿಯನ್ನು ಮಾತ್ರ ಟೆಸ್ಟ್ ಮಾಡಬಹುದು ಎಂದು ಹೇಳಿದ್ದಾರೆ.
ಒಂದು ಆರ್ಟಿಒ ಕಚೇರಿಗೆ ನಿತ್ಯ 60 ರಿಂದ 100 ಅರ್ಜಿಗಳು ಬರುತ್ತವೆ. ಈ ಮೂಲಕ ದಿನಕ್ಕೆ ನಾಲ್ವರಂತೆ 100 ಅರ್ಜಿಗಳನ್ನು ಮಾಡಲು 24 ದಿನಗಳು ಬೇಕಾಗುತ್ತವೆ. ಇದರಿಂದ ತುಂಬಾ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಈ ಹೊಸ ನಿಯಮಕ್ಕಿಂತ ಹಿಂದೆ ಇದ್ದ ವ್ಯವಸ್ಥೆಯೇ ಒಳ್ಳೆಯದು ಎಂದು ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಡಿಎಲ್ ಟೆಸ್ಟ್ನ ಹೊಸ ನಿಯಮಗಳು ಹೇಗಿವೆ?
ಲೈಸೆನ್ಸ್ ಪರೀಕ್ಷೆ ವೇಳೆ ಅಭ್ಯರ್ಥಿಗಳು ಟಾಪ್ ಗೇರ್ಗಳನ್ನು ಸಹ ಬಳಸಿ ಡ್ರೈವ್ ಮಾಡಬೇಕು.
ಏಕಾಗ್ರತೆಯಲ್ಲಿ ಡ್ರೈವಿಂಗ್ ಮಾಡಬೇಕು.ಯಾವುದೇ ರೀತಿಯ ಬೇರೆ ಗಮನಗಳಿರಬಾರದು.
ಪರೀಕ್ಷೆಯ ವೇಳೆ ಬೇರೆ ವಾಹನವನ್ನ ಯಾವ ರೀತಿ ಓಪರ್ ಟೇಕ್ ಮಾಡಬೇಕೆಂದು ತಿಳಿದುಕೊಂಡಿರಬೇಕು. ಅದೇ ರೀತಿ ಓವರ್ ಟೇಕ್ ಸಹ ಮಾಡಬೇಕು.
ಸ್ವಯಂ ಚಾಲಿತ ಗೇರ್ ವಾಹನಗಳನ್ನು, ಟ್ರ್ಯಾಕ್ಗಳಲ್ಲಿ ಟಾಪ್ ಗೇರ್ಗಳನ್ನ ಬಳಸಬಹುದಾಗಿದೆ.
ಚಲಿಸುತ್ತಿರುವಾಗ ಓವರ್ ಟೇಕ್ ಮಾಡಲು ಮುಂದಾದಾಗ ಸರಿಯಾದ ರೀತಿಯಲ್ಲಿ ಕೈಸನ್ನೆ ಮಾಡುವ ಮೂಲಕ ಅಥವಾ ವಾಹನದಲ್ಲಿ ನೀಡಲಾದ ಇಂಡಿಗೇಟರ್ ಲೈಟ್ ಮೂಲಕ ಸೂಚನೆಯನ್ನು ಹಿಂಬದಿಯವರಿಗೂ, ಮುಂದೆ ಇರುವವರಿಗೂ ನೀಡಬೇಕು.
ಹಿಂಬದಿಯ ವಾಹನಗಳು ಕಾಣಿಸುವ ಹಾಗೆ ಕನ್ನಡಿಯನ್ನು ಇರಿಸಬೇಕು ಜೊತೆಗೆ ನಂತರ ಡ್ರೈವಿಂಗ್ ಮಾಡಬೇಕು.ಡಿಎಲ್ ಟೆಸ್ಟ್ ವೇಳೆ ಎಲ್ಲಾ ಗೇರ್ ಅನ್ನು ಹಾಕಿ ಡ್ರೈವ್ ಮಾಡಬೇಕು.
ಡ್ರೈವಿಂಗ್ ಟೆಸ್ಟ್ ಅನ್ನು ಲಭ್ಯವಿರುವ ಸ್ಥಳದಲ್ಲಿಯೇ ಟೆಸ್ಟ್ ಮಾಡಬೇಕು.ಟ್ರಾಫಿಕ್ಗಳಲ್ಲಿ ಸಿಕ್ಕಿಹಾಕಿಕೊಂಡಾಗ ಟಾಪ್ ಗೇರ್ನಿಂದ ತಕ್ಷಣ ಮೊದಲನೇ ಇಲ್ಲವೇ ಎರಡನೇ ಗೇರ್ಗೆ ಬದಲಾಯಿಸಬೇಕು.30-40 ಕಿ.ಮೀ ವೇಗದಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಟಾಪ್ ಗೇರ್ ಹಾಗಿಯೇ ಡ್ರೈವಿಂಗ್ ಮಾಡಬೇಕು.
ಎಂಜಿನ್ ಪ್ರಾರಂಭಿಸುವ ಮೊದಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಇನ್ನು ಇಳಿಜಾರಿನ ಜಾಗದಲ್ಲಿ ವಾಹನಗಳನ್ನು ಚಲಾಯಿಸುವಾಗ ಗೇರ್ ಅನ್ನು ಮತ್ತೆ ಕಡಿಮೆ ಮಾಡಬೇಕು.ಒಂದೇ ವೇಗದಲ್ಲಿ ಸುರಕ್ಷಿತವಾಗಿ, ಒಂದೇ ದಾರಿಯಲ್ಲಿ ಸಾಗುತ್ತಿರುವಾಗ ಹಂತ ಹಂತವಾಗಿ ಎಲ್ಲಾ ಗೇರ್ಗಳನ್ನು ಬಳಸಬೇಕು.
ಸರಿಯಾದ ಸೂಚನೆಗಳೊಂದಿಗೆ ಮತ್ತು ಸರಿಯಾದ ಕಾಳಜಿಯೊಂದಿಗೆ ಲೇನ್ಗಳನ್ನು ಬದಲಾಯಿಸಬೇಕು.ರಸ್ತೆಗಳಲ್ಲಿ ಯಾವಾಗಲೂ ಎಡಬದಿಗಳಲ್ಲೇ ವಾಹನಗಳನ್ನು ಚಲಾಯಿಸಬೇಕು.ಬೇರೆ ರಸ್ತೆಗೆ ಇಲ್ಲವೇ ಜಂಕ್ಷನ್ಗಳಲ್ಲಿ ವಾಹನ ಮೂವ್ ಮಾಡುವಾಗ ಜಾಗರೂಕತೆ ವಹಿಸಬೇಕು.
ಸರಿಯಾದ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು. ಬಲಕ್ಕೆ ಇಲ್ಲವೇ ಎಡಕ್ಕೆ ತಿರುಗುವುದಾದರೆ ವಾಹನ ಎಲ್ಲಿದೆ ಎಂಬುದನ್ನು ನೋಡಿಕೊಳ್ಳಬೇಕು. ದಾಟುವ ಮೊದಲು ಬಲ, ಎಡ ಬದಿಗಳನ್ನು ನೋಡಿಕೊಳ್ಳಬೇಕು.ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಸರಿಯಾಗಿ ಮತ್ತು ನಿರ್ದಿಷ್ಟವಾಗಿ ಎಡ ಅಥವಾ ಬಲಕ್ಕೆ ತೆಗೆಯಬೇಕು.
ಸಂಚಾರ ಚಿಹ್ನೆಗಳು, ಟ್ರಾಫಿಕ್ ಲೈಟ್ಗಳನ್ನು, ಸಂಚಾರ ನಿಯಂತ್ರಕರು, ಪೊಲೀಸರು ನೀಡಿದ ಸೂಚನೆಗಳ ಮೇಲೆ ಸರಿಯಾಗಿ ವಾಹನವನ್ನು ಚಲಾಯಿಸಬೇಕು.ಇಲ್ಲವೇ ಇತರ ಚಾಲಕರು ನೀಡುವ ಸೂಚನೆಗಳನ್ನು ಗಮನಿಸಬೇಕು.
ಇಳಿಜಾರಿನಲ್ಲಿ ನಿಲ್ಲಿಸುವಾಗ ಮುಖ್ಯವಾಗಿ ಹ್ಯಾಂಡ್ಬ್ರೇಕ್ ಅನ್ನು ಬಳಸಬೇಕು. ಇದರ ಜೊತೆಗೆ ಸ್ಟಾರ್ಟ್ ಮಾಡುವಾಗ ಸರಿಯಾಗಿ ಹಿಂದೆ, ಮುಂದೆ ಕನ್ನಡಿಯಲ್ಲಿ ನೋಡಿಕೊಂಡು ಸಿಗ್ನಲ್ ನೀಡುವ ಮೂಲಕ ವಾಹನ ಚಲಾವಣೆ ಮಾಡಬೇಕು.
ಸಂಚರಿಸುವಾಗ ಪಾದಚಾರಿಗಳು, ಇತರ ವಾಹನಗಳ ಚಾಲಕರು ಮತ್ತು ಸೈಕ್ಲಿಸ್ಟ್ಗಳನ್ನೂ ಗಮನಿಸಿಕೊಂಡು ಚಲಾಯಿಸಬೇಕು.ರಸ್ತೆಗಳನ್ನು ದಾಟುವ ವ್ಯಕ್ತಿಗಳಿಗೆ ಅವಕಾಶವನ್ನು ನೀಡಬೇಕು.
ರಸ್ತೆಗಳ ಗುಣಮಟ್ಟ ಹಾಗೂ ನಿಮ್ಮ ನಿಯಂತ್ರಣಕ್ಕೆ ಅನುಗುಣವಾಗಿ ವಾಹನದ ವೇಗವನ್ನೂ ನಿಯಂತ್ರಿಸಬೇಕು.
ಅಗತ್ಯವಾದ ಸಂದರ್ಭಗಳಲ್ಲಿ ಮತ್ತು ಬೇರೆ ಯಾವುದೇ ಸಂದರ್ಭಗಳು ಎದುರಾದಾಗ ವಾಹನವನ್ನು ನಿಲ್ಲಿಸಬೇಕು ಮತ್ತು ಸೂಕ್ತವಾದ ಸ್ಥಳದಲ್ಲಿ ಪಾರ್ಕ್ ಮಾಡಬೇಕು.
ಒಂದೇ ದಾರಿಯಲ್ಲಿ ಚಲಿಸುತ್ತಿರುವಾಗ ಬೇರೆ ದಾರಿಗೆ ತಿರುಗಬೇಕಾದರೆ ಸರಿಯಾಗಿ ಎಕ್ಸಲೇಟರ್, ಗೇರ್, ಕ್ಲಚ್, ಸ್ಟೇರಿಂಗ್, ಇಂಡಿಗೇಟರ್ಗಳನ್ನು ಬಳಸಬೇಕು.
ಡ್ರೈವಿಂಗ್ ಮಾಡಬೇಕಾದರೆ ಸರಿಯಾದ ರೀತಿಯಲ್ಲಿ ಗೇರ್, ಕ್ಲಚ್, ಬ್ರೇಕ್ ಇವುಗಳನ್ನು ಬಳಸಬೇಕು. ಇದರಿಂದ ವಾಹನ ಕೂಡ ನಿಯಂತ್ರಣದಲ್ಲಿರುತ್ತದೆ.ಹೀಗಾಗಿ, ಹೊಸ ನಿಯಮದ ಪ್ರಕಾರ ಮೇಲೆ ತಿಳಿಸಿದ 24 ನಿಯಮಗಳನ್ನು ಅನುಸರಿಸಬೇಕಾಗುತ್ತದೆ.