Smart TV: ಇನ್ಮುಂದೆ ಪವರ್ ಇಲ್ಲದಿದ್ದರೂ ಟಿವಿ ನೋಡಲು ರೆಡಿಯಾಗಿ! ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ಸ್ಮಾರ್ಟ್ ಟಿವಿ!
ನೀವೇನಾದರೂ ಹೊಸ ಟಿವಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದು ಕೊಳ್ಳುವುದು ಒಳ್ಳೆಯದು. ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡುವ ಯೋಜನೆ ಜಾರಿಗೆ ತರುವ ಕನಸು ಕನಸಾಗಿ ಉಳಿದಿದ್ದರೆ, ನಿಮಗೆ ಸಿಹಿ ಸುದ್ದಿಯೊಂದು ಕಾದಿದೆ. ಪವರ್ ಇಲ್ಲದಿದ್ದರೂ ನೀವು ಟಿವಿ ನೋಡಬಹುದಾಗಿದ್ದು, ಬ್ಯಾಟರಿ ಚಾಲಿತ ಸ್ಮಾರ್ಟ್ ಟಿವಿ ಶೀಘ್ರವೇ ಬರಲಿದೆ .
ಈ ವರ್ಷದ ಜನವರಿ 5 ರಂದು ಪ್ರಾರಂಭವಾದ 2023 ಸಿಇಎಸ್ ಶೋನಲ್ಲಿ ಹೊಸ ಸ್ಮಾರ್ಟ್ಟಿವಿಯನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ಟಿವಿಗೆ ವಿದ್ಯುತ್ನ ಅವಶ್ಯಕತೆ ಇಲ್ಲದೆಯೇ ಬಳಕೆ ಮಾಡಬಹುದು ಎಂದು ತಂತ್ರಜ್ಞರು ಮಾಹಿತಿ ನೀಡಿದ್ದಾರೆ. ಕೇವಲ ಬ್ಯಾಟರಿ ಮೂಲಕ ಈ ಸ್ಮಾರ್ಟ್ಟಿವಿಯನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಟ್ಟಿದೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಎಲ್ಲ ತಂತ್ರಜ್ಞಾನದಲ್ಲಿ ಹೊಸ ಹೊಸ ಪ್ರಯೋಗ ಆವಿಷ್ಕಾರ ನಡೆದು ಇದೀಗ ಮಾರುಕಟ್ಟೆಗೆ ಬ್ಯಾಟರಿ ಚಾಲಿತ ಸ್ಮಾರ್ಟ್ಟಿವಿ ಬಿಡುಗಡೆ ಯಾಗಲು ತಯಾರಾಗಿದೆ.
ಪ್ರತಿ ವರ್ಷದ ರೀತಿಯಲ್ಲಿ ಈ ವರ್ಷವೂ ಲಾಸ್ವೇಗಸ್ನಲ್ಲಿ 2023ರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ (CES) ನಡೆದಿದ್ದು, ಈ ಎಲೆಕ್ಟ್ರಾನಿಕ್ಸ್ ಶೋ ಎಂಬುದು ಹೊಸ ಟೆಕ್ ಡಿವೈಸ್ಗಳನ್ನು ಪರಿಚಯಿಸುವ ವೇದಿಕೆಯಾಗಿದ್ದು, ಇಲ್ಲಿ ದೊಡ್ಡ ದೊಡ್ಡ ಟೆಕ್ನಾಲಜಿ ಕಂಪೆನಿಗಳು ತಾವು ಬಿಡುಗಡೆಗೊಳಿಸಲಿರುವ ವಿಶೇಷ ಮಾದರಿಯ ಟೆಕ್ ಡಿವೈಸ್ಗಳನ್ನು ಲಾಂಚ್ ಮಾಡಬಹುದು.
ಹೀಗಾಗಿ, 2023ರ ಈ ಟೆಕ್ ಶೋನಲ್ಲಿ ಬಹಳಷ್ಟು ವಿಶೇಷ ರೀತಿಯ ಡಿವೈಸ್ಗಳನ್ನು (Tech Device) ಕಂಪೆನಿಗಳು ಪರಿಚಯಿಸಿದ್ದು, ಅದರಲ್ಲಿ ಸ್ಮಾರ್ಟ್ಟಿವಿ ಕೂಡಾ ಒಂದಾಗಿದ್ದು, ಇದುವರೆಗೆ ಯಾವುದೇ ಟೆಲಿವಿಷನ್ (Television) ಸಾಧನಗಳನ್ನು ಆನ್ ಮಾಡಬೇಕಾದಲ್ಲಿ ವಿದ್ಯುತ್ ಬೇಕೆ ಬೇಕು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ!!!? ಆದರೆ , ಇನ್ಮುಂದೆ ಪವರ್ ಇಲ್ಲದೆಯೇ ಟಿವಿ ನೋಡಬಹುದು.
ಇದು ವೈರ್ಲೆಸ್ ಸ್ಮಾರ್ಟ್ಟಿವಿ ಆಗಿದ್ದು, ಕೆಲವೊಂದು ನಗರಗಳಲ್ಲಿ ವಿದ್ಯುತ್ನ ಸೌಲಭ್ಯವೇ ಇರುವುದಿಲ್ಲ ಜೊತೆಗೆ ಕೆಲವು ಪ್ರದೇಶಗಳಲ್ಲಿ ಆಗಾಗ ಪವರ್ ಕಟ್ ಸಮಸ್ಯೆ ತಲೆದೋರುತ್ತದೆ. ಅಂತಹ ನಗರಗಳಲ್ಲಿ ಈ ಸ್ಮಾರ್ಟ್ ಟಿವಿ ಹೆಚ್ಚಿನ ಪ್ರಯೋಜನ ನೀಡುವುದರಲ್ಲಿ ಸಂಶಯವಿಲ್ಲ. ಈ ಸ್ಮಾರ್ಟ್ಟಿವಿಗೆ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಜೊತೆಗೆ ಚಾರ್ಜ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ ಇನ್ನು ಈ ಸ್ಮಾರ್ಟ್ಟಿವಿಯನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ, 30 ದಿನಗಳವರೆಗೆ ಚಾರ್ಜ್ ಮಾಡುವ ಅವಶ್ಯಕತೆ ಎದುರಾಗದು. ಹೀಗಾಗಿ, ಈ ಸ್ಮಾರ್ಟ್ಟಿವಿಗೆ ಹೆಚ್ಚಿನ ಮಟ್ಟದ ವಿದ್ಯುತ್ ಅವಶ್ಯಕತೆ ಉಂಟಾಗದು.
ಈ ವರ್ಷದ ಜನವರಿ 5 ರಂದು ಪ್ರಾರಂಭವಾದ 2023 ಸಿಇಎಸ್ ಶೋನಲ್ಲಿ ಹೊಸ ಸ್ಮಾರ್ಟ್ಟಿವಿಯನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್ಟಿವಿಗೆ ವಿದ್ಯುತ್ನ ಅವಶ್ಯಕತೆಯೇ ಇಲ್ಲವೆಂದು ತಂತ್ರಜ್ಞರು ತಿಳಿಸಿದ್ದಾರೆ. ಕೇವಲ ಬ್ಯಾಟರಿ ಮೂಲಕ ಟಿವಿ ನೋಡಬಹುದು. ಈ ಟಿವಿ 55 ಇಂಚಿನ ಡಿಸ್ಪ್ಲೇಯನ್ನು ಕೂಡ ಒಳಗೊಂಡಿದೆ. ಮಾರುಕಟ್ಟೆಗೆ ಲಗ್ಗೆ ಇಡಲಿರುವ ಈ ವಿಶೇಷ ಸ್ಮಾರ್ಟ್ಟಿವಿ 2023ರ ಡಿಸೆಂಬರ್ ಖರೀದಿಗೆ ಲಭ್ಯವಾಗುತ್ತದೆ ಎನ್ನಲಾಗಿದೆ. ಇದರ ಬೆಲೆ 2,48,319 ರೂಪಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಈ ಸ್ಮಾರ್ಟ್ಟಿವಿ ರಿಮೋಟ್ನ ಅವಶ್ಯಕತೆ ಎದುರಾಗದು. ಇದರಲ್ಲಿ ಕ್ಯಾಮೆರಾ ಸೆನ್ಸಾರ್ ಅನ್ನು ಅಳವಡಿಸಲಾಗಿದ್ದು, ಇದರಲ್ಲಿ ಕೆಲವು ಸನ್ನೆ ಮಾಡುವ ಮೂಲಕ ಈ ಸ್ಮಾರ್ಟ್ಟಿವಿಯನ್ನು ಕಂಟ್ರೋಲ್ ಮಾಡಬಹುದಾಗಿದ್ದು, ಈ ಸ್ಮಾರ್ಟ್ಟಿವಿ ಟಚ್ ಕಂಟ್ರೋಲ್ ಫೀಚರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ವಾಯ್ಸ್ ಕಮಾಂಡ್ ಮೂಲಕವೂ ಟಿವಿಯನ್ನು ಕಂಟ್ರೋಲ್ ಮಾಡಬಹುದಾಗಿದ್ದು, ಆದರೆ, ಇದಕ್ಕಾಗಿ ಕೆಲವೊಂದು ಸೆಟ್ಟಿಂಗ್ಗಳಿವೆ.
ಈ ಸ್ಮಾರ್ಟ್ಟಿವಿಯಲ್ಲಿ ಹಾಟ್ ಸ್ವಾಪೇಬಲ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಹೀಗಾಗಿ, ಇದನ್ನು ಬೇಕಾದ ಸಂದರ್ಭದಲ್ಲಿ ಚೇಂಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸ್ಮಾರ್ಟ್ಟಿವಿಯಲ್ಲಿ ಬ್ಯಾಟರಿಯನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ವಿಶೇಷವಾಗಿ ಈ ಬ್ಯಾಟರಿಯ ಚಾರ್ಜ್ ಕಡಿಮೆಯಾಗುತ್ತಿದ್ದಂತೆ ತೆಗೆದು ರೀಚಾರ್ಜ್ ಕೂಡ ಮಾಡಬಹುದು ಇಲ್ಲವೇ ತೆಗೆದು ಹಾಕುವ ಅವಕಾಶ ಕಲ್ಪಿಸಲಾಗಿದೆ. ಈ ಸ್ಮಾರ್ಟ್ಟಿವಿಯ ಬ್ಯಾಟರಿಯ ವಿಷಯದಲ್ಲಿ ಲೂಪ್ ವ್ಯಾಕ್ಯೂಮ್ ಸಿಸ್ಟಮ್ ಅನ್ನು ಅಳವಡಿಸಲಾಗಿದ್ದು , ಹೀಗಾಗಿ, ಸ್ಮಾರ್ಟ್ಟಿವಿ ಇನ್ನೂ ತೆಳುವಾದ ವಿನ್ಯಾಸವನ್ನು ಒಳಗೊಂಡಿರುತ್ತದೆ.