Tirumala Tirupati: ತಿರುಪತಿಯಲ್ಲಿ ಭಕ್ತಾಧಿಗಳಿಗೆ ವಿಶೇಷ ದರ್ಶನ : ಟಿಕೆಟ್ ಇಂದಿನಿಂದ​ ಬಿಡುಗಡೆ

ಭಾರತದಲ್ಲಿ ಹಲವಾರು ದೇವಾಲಯಗಳು ಇವೆ. ಹಾಗೆಯೇ ಒಂದೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ವೈಶಿಷ್ಯಗಳನ್ನು ಒಳಗೊಂಡಿದೆ. ಹಾಗೆಯೇ ಭಾರತದ ಶ್ರೀಮಂತ ದೇವಾಲಯವಾದ ಕಲಿಯುಗದ ವೈಕುಂಠ’ಅಂತಾನೇ ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ ಆವಾಸ ಸ್ಥಾನ ದ ಭೇಟಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ದೇವಾಲಯದಲ್ಲಿ ಬಾಲಾಲಯ ಕಾರ್ಯಕ್ರಮ ಇರುವುದರಿಂದ ಫೆ.22ರಿಂದ ಫೆ.28ರವರೆಗೆ ಸರ್ವ ದರ್ಶನಕ್ಕೆ ಅವಕಾಶವಿಲ್ಲ ಎಂದು ಟಿಟಿಡಿ ತಿಳಿಸಿದೆ. ಇದೇ ವೇಳೆ ವೈಕುಂಠ ಏಕಾದಶಿಯನ್ನು ಇಲ್ಲಿ 10 ದಿನಗಳ ಕಾಲ ಆಚರಿಸಲಾಗುತ್ತಿದೆ, ಈ ಬಾರಿ ಜನವರಿ 2 ರಿಂದ 11 ರವರೆಗೆ ಆಚರಿಸಲಾಗುತ್ತಿದ್ದು, ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ.

ತಿರುಮಲ ತಿರುಪತಿ ದೇವಸ್ಥಾನ ಇಂದು ಆನ್ಲೈನ್ ಕೋಟಾದ ವಿಶೇಷ ಪ್ರವೇಶ ದರ್ಶನ ಟಿಕೆಟ್​ಗಳನ್ನು ಬಿಡುಗಡೆ ಮಾಡಿದ್ದು, ಈ ಟಿಕೆಟ್ ದರ ಪ್ರತಿ ಭಕ್ತರಿಗೆ 300 ರೂಪಾಯಿಗಳು ಎಂದು ದೇವಸ್ಥಾನ ತಿಳಿಸಿದೆ. ಇನ್ನು ಇಂದು ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಭಕ್ತರಿಗೆ ಆಡಳಿತ ಮಂಡಳಿ ತಿಳಿಸಿದೆ. ಜನವರಿ 12 ರಿಂದ ಫೆಬ್ರವರಿ 31 ರವರೆಗೆ ಈ ಟಿಕೆಟ್ ನೀಡಲಾಗುತ್ತದೆ. ಈ ಆನ್ಲೈನ್ ಪ್ರವೇಶ ಟಿಕೆಟ್ ಅನ್ನು ಇಂದು ಬೆಳಗ್ಗೆ 10 ಗಂಟೆಗೆ ಟಿಟಿಡಿ (TTD) ಬಿಡುಗಡೆ ಮಾಡಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ 50,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಟಿಟಿಡಿ ಪ್ರಕಾರ, ಡಿಸೆಂಬರ್ 23, 2022 ರ ವೇಳೆಗೆ ಒಟ್ಟು 62,055 ಭಕ್ತಾಧಿಗಳು ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.

ತಿರುಮಲ ದೇವಸ್ಥಾನದಲ್ಲಿ ಡಿಸೆಂಬರ್ 23, 2022 ರಂದು ಸಂಜೆ ರಂಗನಾಯಕುಲ ಮಂಟಪದಲ್ಲಿ ವಾರ್ಷಿಕ ಅಧ್ಯಯನೋತ್ಸವಗಳು ಪ್ರಾರಂಭವಾಗಿದ್ದು, 25 ದಿನಗಳ ಈ ವಾರ್ಷಿಕ ಉತ್ಸವವು ವೈಕುಂಠ ಏಕಾದಶಿಯ 11 ದಿನಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಜನವರಿ 15 ರಂದು ಮುಗಿಯುತ್ತದೆ.

ಈ ಉತ್ಸವದ ವಿಶಿಷ್ಟತೆ ಏನೆಂದರೆ 12 ಆಳ್ವಾರರು ರಚಿಸಿದ 4000 ಸ್ತೋತ್ರಗಳನ್ನು ನಾಲಯೈರ ದಿವ್ಯಪ್ರಬಂಧ ಪಾಸುರಂಗಳನ್ನು ಪ್ರತಿದಿನ ಪಠಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ ತಿರುಪತಿ ದರ್ಶನದಲ್ಲಿ ಪಾಲ್ಗೊಳ್ಳಲು ನೀವು ಇಂದಿನಿಂದ ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಿ ದೇವಾಲಯದ ಪ್ರವೇಶ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.