ಕಿಡ್ನಿಯಲ್ಲಿ ಕಲ್ಲು ಆಗೋಕೆ ಇವುಗಳೇ ಕಾರಣವಂತೆ!

ಕಿಡ್ನಿಯಲ್ಲಿ ಕಲ್ಲು ಆಗೋದು ಅಂತ ನಾವು ಸಾಮಾನ್ಯವಾಗಿ ಕೇಳಿರುವ ಕಾಯಿಲೆ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲೇ ಬೇಕು. ಯಾಕಂದ್ರೆ ಇದು ಪ್ರಾಣ ತೆಗೆಯುವಂತಹ ಚಾನ್ಸಸ್ ಇರುತ್ತದೆ. ಹಾಗಾದ್ರೆ ಯಾವುದೆಲ್ಲ ಕಾರಣಗಳಿಂದ ಕಿಡ್ನಿಯಲ್ಲಿ  ಕಲ್ಲು ಆಗುತ್ತೆ  ತಿಳಿಯೋಣ ಬನ್ನಿ.

ಟೈಪ್ 2 ಮಧುಮೇಹ, ಹೈ ಬಿಪಿ ಇವೆಲ್ಲವೂ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ ಆಗುತ್ತದೆ. ಆಗ  ದೇಹದಲ್ಲಿ ಬೊಜ್ಜಿನ ಪ್ರಮಾಣ ಹುಟ್ಟಲು ಹೆಚ್ಚಿಸುತ್ತದೆ. ಇದೆ ಕಿಡ್ನಿಯಲ್ಲಿ ಕಲ್ಲು ಆಗಲು ಕಾರಣವಾಗುತ್ತದೆ.

ಹೆಚ್ಚಾಗಿ ನೀರನ್ನು ಕುಡಿಯಬೇಕು ಅಂತ ವೈದ್ಯರು, ನಮ್ಮ ಹಿರಿಯರು ಸಲಹೆ ಮಾಡುತ್ತಾರೆ. ಆದರೆ ನಾವು ಅದನ್ನು  ನಿರ್ಲಕ್ಷ್ಯ ಮಾಡುತ್ತೇವೆ. ಆದ್ರೆ ನಾವು ಪ್ರತಿನಿತ್ಯ ನೀರು ಕುಡಿಯುವುದರಿಂದ  ಅದೆಷ್ಟೋ ಕಾಯಿಲೆಗಳನ್ನು ದೂರ ಮಾಡಬಹುದು. ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ನೀರು ಹೊರ ಹಾಕುತ್ತವೆ. ಜಾಸ್ತಿ ನೀರು ಕುಡಿಯದೇ ಇದ್ದಲ್ಲಿ ಕಿಡ್ನಿಯಲ್ಲಿ ಕಲ್ಲು ಆಗುವುದು ಕಟ್ಟಿಟ್ಟ ಬುತ್ತಿ.

ಆರೋಗ್ಯವಂತ ವ್ಯಕ್ತಿ ಉತ್ತಮ ಜೀವನಶೈಲಿಯನ್ನು ಅಭ್ಯಾಸ ಮಾಡಿಕೊಂಡಿರುತ್ತಾನೆ. ಅಂದರೆ ಬೆಳಗ್ಗೆ, ಸಂಜೆ ವಾಕಿಂಗ್ ಮಾಡುವುದು, ಕೈಯಲ್ಲಿ ಆದಷ್ಟು ವ್ಯಾಯಾಮ ಮಾಡುವುದು, ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆಯಲ್ಲಿ ತೊಡಗುವುದು ಹೀಗೆ.  ಆದರೆ ಯಾರು ಜಡ ಜೀವನ ಶೈಲಿಯಲ್ಲಿ ಇರುತ್ತಾರೆ ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಅದರಲ್ಲಿ ಕಿಡ್ನಿ ಭಾಗದಲ್ಲಿ ಕಲ್ಲುಗಳು ಉಂಟಾಗುವುದು ಕೂಡ ಒಂದು.

ನಾವು ಅಡುಗೆಗೆ ರುಚಿಗೆ ಎಂದು ಬಳಸುವ ಉಪ್ಪಿನಲ್ಲಿ ಸೋಡಿಯಂ ಮತ್ತು ಕ್ಲೋರೈಡ್ ಇದೆ. ಯಾವಾಗ ಸೋಡಿಯಂ ಪ್ರಮಾಣ ಆಹಾರದಲ್ಲಿ ಹೆಚ್ಚಾಗುತ್ತದೆ, ಆಗ ಮೂತ್ರದಲ್ಲಿ ಕ್ಯಾಲ್ಸಿಯಂ ಹೆಚ್ಚು ಶೇಖರಣೆ ಯಾಗುತ್ತದೆ. ಇದು ಸಹ ದಿನ ಕಳೆದಂತೆ ಕಿಡ್ನಿ ಕಲ್ಲುಗಳಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.

ಅದೇಷ್ಟೋ ಜನರು ಬ್ಯುಸಿಯ ಕಾರಣಗಳಿಂದ ಮೂತ್ರ ಹೋಗೋದಿಲ್ಲ. ತಡೆದುಕೊಂಡು ಕೂತಿರುತ್ತಾರೆ. ಅದು 1 ರಿಂದ 2 ಗಂಟೆಗಳ ಕಾಲ. ಇದು ದೊಡ್ಡ ತಪ್ಪು. ಮೂತ್ರವನ್ನು ಯಾವುದೇ ಕಾರಣಕ್ಕೂ ಜಾಸ್ತಿ ಹೊತ್ತು ಕಟ್ಟಿಕೊಂಡು ಕೂರುವಂತಿಲ್ಲ. ಇದೆ  ಕಿಡ್ನಿಯಲ್ಲಿ ಕಲ್ಲು ಆಗಲು ಮುಖ್ಯ ಕಾರಣ.

ಹೀಗಾಗಿ ಇವಿಷ್ಟು ಕಾರಣಗಳನ್ನು ತಿಳಿಯದಿದ್ದಾರೆ, ನೀವು ನಿಮ್ಮನ್ನು ಎಚ್ಚರಾಗೊಳಿಸಿದ್ದೀರಾ? ಇಲ್ಲದಿದ್ದಲ್ಲಿ ರೋಗ ಕಟ್ಟಿಟ್ಟಬುತ್ತಿ.

Leave A Reply

Your email address will not be published.