ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿದ ಅನ್ಯಕೋಮಿನ ಯುವಕ, ಹತ್ಯೆಗೆ ಯತ್ನ

ಶಿವಮೊಗ್ಗ : ಬಜರಂಗದಳ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕನೊಬ್ಬ ಮಚ್ಚು ಬೀಸಿರುವ ದುರಂತ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ

 

ಸಾಗರ ಪಟ್ಟಣದಲ್ಲಿ ಬಜರಂಗದಳ ಕಾರ್ಯಕರ್ತನ ಸುನೀಲ್ ಮೇಲೆ ಸಮೀರ್ ಎಂಬ ಅನ್ಯಕೋಮಿನ ಯುವನೊಬ್ಬ ಮಚ್ಚು ಬೀಸಿ ಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಅದೃಷ್ಟವಷಾತ್‌ ಕೂದಲೆಳೆ ಅಂತರದಲ್ಲಿ ಹಿಂದೂ ಕಾರ್ಯಕರ್ತ ಸುನೀಲ್ ಪಾರಾಗಿದ್ದಾರೆ.

ಜಿಲ್ಲೆಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಸುನೀಲ್‌ ಜತೆ ಸಮೀರ್‌ ಕಿರಿಕ್‌ ಮಾಡಿಕೊಂಡಿದ್ದನು. ಈ ಸಂದರ್ಭದಲ್ಲಿ ಗಲಾಟೆ ತೀವ್ರಗೊಂಡು ಮಚ್ಚು ಬೀಸಿ ಹತ್ಯೆಗೆ ಯತ್ನಿಸಿದ್ದಾನೆ ಈ ಅಘಾತಕಾರಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

Leave A Reply

Your email address will not be published.