BBK 9: ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಬಿಗ್‌ಬಾಸ್‌ ವಿನ್ನರ್ ರೂಪೇಶ್ ಶೆಟ್ಟಿ

ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ವಿಜೇತರ ಪಟ್ಟಿ ಹೊರ ಬಿದ್ದು, ದೊಡ್ದ ಅಭಿಮಾನಿ ಬಳಗ ಹೊಂದಿದ್ದ ರೂಪೇಶ್ ಶೆಟ್ಟಿ ಸೀಸನ್ 9 ರಲ್ಲಿ ವಿನ್ನರ್ ಆಗಿದ್ದು, ಗೊತ್ತಿರುವ ವಿಚಾರವೇ!!! ಇದೀಗ, ರೂಪಿ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಹೌದು!!!!ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿ ತಮ್ಮ ಗೆಲುವಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಿಗ್ ಬಾಸ್ ಗೆಲುವಿಗೆ ಕಾರಣವಾದ ಶಕ್ತಿಯ ಬಗ್ಗೆ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದು, ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕೊರಗಜ್ಜನಲ್ಲಿ ಪ್ರಾರ್ಥಿಸಿ ಬೇಡಿಕೆ ಈಡೇರುವಂತೆ ಪ್ರಾರ್ಥನೆ ಮಾಡಿದ್ದೆ ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ.

 

ಕರಾವಳಿಯ ಜನ ದೈವಗಳನ್ನು ಭಕ್ತಿ ಭಾವದಿಂದ ಆರಾಧನೆ ಮಾಡುತ್ತಾರೆ. ಇಲ್ಲಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆಯಿದ್ದು, ದೇವರು ನಮ್ಮನ್ನು ಕೈ ಬಿಟ್ಟರೂ ಕೂಡ ದೈವಗಳು ಎಂದಿಗೂ ನಂಬಿದವರ ಕೈ ಬಿಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿಕೆ ಇದ್ದು, ಹೀಗಾಗಿ ಹಿಂದಿನಿಂದಲೂ ಇಲ್ಲಿಯವರೆಗೂ ಈ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕೊರಗಜ್ಜ ನನ್ನ ಆರಾಧ್ಯ ಮೂರ್ತಿಯಾಗಿದ್ದು ಜೊತೆಗೆ ಯಶಸ್ಸಿನ ಹಿಂದಿರುವ ಪ್ರೇರಕ ಶಕ್ತಿ. ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ದೊಡ್ಮನೆ ಟಾಪ್‌ 5ಕ್ಕೆ ಬಂದರೆ ಮಂಗಳೂರಿಗೆ ತೆರಳಿದ ಬಳಿಕ ಕಾರ್ಣಿಕ ಕ್ಷೇತ್ರ ಕೊರಗಜ್ಜನ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿರುವುದಾಗಿ ಹೇಳಿಕೊಂಡಿದ್ದು, ನಂಬಿದ ದೈವ ನನ್ನ ಕೈ ಬಿಟ್ಟಿಲ್ಲ. ಕೊರಗಜ್ಜ ನನ್ನನ್ನು ಗೆಲ್ಲಿಸಿದ್ದಾರೆ. ಹಾಗಾಗಿ, ಈಗ ಆ ಕ್ಷೇತ್ರಕ್ಕೆ ಹೋಗುತ್ತಿರುವುದಾಗಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಅವರು ಭಾನುವಾರ ಮಧ್ಯಾಹ್ನ ಮಂಗಳೂರಿಗೆ ಆಗಮಿಸಿ ಬಳಿಕ ನೆಹರು ಮೈದಾನದಿಂದ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ವಿಜಯಯಾತ್ರೆಯಲ್ಲಿ ಹೊರಟಿದ್ದಾರೆ. ಈ ಸ್ಪರ್ಧೆಯ ಪ್ರತಿ ಟಾಸ್ಕ್‌ ಆಡುವಾಗಲೂ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದೆ. ಅಲ್ಲಿ ಟಾಪ್‌ 5ಕ್ಕೇರಲು ದೊಡ್ದ ಮಟ್ಟದಲ್ಲಿ ಹಣಾಹಣಿ ಇತ್ತು. ಆ ಸಂದರ್ಭ ಕೊರಗಜ್ಜನಲ್ಲಿ ಪ್ರಾರ್ಥಿಸಿ ಬೇಡಿಕೆ ಕೊಂಡಿರುವುದಾಗಿ ಹೇಳಿದ್ದಾರೆ.

ಕೊರಗಜ್ಜನ ಪುಣ್ಯ ಕ್ಷೇತ್ರಕ್ಕೆ ತೆರಳುವುದು ನನ್ನ ಅಭಿಲಾಷೆಯಾಗಿತ್ತು.ಇದಕ್ಕೆ ನನ್ನ ಗೆಳೆಯರು, ಅಭಿಮಾನಿಗಳು, ಬೆಂಬಲಿಗರು ವಿಜಯಯಾತ್ರೆ ಕಾರ್ಯಕ್ರಮ ಆಯೋಜಿಸಿ ಆಹ್ವಾನ ನೀಡಿ ನನ್ನನ್ನು ಬೆರಗು ಮೂಡಿಸಿದ್ದಾರೆ. ರೂಪಿ ತನ್ನ ಅಭಿಮಾನಿಗಳು ತೋರಿದ ಅಭಿಮಾನ ಪ್ರೀತಿ ಕಂಡು ಹರ್ಷ ವ್ಯಕ್ತ ಪಡಿಸಿದ್ದು ಅಲ್ಲದೆ ಮನತುಂಬಿ ಬರುತ್ತಿದೆ ಎಂದಿದ್ದಾರೆ.

ರೂಪೇಶ್ ಶೆಟ್ಟಿ, ತಾವು ರಿಯಾಲಿಟಿ ಶೋನಲ್ಲಿ ಗೆದ್ದ ಮೊತ್ತದಲ್ಲಿ ಶೇ.50ರಷ್ಟು ಸಮಾಜ ಸೇವೆಗೆ ವಿನಿಯೋಗಿಸುವ ಬಯಕೆ ಹೊಂದಿದ್ದಾರೆ. ” ನಾನು ಪ್ರಶಸ್ತಿ ಗೆದ್ದ ಹಣದಲ್ಲಿ ಶೇ. 50ರಷ್ಟು ತನ್ನ ವೈಯಕ್ತಿಕ ಖರ್ಚಿಗೆ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದು, ಉಳಿದ ಶೇ.50ರಲ್ಲಿ ಮೂರು ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಹಾಗೂ ತುಳು-ಕನ್ನಡ ನಾಟಕ ಕಲಾವಿದರಲ್ಲಿ ಕಷ್ಟದಲ್ಲಿದ್ದವರಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ರೂಪಿ ಉಳಿದವರಿಗೂ ಮಾದರಿಯಾಗಿದ್ದಾರೆ.

ಈ ನಡುವೆ ತನ್ನ ಗೆಲುವಿನಲ್ಲಿ ಕನ್ನಡಿಗರು, ತುಳುವರ ಪಾತ್ರ ಮಹತ್ವದಾಗಿದ್ದು, ಅದರಲ್ಲೂ ನನ್ನ ತುಳುನಾಡಿನ ಬಂಧುಗಳು ದೊಡ್ಡ ರೀತಿಯಲ್ಲಿ ಬೆಂಬಲ ನೀಡಿ ಸಾಥ್ ನೀಡಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಕೂಡ ಕಡಿಮೆಯೇ.

ಮಂಗಳೂರಿಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬಂದಾಗ ದೂರದಲ್ಲೇ ನಿಂತು ಅಭಿಮಾನ ತೋರಿಸುತ್ತಾರೆ. ಆದರೆ ಈ ವಿಜಯಯಾತ್ರೆಯಲ್ಲಿ ಅಭಿಮಾನಿಗಳ ಸ್ಪಂದನೆ ನೋಡುವಾಗ ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ನಮ್ಮೂರಿನ ಜನರ ಪ್ರೀತಿ ಪ್ರಶಸ್ತಿ ಗೆದ್ದಿರುವುದಕ್ಕಿಂತಲೂ ಮಿಗಿಲು. ಇಡೀ ಕರ್ನಾಟಕದ ಜನರು ನನ್ನನ್ನು ಬೆಂಬಲಿಸಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಸಮರ್ಪಿಸಿದರು ಸಾಲದು ಎಂದು ಹೇಳಿ ತಮ್ಮ ಗೆಲುವಿಗೆ ಕಾರಣವಾದ ಪ್ರತಿಯೊಬ್ಬರಿಗೂ ನೆನಸಿಕೊಂಡಿದ್ದಾರೆ.

Leave A Reply

Your email address will not be published.