KL Rahul : ಸೂರ್ಯಕುಮಾರ್‌ ಆಟಕ್ಕೆ ಕೆ. ಎಲ್‌. ರಾಹುಲ್‌ ರಿಂದ ತುಳುವಿನಲ್ಲೇ ಶ್ಲಾಘನೆ | ಖುಷಿ ಪಟ್ಟ ಜನ

ಈಗಾಗಲೇ ಟಿ20 ಪಂದ್ಯ ಮುಗಿದಿದ್ದು ಭಾರತ ಭರ್ಜರಿ ಗೆಲುವು ಸಾಧಿಸಿರುವುದು ಈಗಾಗಲೇ ನಮಗೆ ತಿಳಿದಿರುವ ವಿಚಾರ. ಆದರೆ ಇದೀಗ ಸೂರ್ಯ ಬ್ಯಾಟಿಂಗ್ ಬಗೆಗಿನ ಪೋಸ್ಟ್ ಒಂದು ವೈರಲ್ ಆಗಿದೆ. ಹೌದು ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಮಿಂಚುವ ಜೊತೆಗೆ ಸೂರ್ಯ ಬ್ಯಾಟಿಂಗ್ ಪ್ರತಾಪದಿಂದ ಭಾರತ 91 ರನ್ ಅಂತರದಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು. ಆದರೆ ಸೂರ್ಯ ಬ್ಯಾಟಿಂಗ್ ಬಗ್ಗೆ ಕೆ.ಎಲ್. ರಾಹುಲ್ ಮಾಡಿದ ಒಂದು ಮೆಚ್ಚುಗೆಯ ಪೋಸ್ಟ್ ಇದೀಗ ವೈರಲ್ ಆಗಿದೆ.

 

ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ ಶತಕ ದಾಖಲಿಸಿದ ವೇಳೆ ಕೆ.ಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ತುಳು ಭಾಷೆಯಲ್ಲಿ ಸೂರ್ಯ ಅವರನ್ನು ಶ್ಲಾಘಿಸಿ ಮೆಚ್ಚುಗೆ ಸೂಚಿಸಿದ್ದಾರೆ. ರಾಹುಲ್ ಸೋರಿಯನ್ನು ಶೇರ್ ಮಾಡಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ತುಳುವರ ಹೃದಯ ಗೆದ್ದಿದೆ.

ಕೆ.ಎಲ್ ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಸೋರಿಯಲ್ಲಿ ಸೂರ್ಯಕುಮಾರ್ ಯಾದವ್ ಶತಕದ ಫೋಟೊ ಹಂಚಿಕೊಂಡು ತುಳುವಿನಲ್ಲಿ “ಭಾರೀ ಎಡ್ಡೆ ಗೊಬ್ಬಿಯ (ತುಂಬಾ ಚೆನ್ನಾಗಿ ಆಡಿದ್ದೀಯಾ) ಎಂದು ಬರೆದುಕೊಂಡಿದ್ದಾರೆ. ಬಳಿಕ ಈ ಸ್ಟೋರಿಗೆ ಸೂರ್ಯ ಪತ್ನಿ ದೇವಿಶಾ ಶೆಟ್ಟಿಯನ್ನು ಕೂಡ ಕೆ.ಎಲ್ ರಾಹುಲ್ ಮೆನ್ಷನ್ ಮಾಡಿದ್ದಾರೆ.

ಇದಕ್ಕೆ ಸೂರ್ಯಕುಮಾರ್ ಮಡದಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಎಲ್ ರಾಹುಲ್ ಸೋರಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸೋರಿಯಲ್ಲಿ ಹಂಚಿಕೊಂಡಿರುವ ದೇವಿಶಾ “ಚೂರು ತುಳು ಕಲ್ಪಾವೊಡು ನನ ಆರೆಗ್” (ಇನ್ನು ಅವರಿಗೂ ಸ್ವಲ್ಪ ತುಳು ಕಲಿಸಬೇಕು) ಎಂದು ಹೇಳಿದ್ದಾರೆ. ಸೂರ್ಯಕುಮಾರ್ ಪತ್ನಿ ಮೂಲತಃ ಕರಾವಳಿಯವರಾದ ಕಾರಣ ತುಳು ಭಾಷೆಯಲ್ಲೇ ಉತ್ತರ ನೀಡಿದ್ದಾರೆ. ಜತೆಗೆ ಕೆ.ಎಲ್. ರಾಹುಲ್ ಕೂಡ ಮಂಗಳೂರಿನಲ್ಲೇ ಬೆಳೆದ ಕಾರಣ ಅವರಿಗೂ ತುಳು ಭಾಷೆ ಮಾತನಾಡಲು ಬರುತ್ತದೆ. ಒಟ್ಟಾರೆ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಪತ್ನಿ ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡುವ ಮೂಲಕ ತುಳುನಾಡ ಹೃದಯ ಗೆದ್ದಿದ್ದಾರೆ.

ತುಳುನಾಡಿನ ಭಾಷೆಯನ್ನು ಖ್ಯಾತ ಕ್ರಿಕೆಟಿಗರು ಸೋಶಿಯಲ್ ಮೀಡಿಯಾ ದಲ್ಲಿ ಬಳಸಿರುವುದು ತುಳುನಾಡಿನ ಮನೆ ಮನಗಳು ಗೆದ್ದಿದೆ ಅನ್ನೋದು ಈ ಪೋಸ್ಟ್ ಕಾಮೆಂಟ್ ಮತ್ತು ಅಪಾರ ವೀಕ್ಷಣೆ ಯೇ ಸಾಕ್ಷಿ ಆಗಿದೆ.

Leave A Reply

Your email address will not be published.