Income Tax Slab Rate : ಈ ಬಾರಿ ಇರಲಿದೆ ಈ ಎಲ್ಲಾ ಆದಾಯ ತೆರಿಗೆ ಸ್ಲ್ಯಾಬ್!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ಇದಾಗಿದೆ. ಈ ಬಜೆಟ್‌ನಲ್ಲಿ ಜನರು ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವ ನಿರೀಕ್ಷೆಯಿರುವ ಕಾರಣ ಎಲ್ಲರ ಕಣ್ಣು ಈ ಬಜೆಟ್ ಮಂಡನೆಯಲ್ಲಿದೆ.
ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್ : ಹೊಸ ತೆರಿಗೆ ಪದ್ಧತಿಯಲ್ಲಿ, ವಾರ್ಷಿಕ 10 ಲಕ್ಷದಿಂದ 12.5 ಲಕ್ಷದವರೆಗಿನ ಆದಾಯದ ಮೇಲೆ 20 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತದೆ. ವಾರ್ಷಿಕವಾಗಿ 12.5 ಲಕ್ಷದಿಂದ 15 ಲಕ್ಷದವರೆಗಿನ ಆದಾಯದ ಮೇಲೆ 25 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತದೆ. 15 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯದ ಮೇಲೆ ಶೇಕಡಾ 30 ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಸ್ಲ್ಯಾಬ್ ದರ : ವಾಸ್ತವವಾಗಿ, ಬಜೆಟ್ 2020ರಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತೆರಿಗೆ ಪದ್ಧತಿಯನ್ನು ಘೋಷಿಸಿದ್ದರು. ಇದೇ ಹೊಸ ತೆರಿಗೆ ಪದ್ಧತಿ. ಹೊಸ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಒಪ್ಶನಲ್ ಆಗಿದ್ದು, ಇಲ್ಲಿ ಕಡಿಮೆ ತೆರಿಗೆ ದರವನ್ನು ಪಾವತಿಸಲಾಗುತ್ತದೆ. ಆದರೆ, ಇದರಲ್ಲಿ ಬೇರೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಇನ್ನು ಹೊಸ ತೆರಿಗೆ ಪದ್ಧತಿಯಲ್ಲಿ 7 ರೀತಿಯ ತೆರಿಗೆ ಸ್ಲ್ಯಾಬ್ ಗಳಿವೆ.
ಆದಾಯ ತೆರಿಗೆ : ಪ್ರಸ್ತುತ ದೇಶದಲ್ಲಿ ಎರಡು ಆದಾಯ ತೆರಿಗೆ ಪದ್ಧತಿಗಳ ವ್ಯವಸ್ಥೆ ಇದ್ದು, ದೇಶದ ಜನರು ಎರಡು ನಿಯಮಗಳ ಪ್ರಕಾರ ತೆರಿಗೆ ಸಲ್ಲಿಸಬಹುದು. ಒಂದು ಹಳೆಯ ತೆರಿಗೆ ಪದ್ಧತಿ ಮತ್ತು ಇನ್ನೊಂದು ಹೊಸ ತೆರಿಗೆ ಪದ್ಧತಿ. ದೇಶದಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಈ ಎರಡು ತೆರಿಗೆ ವ್ಯವಸ್ಥೆಗಳ ಪೈಕಿ ಇಂದು ನಾವು ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹೊಸ ತೆರಿಗೆ ಪದ್ಧತಿ : ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 2.5 ಲಕ್ಷ ರೂ ಆದಾಯದ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಇದರ ನಂತರ, ಅಂದರೆ ವಾರ್ಷಿಕ ಆದಾಯ 2.5 ರಿಂದ 5 ಲಕ್ಷದ ಮೇಲೆ 5% ತೆರಿಗೆ ವಿಧಿಸಲಾಗುತ್ತದೆ. ವಾರ್ಷಿಕ 5 ಲಕ್ಷದಿಂದ 7.5 ಲಕ್ಷ ಆದಾಯದ ಮೇಲೆ 10% ತೆರಿಗೆ ವಿಧಿಸಲಾಗುತ್ತದೆ. ವಾರ್ಷಿಕ 7.5 ಲಕ್ಷದಿಂದ 10 ಲಕ್ಷ ಆದಾಯದ ಮೇಲೆ 15% ತೆರಿಗೆ ವಿಧಿಸಲಾಗುತ್ತದೆ.