Bank FD Rates: ಕಳೆದ ಮೂರು ವರ್ಷದಲ್ಲಿ ಇದೇ ಮೊದಲ ಸಲ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಆಫರ್
ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.
ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಹೀಗಾಗಿ, ನೀವು ಬ್ಯಾಂಕ್ಗಳಲ್ಲಿ ಹಣ ಠೇವಣಿ ಮಾಡಲು ಯೋಜನೆ ಹಾಕಿದ್ದರೆ ನಿಮಗೊಂದು ಸುವರ್ಣ ಅವಕಾಶ ಒದಗಿ ಬಂದಿದೆ. ಬ್ಯಾಂಕ್ಗಳು ನಿಶ್ಚಿತ ಠೇವಣಿ ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿವೆ.
ರಿಸರ್ವ್ ಬ್ಯಾಂಕ್ ಹೆಚ್ಚಳ ಮಾಡುತ್ತಿರುವ ರೆಪೊ ರೇಟ್ ನಲ್ಲಿ ಆದ ಬದಲಾವಣೆಯಿಂದಾಗಿ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಶೇ.8ಕ್ಕೆ ತಲುಪಿದ್ದು, ಕಳೆದ ಮೂರು ವರ್ಷಗಳಲ್ಲಿ ಇದು ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಹಿಂದೆ ಠೇವಣಿ ದರಗಳನ್ನು ಶೇ.5.5ಕ್ಕೆ ಇಳಿಸಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆ ಕಂಡಿತ್ತು. ಆರ್ಥಿಕತೆಯನ್ನು ಹತೋಟಿ ತರುವ ನಿಟ್ಟಿನಲ್ಲಿ ಆರ್ಬಿಐ ರೆಪೊ ದರ ಹೆಚ್ಚಳ ಮಾಡಿದ್ದರಿಂದ ಬ್ಯಾಂಕ್ಗಳು ಸಹ ಎಫ್ಡಿ ದರಗಳನ್ನು ಹೆಚ್ಚಿಸಿದೆ.
ಸದ್ಯ,ಹೆಚ್ಚಿನ ಖಾಸಗಿ ಬ್ಯಾಂಕ್ಗಳು ಶೇಕಡಾ 8 ಇಲ್ಲವೇ ಅದಕ್ಕಿಂತ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳು 7.5 ಪ್ರತಿಶತದಷ್ಟು ಬಡ್ಡಿದರ ನೀಡುತ್ತಿವೆ. ಈ ಬಡ್ಡಿದರಗಳು ಹಿರಿಯ ನಾಗರಿಕರಿಗೆ ಅನ್ವಯವಾಗಲಿದ್ದು, ಹೆಚ್ಚಿನ ಆದಾಯ ನೀಡಲಿವೆ. ರಿಸ್ಕ್ ಫ್ರೀ ರಿಟರ್ನ್ಸ್ ಗಳಿಸಲು ಬಯಸುವವರು ಈ ಮೂಲಕ ಹೆಚ್ಚಿನ ಬಡ್ಡಿ ಪಡೆಯಲು ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಅನೇಕ ಬ್ಯಾಂಕ್ಗಳು ಹೆಚ್ಚಿನ ಬಡ್ಡಿದರ ಒದಗಿಸುತ್ತವೆ. ಎಚ್ಡಿಎಫ್ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಗೆ ಶೇಕಡಾ 5 ರಿಂದ 7.75 ರ ಬಡ್ಡಿದರವನ್ನು ಒದಗಿಸುತ್ತಿದೆ. ಐಸಿಐಸಿಐ ಬ್ಯಾಂಕ್ ಗರಿಷ್ಠ 7 ಪ್ರತಿಶತದವರೆಗೆ ಬಡ್ಡಿ ನೀಡುತ್ತಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ 7.5 ಪರ್ಸೆಂಟ್ ಬಡ್ಡಿಯನ್ನು ನೀಡುತ್ತಿದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ 8ಕ್ಕಿಂತ ಹೆಚ್ಚಿನ ಬಡ್ಡಿ ದರಗಳನ್ನು ಲಭ್ಯಗೊಳಿಸಿವೆ. ಹೆಚ್ಚಿನ ಬಡ್ಡಿ ಬಯಸುವವರು ಈ ಬ್ಯಾಂಕ್ಗಳಲ್ಲಿ ಎಫ್ಡಿ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಇತ್ತೀಚೆಗೆ FD ದರಗಳನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಕಂಡಿದೆ. ಎರಡರಿಂದ ಮೂರು ವರ್ಷಗಳ ಅವಧಿಯ ಬಡ್ಡಿ ದರವು ಶೇಕಡಾ 7.25 ತಲುಪಿದೆ. ಅದೇ ಎಸ್ಬಿಐನಲ್ಲಿ, 2 ರಿಂದ 3 ವರ್ಷಗಳ ಅವಧಿಯ ಎಫ್ಡಿಗಳಿಗೆ ಶೇಕಡಾ 7.25 ರವರೆಗೆ ಬಡ್ಡಿ ಸಿಗುತ್ತದೆ.