ವಜ್ರದಷ್ಟೇ ಬೆಲೆಬಾಳುತ್ತೆ ಈ ಮೀನು | ರೇಟ್‌ ಕೇಳಿದರಂತೂ ನೀವು ಬೆರಗಾಗುವುದು ಖಂಡಿತ

ಇದಪ್ಪಾ ಮೀನು ಅಂದರೆ. ಹೌದು ಈ ಒಂದು ಮೀನಿನ ಬೆಲೆ ನೋಡಿದರೆ ಮತ್ತೊಮ್ಮೆ ಮೀನು ಹಿಡಿಯುವ ರಿಸ್ಕ್ ತಗೋಳ್ಳೋ ಅವಶ್ಯಕತೆ ಇರಲ್ಲ. ಉತ್ತರ ಅಮೆರಿಕಾದ ಒಮಾಹಾ ಸಮುದ್ರದಲ್ಲಿ ಮೀನುಗಾರರ ಬಲೆಯಲ್ಲಿ ಬೃಹತ್ ಬ್ಲೂಫಿನ್ ಮೀನು ಸಿಕ್ಕಿದ್ದು, ಈ ಮೀನಿನ ತೂಕ 212 ಕೆ.ಜಿಯಷ್ಟಿದ್ದು ಸದ್ಯ ಈ ಮೀನಿನ ಬೆಲೆ ಬರೋಬ್ಬರಿ 2 ಕೋಟಿ ರೂಪಾಯಿ!

 

ಕೆಲವು ಜಾತಿಯ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅಂತಹ ಮೀನಿನ ಬೆಲೆಯೂ ಕೂಡ ಲಕ್ಷಾಂತರ ರೂಪಾಯಿಯಾಗಿರುತ್ತದೆ. ಅಲ್ಲದೇ ಸಮುದ್ರದಲ್ಲಿ ಸಿಗುವ ಮೀನುಗಳು ಅತ್ಯಂತ ರುಚಿಕರವಾಗಿಯೂ ಇರುತ್ತದೆ. ಅದರಲ್ಲಿಯೂ ಅತ್ಯಂತ ಭಾರವಾದ ಮೀನು ಅಂದರೆ ಟ್ಯೂನ ಮೀನು.

ಉತ್ತರ ಅಮೆರಿಕಾದ ಸಾಗರಗಳಲ್ಲಿ ಕಂಡುಬರುವ ಬ್ಲೂ ಫಿನ್ ಟ್ಯೂನವನ್ನು ಕಪ್ಪು ವಜ್ರಗಳು ಎಂದೂ ಕರೆಯುತ್ತಾರೆ. ಟ್ಯೂನ ಮೀನು ಬೆಳ್ಳಿಯ ಬಣ್ಣದಲ್ಲಿದ್ದರೆ, ಈ ಬ್ಲೂಫಿನ್ ಟ್ಯೂನ ಮೀನು ಕೂಡ ಕಪ್ಪು ಬಣ್ಣದ್ದಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಲೂ ಫಿನ್ ಟ್ಯೂನ ಮೀನುಗಳಿಗೆ ಭಾರೀ ಬೇಡಿಕೆ ಇದೆ. ಬ್ಲೂ ಫಿನ್ ಟ್ಯೂನ ಈ ಒಂದು ಮೀನಿನ ಬೆಲೆ ಜಪಾನ್ ನಲ್ಲಿ ಎರಡು ಕೋಟಿ ರೂಪಾಯಿ ಇದೆ.

ಈ ಬೃಹತ್ ಗಾತ್ರದ ಟೇಸ್ಟಿ ಫಿಶ್ ಬ್ಲೂ ಫಿನ್ ಟ್ಯೂನ ಮೀನು ಮಾಂಸಾಹಾರಿ ಪ್ರಿಯರಿಗೆ ತುಂಬಾ ಇಷ್ಟವಾಗಿದೆ. ಆದ್ದರಿಂದಲೇ ಈ ದೊಡ್ಡ ಗಾತ್ರದ ಮೀನು ಪಡೆಯಲು ದೊಡ್ಡ ವ್ಯಾಪಾರಿಗಳು, ಸ್ಟಾರ್ ಹೋಟೆಲ್ ಮಾಲೀಕರು ಪೈಪೋಟಿ ನಡೆಸುತ್ತಿದ್ದಾರೆ.

ನೂರಾರು ಕಿಲೋಗ್ರಾಂ ತೂಕದ ಈ ನೀಲಿ ಫಿನ್ ಟ್ಯೂನಾ ಮೀನನ್ನು ಜಪಾನ್ನಲ್ಲಿ ಸುಶಿ ರೆಸ್ಟೋರೆಂಟ್ಗಳನ್ನು ನಡೆಸುತ್ತಿರುವ ಒನೊಡೆರಾ ಗ್ರೂಪ್ 2 ಕೋಟಿ 20 ಲಕ್ಷ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿದೆ. ಹರಾಜಿನಲ್ಲಿ ಸಂಗ್ರಹಿಸಿದ ಬೃಹತ್ ಪ್ರಮಾಣದ ಮೀನುಗಳನ್ನು ಗ್ರಾಹಕರಿಗೆ ವಿವಿಧ ಭಕ್ಷ್ಯಗಳಲ್ಲಿ ನೀಡುವುದಲ್ಲದೇ ವಿವಿಧ ದೇಶಗಳಿಗೆ ಸಾಗಿಸಲಾಗುತ್ತದೆ.

ಇದೀಗ ಉತ್ತರ ಅಮೆರಿಕಾದಲ್ಲಿ ಹಿಡಿದ 212 ಕೆಜಿ ತೂಕದ ಟ್ಯೂನ ಮೀನುಗಳನ್ನು ಜಪಾನ್ನಲ್ಲಿ ಹರಾಜು ಮಾಡಲಾಗಿದ್ದು ಎರಡು ಕ್ವಿಂಟಾಲ್ಗಿಂತ ಹೆಚ್ಚು ತೂಕದ ಮೀನು ಟೋಕಿಯೊದ ಮೀನು ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ 2.2 ಕೋಟಿ ರೂ.ಗೆ ಸೇಲ್ ಆಗಿದೆ. ಈ ಮೀನಿನ ವೀಕ್ಷಣೆಗಾಗಿ ಸಾವಿರಾರು ಮಂದಿ ಆಗಮಿಸಿದ್ದು ಮೀನನ್ನು ನೋಡಿ ಖುಷಿ ಪಟ್ಟಿದ್ದಾರೆ.

Leave A Reply

Your email address will not be published.