ಈ ರೀತಿಯಾಗಿ ಕೂದಲಿಗೆ ಎಣ್ಣೆ ಹಚ್ಚಿ | ಕೂದಲು ಉದುರುವಿಕೆಯನ್ನು ನಿಯಂತ್ರಿಸಿ

ಕೂದಲು ಸದೃಢವಾಗಿ, ಆರೋಗ್ಯಕರವಾಗಿ ಇರಬೇಕು ಅಂದ್ರೆ ಎಣ್ಣೆ ಅಗತ್ಯ. ಕೂದಲಿನ ಬೆಳವಣಿಗೆಗೆ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಆದರೆ ಕೂದಲಿಗೆ ಎಣ್ಣೆ ಹಚ್ಚಲು ಕೆಲವು ಇತಿಮಿತಿಗಳು ಇವೆ. ಕೂದಲಿಗೆ ತಪ್ಪಾದ ರೀತಿಯಲ್ಲಿ ಎಣ್ಣೆ ಹಚ್ಚಿದರೆ ಕೂದಲ ಮೇಲೆ ಅಡ್ಡ ಪರಿಣಾಮಗಳು ಬೀರಬಹುದು. ಅಲ್ಲದೆ, ಕೂದಲಿಗೆ ಸರಿಯಾದ ರೀತಿಯಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ತಲೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಇನ್ನೂ, ಕೂದಲಿಗೆ ಯಾವಾಗ ಎಣ್ಣೆ ಹಚ್ಚಬೇಕು? ಯಾವಾಗ ಹಚ್ಚಬಾರದು? ಹಾಗೂ ಹೇಗೆ ಹಚ್ಚಬೇಕು? ಎಂಬುದು ಇಲ್ಲಿದೆ.

 

ಕೂದಲಿಗೆ ಯಾವಾಗ ಎಣ್ಣೆ ಹಚ್ಚಬೇಕು?

√ ನಿಮ್ಮ ಕೂದಲು ಆರೋಗ್ಯಕರವಾಗಿ, ಸದೃಢವಾಗಿ ಇರಬೇಕು ಅಂದ್ರೆ, ವಾರಕ್ಕೆ ಒಂದು ಅಥವಾ ಎರಡು ಬಾರಿ ಉಗುರುಬೆಚ್ಚಗಿನ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಬೇಕು.
√ ಕೂದಲಿಗೆ ಶಾಂಪೂ ಹಾಕುವ 2 ರಿಂದ 3 ಗಂಟೆಗಳ ಮೊದಲು ಕೂದಲಿಗೆ ಎಣ್ಣೆ ಹಚ್ಚಬೇಕು.
√ ಹಾಗೂ ತಲೆ ಕೂದಲಿಗೆ ರಾತ್ರಿ ಎಣ್ಣೆ ಹಚ್ಚಿ ಮಲಗಿ, ಬೆಳಿಗ್ಗೆ ಕೂದಲನ್ನು ತೊಳೆಯಬಹುದು.

ಯಾವಾಗ ಹಚ್ಚಬಾರದು?

  • ನೀವು ಹೊರಗೆ ಹೋಗುವಾಗ ಕೂದಲಿಗೆ ಎಣ್ಣೆ ಹಚ್ಚಬೇಡಿ.
  • ಮತ್ತು ಶಾಂಪೂ ಹಾಕಿದ ನಂತರ ಕೂದಲಿಗೆ ಎಣ್ಣೆ ಹಚ್ಚುವುದನ್ನು ನಿಲ್ಲಿಸಿ. ಯಾಕಂದ್ರೆ ಕೂದಲಿನಲ್ಲಿ ಧೂಳು, ಮಣ್ಣು ಮತ್ತು ಕೊಳೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕೂದಲು ಹಾನಿಗೊಳಗಾಗಬಹುದು.
  • ಕೂದಲಿಗೆ ಸರಿಯಾದ ಸಮಯಕ್ಕೆ ಎಣ್ಣೆ ಹಚ್ಚುವುದರಿಂದ ಕೂದಲು ಬಲವಾಗುತ್ತದೆ ಮತ್ತು ತಲೆಹೊಟ್ಟು ಸಮಸ್ಯೆ ಉಂಟಾಗುವುದಿಲ್ಲ. ಕೂದಲಿಗೆ ಎಣ್ಣೆಯನ್ನು ಋತುವಿನ ಪ್ರಕಾರ ಆರಿಸಿಕೊಳ್ಳುವುದು ಮುಖ್ಯ.

ಕೂದಲಿಗೆ ಎಣ್ಣೆಯನ್ನು ಹೇಗೆ ಹಚ್ಚಬೇಕು?

  1. ಮೊದಲು ಎಣ್ಣೆಯನ್ನು ಸ್ವಲ್ಪ ಉಗುರುಬೆಚ್ಚಗೆ ಮಾಡಿಕೊಳ್ಳಿ.
  2. ನಂತರ ಎಣ್ಣೆಯನ್ನು ತಣ್ಣಗೆ ಮಾಡಿ, ನಿಮ್ಮ ಬೆರಳುಗಳನ್ನು ಆ ತಣ್ಣಗಿರುವ ಎಣ್ಣೆಯಲ್ಲಿ ಅದ್ದಿ ಮತ್ತು ಲಘುವಾದ ಕೈಯಿಂದ ನೆತ್ತಿಗೆ ಹಚ್ಚಿ.
  3. ಇನ್ನೂ, ಕೂದಲನ್ನು ಸರಿಯಾಗಿ ಮಸಾಜ್ ಮಾಡಲು, ಕೂದಲನ್ನು ಎರಡು ಭಾಗಗಳಾಗಿ ವಿಂಗಡಿಸಿ.
  4. ಮೊದಲು ನೆತ್ತಿಯ ಮೇಲೆ ಎಣ್ಣೆಯನ್ನು ಹಚ್ಚಿ, ನಂತರ ಕೂದಲಿಗೆ ಹಚ್ಚಿರಿ.
  5. ನೀವು ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡುವಾಗ ಅಂಗೈಯನ್ನು ಬಳಸಬೇಡಿ. ಬದಲಿಗೆ ಕೂದಲಿಗೆ ಬೆರಳುಗಳಿಂದ ಮಾತ್ರ ಮಸಾಜ್ ಮಾಡಿ.
  6. ಕೂದಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿದ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಟವೆಲ್ ಅನ್ನು ನೆನೆಸಿ.
  7. ಬಳಿಕ 5 ರಿಂದ 10 ನಿಮಿಷಗಳ ಕಾಲ ಕೂದಲಿನ ಮೇಲೆ ಟವೆಲ್ ಅನ್ನು ಕಟ್ಟಿಕೊಳ್ಳಿ. ಇದರಿಂದ ನೆತ್ತಿಯ ಕೂದಲು ಕಿರುಚೀಲಗಳು ತೆರೆದುಕೊಳ್ಳುತ್ತವೆ. ಆಗ ಎಣ್ಣೆ ನೆತ್ತಿಯಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ.
  8. ಹಾಗೇ ಕೂದಲಿಗೆ ಎಣ್ಣೆ ಹಚ್ಚಿದ ನಂತರ, ಕೂದಲನ್ನು 2 ರಿಂದ 3 ಗಂಟೆಗಳ ನಂತರ ಅಥವಾ ಬೆಳಿಗ್ಗೆ ತೊಳೆಯಬಹುದು.

ಈ ರೀತಿಯಾಗಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಗಟ್ಟಿಯಾಗಿ, ಆರೋಗ್ಯಕರವಾಗಿ, ಹೊಳೆಯುತ್ತದೆ. ಅಲ್ಲದೆ, ಕೂದಲು ಉದುರುವಿಕೆ ನಿಯಂತ್ರಣವಾಗುತ್ತದೆ. ಆದರೆ ನೀವು ಈ ಮೊದಲು ಕೂದಲಿಗೆ ಯಾವುದಾದರೂ ಚಿಕಿತ್ಸೆ ಮಾಡಿದ್ದರೆ ಅಥವಾ ಸದ್ಯ ಕೂದಲಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಕೂದಲ ತಜ್ಞರನ್ನು ಭೇಟಿಯಾಗಿ, ಅವರ ಸಲಹೆ ಪಡೆದ ನಂತರ ಕೂದಲಿಗೆ ಎಣ್ಣೆಯನ್ನು ಹಚ್ಚಿ, ಇದು ಉತ್ತಮ.

Leave A Reply

Your email address will not be published.