ಈ ನಟಿಗೆ ಮೈ ತುಂಬಾ ಬಟ್ಟೆ ಹಾಕೊಂಡ್ರೆ ಮೈಯೆಲ್ಲಾ ಅಲರ್ಜಿ ಅಂತೆ! ತುಂಡು ಬಟ್ಟೆಯ ರಹಸ್ಯ ಬಿಚ್ಚಿಟ್ಟ ನಟಿ

ವಿಚಿತ್ರವಾದ ತುಂಡು ತುಂಡು ಬಟ್ಟೆಗಳನ್ನು ಧರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಯಾವಾಗಲೂ ಸುದ್ದಿಯಲ್ಲಿರುವ ಕಿರುತೆರೆ ನಟಿ ಎಂದರೆ ಉರ್ಫಿ ಜಾಧವ್. ಇದೀಗ ಉರ್ಫಿಯವರು ತಾನು ಸಂಪೂರ್ಣ ಉಡುಗೆ ಯಾಕೆ ಧಸುವುದಿಲ್ಲ ಎಂಬುದರ ಕುರಿತು ನೆಟ್ಟಿಗರು ಬೆಚ್ಚಿ ಬೀಳುವಂತಹ ವಿಷಯವನ್ನು ತೆರೆದಿಟ್ಟಿದ್ದಾರೆ.

 

ಉರ್ಫಿ ಜಾದವ್ ಅವರು ಹಿಂದಿ ಬಿಗ್ ಬಾಸ್ ಒಟಿಟಿ’ ಸೀಸನ್​ಗೆ ಕಾಲಿಟ್ಟರು. ಅಲ್ಲಿ ಚಿತ್ರವಿಚಿತ್ರ ಬಟ್ಟೆ ಧರಿಸಿ ಫೇಮಸ್ ಆದರು. ಅಲ್ಲಿಂದ ಅವರು ಚಿಕ್ಕ ಬಟ್ಟೆ ತೊಡುವ ಕಾಯಕ ಶುರುವಾಯಿತು. ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರು ಹಾಕೋದು ತುಂಡುಡುಗೆ ಮಾತ್ರ. ಇದರಿಂದ ಅವರಿಗೆ ಅನೇಕ ಟೀಕೆಗಳು ವ್ಯಕ್ತವಾಗಿದ್ದೂ ಇದೆ. ಅನೇಕರು ಇದು ಪ್ರಚಾರದ ಗಿಮಿಕ್ ಎಂದು ಹೇಳಿದ್ದೂ ಇದೆ. ಆದರೆ, ನಟಿ ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ.

ಆದರೆ ಯಾಕೆ ತಾನು ಮೈ ಮುಚ್ಚುವ ಹಾಗೆ ಬಟ್ಟೆ ಧರಿಸುವುದಿಲ್ವ ಎಂಬುದರ ಬಗ್ಗೆ ಎಲ್ಲರೂ ಬೆರಗಾಗುವಂತೆ ಹೇಳಿದ್ದಾರೆ. ಸಂಪೂರ್ಣ ಬಟ್ಟೆ ಧರಿಸಿಕೊಂಡಿದ್ದರಿಂದ ಉರ್ಫಿ ಜಾದವ್ ಅವರಿಗೆ ಮೈ ತುಂಬಾ ಅಲರ್ಜಿ ಆಗುತ್ತದೆಯಂತೆ. ಈ ಕುರಿತು ಅವರೇ ವಿಡಿಯೋ ಮಾಡಿ, ಮೈ ತುಂಬಾ ಆದ ಅಲರ್ಜಿಯನ್ನೂ ತೋರಿಸಿದ್ದಾರೆ.

ನೋಡಿ ನನಗೆ ಬಟ್ಟೆ ಹಾಕಿಕೊಂಡರೆ ಆಗುವ ಅಲರ್ಜಿ ಇದು. ನಾನು ಏಕೆ ಬಟ್ಟೆ ಹಾಕುವುದಿಲ್ಲ ಎಂಬುದಕ್ಕೆ ನಿಮಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ. ನನಗೆ ಈ ಸಮಸ್ಯೆ ಇದೆ. ಬಟ್ಟೆ ಹಾಕಿಕೊಂಡರೆ ನನ್ನ ದೇಹ ರಿಯಾಕ್ಟ್ ಮಾಡುತ್ತದೆ. ಇದಕ್ಕೆ ಸಾಕ್ಷಿ ಕೊಟ್ಟಿದ್ದೇನೆ. ಹೀಗಾಗಿ ನಾನು ಅರೆ ಬೆತ್ತಲಾಗಿ ಓಡಾಡುತ್ತೇನೆ’ ಎಂದಿದ್ದಾರೆ ಉರ್ಫಿ ಜಾಧವ್

ಉರ್ಫಿ ಹಂಚಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಉರ್ಫಿ ಬಟ್ಟೆ ಹಾಕಿಕೊಂಡ ಕಾರಣಕ್ಕೇ ಈ ರೀತಿ ಆಗಿದೆಯೇ ಅಥವಾ ಇದು ಪ್ರಚಾರದ ಗಿಮಿಕ್ಕೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿದೆ. ಸದ್ಯ, ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.