Post Office : ಭಾರೀ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ!

ಇದೀಗ ಅಂಚೆ ಇಲಾಖೆಯು ಭಾರೀ ಮೊತ್ತದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಈ ವಿಮೆ ಜನರಿಗೆ ಬಹಳ ಉಪಯುಕ್ತವಾಗಿದ್ದು, ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು ಪರಿಚಯಿಸಿದೆ. ಇದು ಅತಿಕಡಿಮೆ ಹಣದಲ್ಲಿ ಅಧಿಕ ಮೊತ್ತದ ಅನುದಾನ ವಿಮೆಯಾಗಿದೆ.

ಕೆಲವು ಅವಘಡಗಳಿಗೆ ತುತ್ತಾದಾಗ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ಇದರ ಅನುಕೂಲವನ್ನು ಪಡೆಯಲು ವಯೋಮಿತಿಯಿದ್ದು, ಕನಿಷ್ಠ 18ರಿಂದ ಗರಿಷ್ಠ 65 ವರ್ಷದ ಒಳಗಿನವರು ಖಾತೆ ತೆರೆದು ಈ ವಿಮೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ನೀವು ಅಂಚೆ ಕಚೇರಿಯಲ್ಲಿ ವಾರ್ಷಿಕವಾಗಿ 399 ರೂ. ಹಣ ಪಾವತಿಸಿದರೆ ಈ 10ಲಕ್ಷ ರೂ. ಅಪಘಾತ ವಿಮೆಯ ಪ್ರಯೋಜನ ಪಡೆಯಬಹುದು. ಈ ವಿಮೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತ ಅಥವಾ ಅಂಚೆ ಇಲಾಖೆಯ ಪಟ್ಟಿಯಲ್ಲಿರುವ ಇನ್ನಿತರ ಅವಘಡದ ಸನ್ನಿವೇಶಗಳಿಗೆ ಒಳಗಾದರೆ ಅವರಿಗೆ ಹಲವು ರೀತಿಯಲ್ಲಿ ಆರ್ಥಿಕ ಸಹಾಯ ಲಭಿಸುತ್ತದೆ. ಅಲ್ಲದೆ, ನೀವು ಈಗಾಗಲೇ ಅಂಚೆ ಇಲಾಖೆಯಲ್ಲಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಆಕೌಂಟ್’ ಖಾತೆಯನ್ನು ಹೊಂದಿದ್ದರೆ, ನೀವು ಈ ಅಪಘಾತ ವಿಮೆಯನ್ನು ಮಾಡಿಸಬಹುದು. ಈ ಖಾತೆ ಹೊಂದಿಲ್ಲದಿದ್ದರೆ ಹತ್ತಿರದ ಅಂಚೆ ಕಚೇರಿಯಲ್ಲಿ 100ರೂ. ಪಾವತಿಸಿ ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆಯನ್ನು ತೆರೆಯಿರಿ.

ಈ ವಿಮೆಯಿಂದ ಆಗುವ ಪ್ರಯೋಜನಗಳೇನು?

  • ವಿಮಾ ಯೋಜನೆ ಫಲಾನುಭವಿ ಅಪಘಾತದಿಂದ ಸಾವನ್ನಪ್ಪಿದರೆ, ಅವರ ಕುಟುಂಬಸ್ಥರಿಗೆ 10 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ.
  • ಶಾಶ್ವತವಾಗಿ ಅಂಗವೈಕಲ್ಯವಾದರೆ 10ಲಕ್ಷ ರೂ. ಹಣ ದೊರಕುತ್ತದೆ.
  • ಅಪಘಾತವಾದ ವ್ಯಕ್ತಿಯ ಆಸ್ಪತ್ರೆ ವೆಚ್ಚಕ್ಕೆ 60,000 ರೂ. ನೀಡಲಾಗುತ್ತದೆ.
  • ಇನ್ನೂ, ಅವಘಡದಿಂದ ವ್ಯಕ್ತಿ ಮೃತಪಟ್ಟರೆ ಅವರ ಮಕ್ಕಳ ಶಿಕ್ಷಣಕ್ಕಾಗಿ, ಪ್ರತಿ ಮಗುವಿಗೆ ರೂ.1 ಲಕ್ಷ ವರೆಗೆ ಸಹಾಯ ನೀಡಲಾಗುತ್ತದೆ. ಹಾಗೇ ಸಂಪೂರ್ಣ ಶಿಕ್ಷಣಕ್ಕೆ ಗರಿಷ್ಟ 2ಲಕ್ಷ ರೂ. ಸಿಗುತ್ತದೆ.
  • ಓಪಿಡಿ ವೆಚ್ಚಕ್ಕೆಂದು 30,000 ರೂಪಾಯಿ ಹಣ ಸಿಗಲಿದೆ.
  • ಅಪಘಾತ ಸಂಭವಿಸಿ ಅದರಿಂದ ವ್ಯಕ್ತಿಗೆ ಪಾರ್ಶ್ವವಾಯು ಉಂಟಾದರೆ 10 ಲಕ್ಷ ರೂ. ನೀಡಲಾಗುತ್ತದೆ.
  • ಕುಟುಂಬದ ಆಸ್ಪತ್ರೆ ಪ್ರಯಾಣ ವೆಚ್ಚಕ್ಕೆ 25,000 ರೂ. ಆರ್ಥಿಕ ಸಹಾಯ ದೊರಕುತ್ತದೆ.

ಈ ವಿಮೆಯಲ್ಲಿ ವಾಹನ ಅಪಘಾತಗಳು, ಹಾವು ಕಡಿತ, ವಿದ್ಯುತ್ ಆಘಾತ, ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವು ಒಳಗೊಂಡಂತೆ ಇನ್ನಿತರ ಆಕಸ್ಮಿಕ ಸಾವಿಗೆ ಪರಿಹಾರವಾಗಿ ಆರ್ಥಿಕ ಸಹಾಯ ಸಿಗುತ್ತದೆ. ಈ ವಿಮೆಯ ಅನುಕೂಲ ಪಡೆಯಬೇಕೆಂದಿರುವವರು ‘ಇಂಡಿಯಾ ಪೋಸ್ಟ್ ಪೇಮೆಂಟ್ ಅಕೌಂಟ್’ ಖಾತೆಯನ್ನು ತೆರೆಯಲು ಹಾಗೂ ಈ ವಿಮಾ ಯೋಜನೆಯ ಪ್ರಯೋಜನ ಪಡೆಯಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

Leave A Reply

Your email address will not be published.