FD Rate Hike : ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ !
ವೃದ್ಧಾಪ್ಯದಲ್ಲಿ ಹಣಕಾಸಿನ ಅಡಚಣೆಗಳು ಉಂಟಾಗೋದು ಸಹಜ. ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆ ಹಾಗೂ ರಿಟರ್ನ್ ನೀಡುವ ಉದ್ದೇಶದಿಂದ ಬ್ಯಾಂಕುಗಳು ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುತ್ತವೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಬಡ್ಡಿದರದ ತನಕ ಪ್ರತಿಯೊಂದರಲ್ಲೂ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತವೆ.
ಇದೀಗ ಬ್ಯಾಂಕ್’ಗಳು ಹೊಸವರ್ಷದಂದು ಹಿರಿಯ ನಾಗರಿಕರಿಗೆ ಭರ್ಜರಿ ಶುಭಸುದ್ದಿಯನ್ನು ನೀಡಿದೆ. ಇದೇ ಮೊದಲ ಬಾರಿಗೆ ಮೂರು ವರ್ಷಗಳ ಬಳಿಕ ಹಿರಿಯ ನಾಗರೀಕರ ಸ್ಥಿರ ಠೇವಣಿಗಳ(ಎಫ್ ಡಿ) ಮೇಲಿನ ಬಡ್ಡಿದರ ಶೇ.8ಕ್ಕೇರಿಸಿದೆ.
ಕೊರೋನಾ ತಂದಿಟ್ಟಂತಹ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಹಿರಿಯ ನಾಗರೀಕರ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಸಲಾಗಿತ್ತು. ಆದರೆ ಇದೀಗ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವ ಕಾರಣ ಸಾಲದ ಬಡ್ಡಿದರದ ಜೊತೆಗೆ, ಠೇವಣಿ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ.
ಪ್ರಸ್ತುತ ಕೆಲ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಶೇ.8ರಷ್ಟು ಬಡ್ಡಿದರ ನೀಡುತ್ತಿವೆ. ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು 7.4 ರಿಂದ 8ಕ್ಕೆ ಹೆಚ್ಚಿಸಿದ್ದೂ, ಹಿರಿಯ ಜೀವಗಳಿಗೆ ಸಂತಸದಾಯಕವಾಗಿದೆ.