ಉಡುಪಿ | ನಿಜವಾಗಿಯೂ ನಡೆಯಿತೇ ಕಾಂತಾರ ಸಿನಿಮಾದಲ್ಲಿನ ಆ ಪಾರ್ಟ್…!! ದೈವಗಳಿಗೆ ಎದುರಾಗಿ ಕೋರ್ಟ್ ಮೆಟ್ಟಿಲೇರಿದ ದೂರುದಾರ ಏನಾದ…!!

Share the Article

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾ ಶೈಲಿಯಲ್ಲಿ ಕೋರ್ಟ್‍ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವಪ್ಪಿರುವನಡೆದಿರುವ ಘಟನೆಯೊಂದು ನಡೆದಿದ್ದು, ದೈವಗಳ ಶಕ್ತಿ ಎಂತಹದು ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಸುಮಾರು 500 ವರ್ಷ ಇತಿಹಾಸ ಹೊಂದಿರುವ ಪಡುಬಿದ್ರ ದೈವಸ್ಥಾನದಲ್ಲಿ ಭಕ್ತಾದಿಗಳು ಮತ್ತು ಟ್ರಸ್ಟ್ ಸಮಿತಿ ಎರಡು ಗುಂಪುಗಳಾಗಿ ಹೊಡೆದು ಹೋಗಿತ್ತು ಎನ್ನಲಾಗಿದೆ.

ದೈವಸ್ಥಾನದ ವಿಚಾರವಾಗಿ ಭಕ್ತ ಸಮಿತಿ ಮತ್ತು ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದೆ. ಟ್ರಸ್ಟಿ ಜಯ ಪೂಜಾರಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇದೀಗ ಅವರ ಸಾವಿನ ಹಿನ್ನಲೆಯಲ್ಲಿ, ದೈವಸ್ಥಾನದಲ್ಲಿ ನಡೆಯಬೇಕಿದ್ದ ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply