Truke BTG X1 Gaming Ear buds : ಚೀಪ್ ಆಂಡ್ ಬೆಸ್ಟ್, ಕೇವಲ 999ರೂ. ಗೆ ಇಯರ್ ಬಡ್ಸ್ ! ಫೀಚರ್ಸ್ ಸೂಪರ್

ಹೊಸ ಇಯರ್‌ಬಡ್‌ಗಳನ್ನು ಖರೀದಿಸಲು ಇದೊಂದು ಒಳ್ಳೆಯ ಅವಕಾಶ ಆಗಿದೆ. ಹೌದು ಬಳಕೆದಾರರ ಡಿವೈಸ್​ಗಳಿಗೆ ವೇಗವಾಗಿ ಕನೆಕ್ಟ್​ ಆಗುವಂತಹ ಫೀಚರ್ಸ್​ ಅನ್ನು ಹೊಂದಿರುವ ಜೊತೆಗೆ ಬ್ಲೂಟೂತ್‌ ಆವೃತ್ತಿ ಒಳಗೊಂಡಿರುವಂತೆ ಕಂಪನಿಯು ಉತ್ಪಾದಿಸಿದ ಚಿಕ್ಕದಾದ ಮತ್ತು ಹಗುರವಾದ ಇಯರ್‌ಬಡ್‌ಗಳು ಎಂದು ಹೇಳಬಹುದು.

 

ಸದ್ಯ ಟ್ರೂಕ್ ಬಿಟಿಜಿ ಎಕ್ಸ್​1 ಇಯರ್‌ಬಡ್‌ಗಳನ್ನು ಭಾರತದಲ್ಲಿ 999 ರೂ. ಗಳಲ್ಲಿ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಲಾಗಿದೆ. ಈ ಆಫರ್ ಮುಗಿದ ನಂತರ ಗ್ರಾಹಕರು ಈ ಗೇಮಿಂಗ್ ಇಯರ್‌ಬಡ್‌ಗಳನ್ನು 1,499 ರೂ. ಗೆ ಖರೀದಿ ಮಾಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಟ್ರೂಕ್ ಬಿಟಿಜಿ ಎಕ್ಸ್​1 ಗೇಮಿಂಗ್‌ ಇಯರ್‌ಬಡ್ಸ್‌ ವಿಶೇಷತೆ :

  • ಟ್ರೂಕ್ ಬಿಟಿಜಿ ಎಕ್ಸ್​1 ಗೇಮಿಂಗ್‌ ಇಯರ್‌ಬಡ್ಸ್‌ ಉತ್ತಮ ಸೌಂಡ್​ ಗುಣಮಟ್ಟವನ್ನು ನೀಡಲಿದ್ದು, ಹಗುರವಾದ ವಿನ್ಯಾಸವನ್ನು ಹೊಂದಿಕೊಂಡಿದೆ. ಅದರಲ್ಲೂ ಗೇಮಿಂಗ್‌ ಹಾಗೂ ಹೆಚ್ಚಿನ ಮ್ಯೂಸಿಕ್​​ ಅನುಭವವನ್ನು ಪಡೆದುಕೊಳ್ಳಲು ಅವಕಾಶ ನೀಡಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಫೀಚರ್ಸ್​​ ಅನ್ನು ಇದು ಒಳಗೊಂಡಿದೆ. • ಅದಲ್ಲದೆ ಟ್ರೂಕ್​ ಬಿಟಿಜಿ ಎಕ್ಸ್​1 ಗೇಮಿಂಗ್​ ಇಯರ್‌ಬಡ್‌ಗಳು ಆಫ್‌-ಇಯರ್ ವಿನ್ಯಾಸದಲ್ಲಿ ರಚಿಸಲಾಗಿದೆ. ಹಾಗೂ 20RGB ಗೇಮಿಂಗ್ ಫೀಚರ್ಸ್‌ ಕೇಸ್ ಕೂಡ ಇದರಲ್ಲಿ ನೀಡಲಾಗಿದೆ.
  • ಟ್ರೂ ಗೇಮಿಂಗ್ ಮೋಡ್‌ನೊಂದಿಗೆ ಸಜ್ಜುಗೊಂಡಿರುವ ಈ ಟ್ರೂಕ್ ಇಯರ್‌ಬಡ್ಸ್‌ 12 ಎಂಎಂ ಟೈಟಾನಿಯಂ ಸ್ಪೀಕರ್ ಡ್ರೈವರ್‌ನಿಂದ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಸಿನಿಮ್ಯಾಟಿಕ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಅನ್ನು ಈ ಇಯರ್​​ಬಡ್ಸ್​ನಲ್ಲಿ ಪಡೆಯಬಹುದಾಗಿದೆ. ಜೊತೆಗೆ ಇದರಲ್ಲಿ 40 ಎಂಎಸ್ ವರೆಗಿನ ಕಡಿಮೆ ಲೇಟೆನ್ಸಿಯನ್ನು ಸಹ ಹೊಂದಿದೆ.
  • ಬಳಕೆದಾರರ ಡಿವೈಸ್​ಗಳಿ ವೇಗವಾಗಿ ಕನೆಕ್ಟ್​ ಆಗುವಂತಹ ಫೀಚರ್ಸ್​ ಅನ್ನು ಇದು ಹೊಂದಿದೆ. ಇದು ಬ್ಲೂಟೂತ್‌ ಆವೃತ್ತಿ 5.3 ನಲ್ಲಿ ಕೆಲಸ ಮಾಡಲಿದ್ದು, ಈ ಮೂಲಕ ಡಿವೈಸ್​ಗಳಲ್ಲಿ ಉತ್ತಮವಾಗಿ ಕನೆಕ್ಟ್​ ಆಗಲು, ಸೌಂಡ್​ ಉತ್ತಮವಾಗಿ ಕೇಳಲು ಸಹಕಾರಿಯಾಗುತ್ತದೆ. • ಟ್ರೂಕ್​ ಕಂಪನಿಯ ಈ ಇಯರ್​​ಬಡ್ಸ್‌ 40mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿರಲಿದೆ. ಹಾಗೆಯೇ ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್​ ಆಗಿದೆ. ಈ ಇಯರ್‌ಬಡ್‌ಗಳು ಚಾರ್ಜಿಂಗ್ ಕೇಸ್‌ನೊಂದಿಗೆ 48 ಗಂಟೆಗಳವರೆಗೆ ಪ್ಲೇಟೈಮ್ ಫೀಚರ್​​ ಅನ್ನು ನೀಡಲಿದೆ ಎಂದು ಟ್ರೂಕ್ ಕಂಪನಿ ಮಾಹಿತಿ ನೀಡಿದೆ.
  • ವಿಶೇಷವಾಗಿ ಈ ಈ ಚಾರ್ಜಿಂಗ್‌ ಕೇಸ್‌ನಲ್ಲಿ ಆರ್‌ಜಿಬಿ ಲೈಟ್ಸ್‌ ಅನ್ನು ಆ್ಯಡ್ ಮಾಡಲಾಗಿದೆ. ಇದು ನೋಡುಗರನ್ನು ಇನ್ನಷ್ಟು ಆಕರ್ಷಿಸುತ್ತದೆ. ಇದೊಂದು ಗೇಮಿಂಗ್ ಇಯರ್​ಬಡ್ಸ್​ ಆಗಿರುವುದರಿಂದ ಇದಕ್ಕೆ ಆರ್​ಜಿಬಿ ಲೈಟ್ಸ್​​ ಅನ್ನು ಆ್ಯಡ್​ ಮಾಡಿದ್ದಾರೆ.

ಇದೀಗ ಟ್ರೂಕ್ ಬಿಟಿಜಿ ಎಕ್ಸ್​1 ಗೇಮಿಂಗ್‌ ಇಯರ್‌ಬಡ್ಸ್‌ ನ್ನು ಫ್ಲಿಪ್‌ಕಾರ್ಟ್‌ ಹಾಗೂ ಕ್ರೋಮ್​ ಸೇರಿದಂತೆ ಇನ್ನಿತರೆ ಆನ್‌ಲೈನ್‌ ತಾಣದಲ್ಲಿ ಖರೀದಿ ಮಾಡಬಹುದಾಗಿದೆ.

Leave A Reply

Your email address will not be published.