ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸುವಾಗ ಅಪಾಯ ಕಾದಿತ್ತು | ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಕೆಲವೊಮ್ಮೆ ನಸೀಬು ಚೆನ್ನಾಗಿದ್ದರೆ ಎಂತಹ ದೊಡ್ಡ ಅವಾಂತರ ಎದುರಾದರೂ ಕೂದಲೆಳೆ ಅಂತರದಲ್ಲಿ ಪಾರಾಗಬಹುದು. ಅದೇ ರೀತಿ ನಸೀಬು ಕೆಟ್ಟರೆ ಸಣ್ಣ ಅವಘಡ ಕೂಡ ಘೋರವಾಗಿ ಪರಿಣಮಿಸಲೂಬಹುದು. ಇದೇ ರೀತಿ, ಘಟನೆ ಬೆಳಕಿಗೆ ಬಂದಿದೆ.

 

ಸಾಮಾನ್ಯವಾಗಿ ಸ್ಟಾರ್ ನಟರು ಇಲ್ಲವೇ ನಮ್ಮ ನೆಚ್ಚಿನ ಸಿನಿಮಾ ರಂಗದ ಕಲಾವಿದರು ಸಿಕ್ಕಾಗ ಆಗುವ ಖುಷಿ ವರ್ಣಿಸಲು ಅಸಾಧ್ಯ. ಹೀಗೆ ಅವರು ಸಿಕ್ಕಾಗ ಸೆಲ್ಫಿ ಕ್ಲಿಕ್ಕಿಸಲು ಮುಗಿ ಬೀಳೋದು ಸಹಜ. ಇದೇ ರೀತಿ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋದ ವೇಳೆ ಅನಾಹುತ ಸಂಭವಿಸಿದೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದ್ದು, ಸೆಲ್ಫಿ ಕ್ಲಿಕ್ಕಿಸುವಾಗ ಕೂಡ ಜಾಗ್ರತೆ ವಹಿಸಬೇಕು ಎಂಬ ಸಂದೇಶವನ್ನು ಈ ವೀಡಿಯೋ ರವಾನೆ ಮಾಡುತ್ತಿದೆ. ಹೌದು, ತಿರುವನಂತಪುರದಲ್ಲಿ ನಟಿ ನಿತ್ಯಾ ದಾಸ್​ ಜೊತೆ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಕೂದಲಿಗೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಮಹಿಳಾ ಅಭಿಮಾನಿ ಬಚಾವ್ ಆಗಿರುವ ಘಟನೆ ನಡೆದಿದೆ.

ನಟ ಮಾಮುಕ್ಕೋಯ ಅವರೊಂದಿಗೆ ನಿತ್ಯಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಜನರು ನಿತ್ಯಾ ಜೊತೆ ಮಾತನಾಡುವಾಗ ಸೆಲ್ಫಿ ತೆಗೆದುಕೊಳ್ಳುವುದನ್ನು ಗಮನಿಸಬಹುದು. ಈ ನಡುವೆ ನಟಿಯೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿದ್ದ ವೇಳೆ ಮಹಿಳೆಯ ಹಿಂದೆ ಇದ್ದ ಮೇಣದ ಬತ್ತಿಯಿಂದ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ಸಂದರ್ಭ ಬೆಂಕಿಯನ್ನು ನೋಡಿದ ಕೂಡಲೇ ನಟಿ ನಿತ್ಯ ಕಿರುಚಾಡುತ್ತಿರುವುದನ್ನು ನೋಡಬಹುದು.

ಬ್ಯೂಟಿ ಪಾರ್ಲರ್​ ಉದ್ಘಾಟಿಸಲು ನಟಿ ನಿತ್ಯಾ ದಾಸ್​ ಅವರು ಕೋಯಿಕ್ಕೋಡ್​ನ ಕೊಡುವಲ್ಲಿ ಏರಿಯಾಗೆ ಬಂದಿದ್ದ ಸಂದರ್ಭ ಇದ್ದಕ್ಕಿದ್ದಂತೆ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡ ಘಟನೆಯೊಂದು ನಡೆದಿದೆ. ಈ ಸಂದರ್ಭ ನಟಿ ನಿತ್ಯಾ ಹಾಗೂ ಅವರೊಂದಿಗೆ ಮಹಿಳೆ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಈ ವೇಳೆ ನಟಿ ಅಲ್ಲಿಂದ ಓಡಿ ಹೋಗಿದ್ದು, ಉಳಿದ ಮಹಿಳೆಯರು ಬೆಂಕಿಯನ್ನು ನಂದಿಸಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಬೆಂಕಿ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ದಟ್ಟವಾಗಿದ್ದು ಆದರೆ, ಅದೃಷ್ಟವಶಾತ್​ ಮಹಿಳೆಗೆ ಗಂಭೀರ ಅವಘಡ ಆಗಿಲ್ಲ ಎನ್ನಲಾಗಿದೆ.

Leave A Reply

Your email address will not be published.