Black Thread: ಈ ರಾಶಿಯವರು ಕಪ್ಪು ದಾರ ಧರಿಸಿದರೆ ಕಂಟಕ ಕಟ್ಟಿಟ್ಟ ಬುತ್ತಿ!!
ಬಹಳಷ್ಟು ಜನರು ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಕೆಲವರು ದೃಷ್ಠಿ ಬೀಳುತ್ತದೆ ಎಂದು ಧರಿಸಿದರೆ, ಇನ್ನೂ ಕೆಲವರು ಫ್ಯಾಷನ್ ಎಂದು ಧರಿಸುತ್ತಾರೆ. ಜನರ ನಂಬಿಕೆ ಏನಂದ್ರೆ ಕಪ್ಪು ದಾರ ಕೆಟ್ಟ ಕಣ್ಣುಗಳಿಂದ ನಮ್ಮನ್ನು ದೂರಮಾಡುತ್ತದೆ ಎಂಬುದು ಹಾಗಾಗಿ ಸದಾ ಈ ದಾರವನ್ನು ಧರಿಸುತ್ತಾರೆ. ಆದರೆ ಎಲ್ಲರೂ ಕಪ್ಪು ದಾರವನ್ನು ಧರಿಸಬಾರದು. ಕೆಲವು ರಾಶಿಗಳಿಗೆ ಈ ಕಪ್ಪು ದಾರ ಒಳಿತಲ್ಲ. ಹಾಗಾದ್ರೆ ಯಾವ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು ಎಂಬುದು ಇಲ್ಲಿದೆ.
ಮೇಷ ರಾಶಿ (Aries) :
ರಾಶಿಚಕ್ರದಲ್ಲಿ ಮೇಷ ರಾಶಿಯು ಮೊದಲ ಅಗ್ನಿ ಚಿಹ್ನೆ, ಇತರ ಅಗ್ನಿ ಚಿಹ್ನೆಗಳು ಸಿಂಹ ಮತ್ತು ಧನು ರಾಶಿ ಆಗಿದೆ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಮಂಗಳ ಗ್ರಹದ ಬಣ್ಣ ಕೆಂಪು. ಅಲ್ಲದೇ ಈ ಗ್ರಹಕ್ಕೆ ಕಪ್ಪು ಬಣ್ಣ ಎಂದರೆ ಇಷ್ಟವಿಲ್ಲ. ಹಾಗಾಗಿ ಈ ರಾಶಿಚಕ್ರದ ಜನರು ಕಪ್ಪು ದಾರವನ್ನು ಧರಿಸಿದರೆ ಅವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗೂ ಈ ಕಪ್ಪು ಬಣ್ಣದ ಬಳಕೆಯಿಂದ ಮನಸ್ಸಿನಲ್ಲಿ ಚಂಚಲತೆ, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಕಪ್ಪು ದಾರವನ್ನು ಧರಿಸಬಾರದು, ಇದು ಒಳಿತಲ್ಲ. ಈ ರಾಶಿಯವರಿಗೆ ಕೆಂಪು ಬಣ್ಣದ ಬಳಕೆ ಶುಭ ಸೂಚಕ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವೃಶ್ಚಿಕ ರಾಶಿ (Scorpio) :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯವರು ಕಪ್ಪು ದಾರವನ್ನು ಧರಿಸಬಾರದು. ಯಾಕಂದ್ರೆ, ಮೇಷ ರಾಶಿಯಂತೆ ವೃಶ್ಚಿಕ ರಾಶಿಯನ್ನು ಕೂಡ ಮಂಗಳ ಗ್ರಹ ಆಳುತ್ತದೆ. ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಿದರೆ ಮಂಗಳದೇವನಿಗೆ ಕೋಪ ಬರುತ್ತದೆ. ಇದು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ರಾಶಿಯವರು ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಕಪ್ಪು ಬದಲು ಕೆಂಪು ದಾರವನ್ನು ಕಟ್ಟಿಕೊಳ್ಳಿ. ಈ ರಾಶಿಯವರಿಗೆ ಕೆಂಪು ಬಣ್ಣದ ದಾರ ಶುಭ.
ಯಾವ ರಾಶಿಯವರು ಕಪ್ಪು ದಾರವನ್ನು ಧರಿಸಬೇಕು?
ತುಲಾ ಮತ್ತು ಕುಂಭ ರಾಶಿ : ಈ ರಾಶಿಯವರಿಗೆ ಕಪ್ಪು ದಾರವನ್ನು ಧರಿಸುವುದು ಶುಭ ಸೂಚಕವಾಗಿದೆ. ಶನಿಯು ಕುಂಭ ಮತ್ತು ತುಲಾ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಈ ರಾಶಿಯವರಿಗೆ ಕಪ್ಪು ದಾರ ಕಟ್ಟುವುದರಿಂದ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಅಲ್ಲದೆ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ರಾಶಿಯವರಿಗೆ ಎದುರಾಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ.