Viral Video : ಯುವತಿಗೆ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಥಳಿಸಿದ ಯುವಕ, ವಿಡಿಯೋ ವೈರಲ್‌

Share the Article

ಕೆಲವೊಮ್ಮೆ ದಬ್ಬಾಳಿಕೆ ಅನ್ನೋದು ಯಾರಿಗೆ ಯಾವ ರೀತಿ ಆದರೂ ಆಗಬಹುದು. ಹಾಗೆಯೇ ಮುಗ್ದತೆ ಅನ್ನೋದು ಕೆಲವರ ಪಾಲಿಗೆ ದಬ್ಬಾಳಿಕೆ ರೂಪ ತಾಳುತ್ತಿದೆ. ಇಲ್ಲೊಬ್ಬಳು ಯುವತಿಗೆ ನಡುರಸ್ತೆಯಲ್ಲಿ ಎಕಯೇಕಿ ಹೆಲ್ಮೆಟ್‌ನಿಂದ ಹಿಗ್ಗಾಮುಗ್ಗ ಹೊಡೆದ ವಿಡಿಯೋ ವೈರಲ್‌ ಆಗಿದೆ. ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಗುರುಗ್ರಾಮದಿಂದ ಹೊರಬಂದ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಮಲ್ ಎಂಬ ವ್ಯಕ್ತಿ ತನ್ನ ಬೈಕ್‌ನಲ್ಲಿ ತನ್ನೊಂದಿಗೆ ಸವಾರಿ ಮಾಡಲು ನಿರಾಕರಿಸಿದ ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆಯುವ ದೃಶ್ಯ ವೀಡಿಯೋ ದಲ್ಲಿ ಕಂಡು ಬಂದಿದೆ.

ಇಬ್ಬರೂ ಯಾವುದೋ ವಿಷಯಕ್ಕೆ ಜಗಳವಾಡಿದ ನಂತರ ಪುರುಷನು ಮಹಿಳೆಗೆ ಹೆಲ್ಮೆಟ್‌ನಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಅವರ ಸುತ್ತಮುತ್ತಲಿನ ಕೆಲವು ಸ್ಥಳೀಯರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಾರೆ ಮತ್ತು ದೃಶ್ಯಗಳ ಪ್ರಕಾರ ಶೀಘ್ರದಲ್ಲೇ ಅವನನ್ನು ತಡೆಯುತ್ತಾರೆ.

ಇದೀಗ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಎಸಿಪಿ ಮನೋಜ್ ಕೆ, ಪ್ರಕಾರ “ಕಮಲ್ ಎಂಬ ವ್ಯಕ್ತಿ ತನ್ನ ಬೈಕ್‌ನಲ್ಲಿ ತನ್ನೊಂದಿಗೆ ಸವಾರಿ ಮಾಡಲು ನಿರಾಕರಿಸಿದ ಕಾರಣ ಈ ಮಹಿಳೆಗೆ ಹೆಲ್ಮೆಟ್‌ನಿಂದ ಥಳಿಸಿದ್ದಾನೆ. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ”. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply