DIY Hacks : ಮನೆಯಲ್ಲೇ ಅತಿಸುಲಭವಾಗಿ ಲಿಪ್ ಬಾಮ್ ತಯಾರಿಸಿ | ಇಲ್ಲಿದೆ ಸರಳ ವಿಧಾನ
ಪ್ರತಿ ಹೆಣ್ಣಿಗೂ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಹೆಣ್ಣಿನ ಅಂದದಲ್ಲಿ ತುಟಿಯ ಪಾತ್ರ ಕೂಡ ತುಂಬಾನೇ ಇದೆ. ಇನ್ನೂ, ತುಟಿ ಸುಂದರವಾಗಿ ಕಾಣಲು ಅಥವಾ ತುಟಿ ಒಡೆಯುವುದಕ್ಕೆ ಇರಬಹುದು ಹೆಚ್ಚಾಗಿ ಲಿಪ್ ಬಾಮ್ ಹಚ್ಚುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಲಿಪ್ ಬಾಮ್ ಗಳು ರಾಸಾಯನಿಕಯುಕ್ತ ಆಗಿದ್ದು, ತುಟಿಯ ಮೇಲೆ ಅಡ್ಡ ಪರಿಣಾಮಗಳು ಬೀಳಬಹುದು. ಅಲ್ಲದೆ, ಇದರಿಂದ ತುಟಿ ಕಪ್ಪಾಗಲೂಬಹುದು. ಹಾಗಾಗಿ ಮನೆಯಲ್ಲೇ ಮಾಡುವ ಲಿಪ್ ಬಾಮ್ ಉತ್ತಮ ಎಂದೇ ಹೇಳಬಹುದು.
ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಯಾವಾಗ ಬೇಕಾದರೂ ಈ ಲಿಪ್ ಬಾಮ್ಗಳನ್ನು ಸುಲಭವಾಗಿ ತಯಾರಿಸಬಹುದು. ಮನೆಯಲ್ಲೇ ತಯಾರಿಸುವುದರಿಂದ ಇದು ಆರೋಗ್ಯಕರವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳು ಉಂಟಾಗೋದಿಲ್ಲ. ಜೊತೆಗೆ ತುಟಿ ಕಪ್ಪಾಗುವಿಕೆಯ ಸಾಧ್ಯತೆಯು ಕಡಿಮೆ ಇದ್ದು, ನಿಮ್ಮ ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಯಾವುದೇ ರಾಸಾಯನಿಕವಿಲ್ಲದೆ, ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಸುಲಭವಾಗಿ ಲಿಪ್ ಬಾಮ್ ತಯಾರಿಸಬಹುದು. ಹೇಗೇ ಎಂಬ ಪ್ರಶ್ನೆಯೇ? ಇಲ್ಲಿದೆ ಸುಲಭ ಸರಳ ವಿಧಾನ.
ಬೀಟ್ರೂಟ್ ಲಿಪ್ ಬಾಮ್ :
ಬೀಟ್ರೂಟ್ ನೀರಿನಲ್ಲಿ ಕರಗುವ, ಕೆನ್ನೀಲಿ-ಕೆಂಪು ವರ್ಣದ್ರವ್ಯವಾದ ಬೆಟಾಲೈನ್ ಅನ್ನು ಹೊಂದಿರುತ್ತದೆ. ಬೀಟ್ರೂಟ್ ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಜೀವಸತ್ವಗಳು, ಖನಿಜಗಳನ್ನು ಒಳಗೊಂಡಿರುವ ಆಹಾರದ ಫೈಬರ್ ನ ಮೂಲವಾಗಿದೆ. ಇನ್ನೂ, ಲಿಪ್ ಬಾಮ್ ಹೇಗೆ ತಯಾರಿಸೋದು ಎಂಬುದು ನೋಡೋಣ.
ವಿಧಾನ : ಮೊದಲು ಬೀಟ್ರೂಟ್ ಅನ್ನು ತುರಿದು ಅದರ ರಸವನ್ನು ಹಿಂಡಿ. ನಂತರ ಆ ಬೀಟ್ರೂಟ್ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಫ್ರೀಜರ್ ನಲ್ಲಿಡಿ. ಆಗ ಇದು ಗಟ್ಟಿಯಾಗುತ್ತದೆ. ನಂತರ ಅದನ್ನು ಲಿಪ್ ಬಾಮ್ ಆಗಿ ಬಳಸಿ. ಇದು ಸುಲಭ ಮತ್ತು ಸರಳವಾಗಿದ್ದು, ತ್ವಚೆಗೆ ಉತ್ತಮವಾಗಿದೆ.
ಹನಿ ಲಿಪ್ ಬಾಮ್ :
ವಿಧಾನ : ಜೇನುತುಪ್ಪವನ್ನು ತೆಂಗಿನ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಇನ್ನೂ ಸ್ವಲ್ಪ ಜೇನುತುಪ್ಪ ಸೇರಿಸಿ, ಅದು ಸ್ವಲ್ಪ ಗಟ್ಟಿಯಾಗುವವರೆಗೆ ಹಾಗೆಯೇ ಬಿಡಿ. ಕುದಿಸಿರುವುದು ತಣ್ಣಗಾದ ನಂತರ ಅದನ್ನು ಒಂದು ಸಣ್ಣ ಬಾಕ್ಸ್ನಲ್ಲಿ ಹಾಕಿ ಇಟ್ಟುಕೊಳ್ಳಿ. ನಂತರ ಅದನ್ನು ಬೇಕಾದಾಗ ಬಳಸಿಕೊಳ್ಳಿ.
ಶಿಯಾ ಬಟರ್ ಲಿಪ್ ಬಾಮ್ :
ಶಿಯಾ ಬೆಣ್ಣೆ ಮತ್ತು ಜೇನುತುಪ್ಪ ಎರಡನ್ನೂ ಬಿಸಿ ಮಾಡಿ ಕರಗಿಸಿಕೊಳ್ಳಿ. ಅದು ಸ್ವಲ್ಪ ಗಟ್ಟಿಯಾಗುವವರೆಗೆ ಹಾಗೆಯೇ ಬಿಡಿ. ತಣ್ಣಗಾದ ಬಳಿಕ ಅದನ್ನು ಸುರಕ್ಷಿತವಾಗಿರಿಸಿ, ಬಳಸಬಹುದು. ಇದು ನೈಸರ್ಗಿಕವಾಗಿದ್ದು, ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಕಿತ್ತಳೆ ಲಿಪ್ ಬಾಮ್ :
ವಿಧಾನ : ಮೊದಲು ಕಿತ್ತಳೆ ರಸವನ್ನು ಹಿಂಡಿ ಇದಾದ ಬಳಿಕ ಕುದಿಸಿ. ನಂತರ ಜೇನುತುಪ್ಪ ಮತ್ತು ಶಿಯಾ ಬಟರ್ ಎರಡನ್ನೂ ಕರಗಿಸಿ. ಕರಗಿಸಿರುವ ಇದಕ್ಕೆ ತೆಂಗಿನ ಎಣ್ಣೆ, ಬೇಯಿಸಿದ ಕಿತ್ತಳೆ ರಸ ಮತ್ತು ಸುಗಂಧ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಮಯದ ನಂತರ ಇದು ಗಟ್ಟಿಯಾಗುತ್ತದೆ. ಬಳಿಕ ತಣ್ಣಗಾಗಲು ಬಿಟ್ಟು, ಸಣ್ಣ ಬಾಕ್ಸ್ ನಲ್ಲಿ ತುಂಬಿಸಿ, ಅಗತ್ಯವಾದಾಗ ಬಳಸಿ.
ದಾಳಿಂಬೆ ಲಿಪ್ ಬಾಮ್ :
ವಿಧಾನ : ದಾಳಿಂಬೆ ಹಣ್ಣು, ಸಿಪ್ಪೆ ಮಾತ್ರವಲ್ಲದೆ ಕಾಳು ಕೂಡ ಪ್ರಯೋಜನಕಾರಿಯಾಗಿದೆ. ಮೊದಲು ದಾಳಿಂಬೆ ಕಾಳುಗಳಿಂದ ರಸವನ್ನು ಹಿಂಡಿ. ನಂತರ ಅದನ್ನು ತೆಂಗಿನ ಎಣ್ಣೆಯ ಜೊತೆಗೆ ಬೆರೆಸಿ, ಅದು ಗಟ್ಟಿಯಾಗುವವರೆಗೆ ಫ್ರೀಜರ್ನಲ್ಲಿ ಇರಿಸಿ. ನಂತರ ಲಿಪ್ ಬಾಮ್ ಆಗಿ ಬಳಸಬಹುದು.