Internshala Career Scholarship: ಯುವತಿಯರೇ ನಿಮಗೊಂದು ಗುಡ್‌ನ್ಯೂಸ್ | 25,000 ರೂ. ವೃತ್ತಿ ಸ್ಕಾಲರ್ಶಿಪ್ ನಿಮ್ಮದಾಗಿಸಿ, ಜ.15ರೊಳಗೆ ಅರ್ಜಿ ಸಲ್ಲಿಸಿ
ಓದಿನ ಜೊತೆಗೆ ವಿದ್ಯಾರ್ಥಿನಿಯರು ತಮ್ಮ ಕರಿಯರ್ ಸಹ ರೂಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆದರೆ ನಾನಾ ಕಾರಣಗಳಿಂದ ಯುವತಿಯರು ತಮ್ಮ ಕರಿಯರ್ ರೂಪಿಸುವಲ್ಲಿ ವಿಫಲರಾಗುತ್ತಾರೆ. ಹೀಗಾಗಿ ಯುವತಿಯರಿಗೆ ವೃತ್ತಿ ರೂಪಿಸಿಕೊಳ್ಳಲು ಇಂಟರ್ನ್‌ಶಾಲಾ ನೆರವಿಗೆ ನಿಂತಿದೆ. ಇಂಟರ್ನ್‌ಶಾಲಾ ವೃತ್ತಿ ತಂತ್ರಜ್ಞಾನ ವೇದಿಕೆಯು ತನ್ನ ವಾರ್ಷಿಕ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಹುಡುಗಿಯರಿಗಾಗಿ ವಾರ್ಷಿಕವಾಗಿ 25,000 ರೂ. ವೃತ್ತಿ ವಿದ್ಯಾರ್ಥಿವೇತನ ICSG 2023 ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸ್ಕಾಲರ್ ಶಿಪ್: Internshala Career Scholarship for Girls (ICSG)
ಸ್ಕಾಲರ್ ಶಿಪ್ ಮೊತ್ತ: 25,000 ರೂ. ವಾರ್ಷಿಕ
ನಿಯಮ : ವಿದ್ಯಾರ್ಥಿನಿಯರಿಗೆ ಮಾತ್ರ
ವಯೋಮಿತಿ: 17-23 ವರ್ಷ
ಅರ್ಜಿ ಆಹ್ವಾನ ಆರಂಭ ದಿನಾಂಕ : 31-12-2022
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 15-01-2023
ಅರ್ಜಿ ಪ್ರಕ್ರಿಯೆ: 3 ಹಂತಗಳಲ್ಲಿ ಆಯ್ಕೆ
ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿನಿಯರು ಈ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಜೊತೆಗೆ ತಮ್ಮ ವೃತ್ತಿಜೀವನದ ಉದ್ದೇಶವನ್ನು ತಿಳಿಸಬೇಕು.
ಅಪ್ಲಿಕೇಶನ್ ಪ್ರಕ್ರಿಯೆಯು ಈ ಕೆಳಗಿನಂತೆ ಮೂರು ಹಂತಗಳನ್ನು ಒಳಗೊಂಡಿದೆ:
- ಆನ್‌ಲೈನ್ ಮೂಲಕ ಅರ್ಜಿಯ ಸಲ್ಲಿಕೆ.
- ಸಂದರ್ಶನ: ಟೆಲಿಫೋನ್ ಮೂಲಕ ಸಂದರ್ಶನಗಳನ್ನು ನಡೆಸಲಾಗುವುದು. ಸಂದರ್ಶನದ ಮೊದಲು ಎಲ್ಲಾ ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ಒದಗಿಸಬೇಕು.
- ರೆಫರಿ ಚೆಕ್: ಸಂದರ್ಶನದ ನಂತರ, ಫಾರ್ಮ್‌ನಲ್ಲಿ ಒದಗಿಸಿರುವ ದಾಖಲೆಗಳ ಪರಿಶೀಲನೆಗಾಗಿ ಸಂಪರ್ಕಿಸಲಾಗುತ್ತದೆ.
ಮೇಲಿನ ಹಂತಗಳ ಮೂಲಕ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ವಿಜೇತರ ಪಟ್ಟಿಯನ್ನು ಘೋಷಿಸಲಾಗುತ್ತದೆ.
ಸದ್ಯ ಯಾವುದೇ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಅರ್ಹ ಯುವತಿಯರಿಗೆ ಈ ಸ್ಕಾಲರ್ಶಿಪ್ ಸಿಗಲಿದೆ. ಅದಲ್ಲದೆ ವಿದ್ಯಾರ್ಥಿನಿಯರಿಗೆ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಪಾವತಿ, ವಿಶೇಷ ಉಪಕರಣಗಳಿಗೆ ಭತ್ಯೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.