Video viral : ಡ್ಯಾನ್ಸರ್‌ ಜೊತೆ ಈ ಹಣ್ಣು ಹಣ್ಣು ತಾತನ ಫೀಲಿಂಗ್‌ ರೊಮ್ಯಾನ್ಸ್ ನೋಡಿ ಶಾಕ್‌ ಆದ ನೆಟ್ಟಿಜನ್ಸ್‌

ಡ್ಯಾನ್ಸ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಂಬೇಗಾಲು ಇಡುವ ಮಕ್ಕಳಿಂದ ಹಿಡಿದು ಕೋಲು ಹಿಡಿದು ನಡೆಯುವ ಅಜ್ಜನಿಗೂ ಡ್ಯಾನ್ಸ್ ಇಷ್ಟ ಆಗುತ್ತೆ. ಹಾಗೆಯೇ ಇಲ್ಲೊಬ್ಬರು ವಯಸ್ಸಾದ ತಾತ ವೇದಿಕೆಯಲ್ಲಿ ನರ್ತಕಿಯೊಂದಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡುತ್ತಿರುವುದು ವೀಡಿಯೋ ವೈರಲ್ ಆಗಿದೆ.

 

ಹೌದು 5 ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಈ ವಿಡಿಯೋ ಹಾಕಲಾಗಿದ್ದು ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನರ್ತಕಿ ತನ್ನ ನೃತ್ಯದಲ್ಲಿ ಮಗ್ನನಾಗಿರುವುದನ್ನು ವಿಡಿಯೋ ದಲ್ಲಿ ಕಾಣಬಹುದು ಮತ್ತು ಇದ್ದಕ್ಕಿದ್ದಂತೆ ಈ ತಾತ ಕೂಡ ನೃತ್ಯದಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ . ಈ ಸಮಯದಲ್ಲಿ, ನರ್ತಕಿಯು ತಾತನ ಕೆನ್ನೆಯನ್ನು ಕೂಡ ಹಿಸುಕುತ್ತಾಳೆ. ಕೆಲವು ಜನರ ಸಹಾಯದಿಂದ ವೇದಿಕೆಯ ಮೇಲೆ ಹೋಗಿ ನಂತರ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ.

ಮೊದಲು ತನ್ನಷ್ಟಕ್ಕೆ ತಾನು ಕೆಲವು ಸ್ಟೆಪ್ಸ್‌ ಹಾಕಿದ ತಾತ ಬಳಿಕ ಸುಂದರ ನರ್ತಕಿಯನ್ನು ತಬ್ಬಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದಾದ ನಂತರ ನರ್ತಕಿ ತಾತನನ್ನು ಎತ್ತಿಕೊಂಡು ಸುತ್ತಲೂ ಸುತ್ತುತ್ತಾಳೆ.

ಒಟ್ಟಿನಲ್ಲಿ ತಾತನಿಗೂ ಖುಷಿ ನರ್ತಕಿಗೂ ಖುಷಿಯಾಗಿದೆ ಅದಲ್ಲದೆ ಇತ್ತ ಈ ತಾತಪ್ಪನ ಡ್ಯಾನ್ಸ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಯಸ್ಸು ದೇಹಕ್ಕೆ ಹೊರತು ಮನಸಿಗಲ್ಲ ಎಂದು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ ಈ ಜೋಡಿಯ ಡ್ಯಾನ್ಸ್ ನೋಡಿ ನಕ್ಕು ನಕ್ಕು ಸುಸ್ತಾಗಿದೆ ಎಂದಿದ್ದಾರೆ. ಏನೇ ಆಗಲಿ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬಾರದು ಎಂದು ಈ ತಾತನನ್ನು ನೋಡಿ ಅರಿತುಕೊಳ್ಳಬಹುದು.

Leave A Reply

Your email address will not be published.