ಅರೇ, ಮತ್ತೆ ಒಂದಾದ ಸುದೀಪ್ , ದರ್ಶನ್ | ಏನಿದು ಕ್ರೇಜಿ ಜೊತೆ ವೈರಲ್ ಫೋಟೋ?

ಕುಚುಕು ಕುಚುಕು ಕುಚುಕು.. ನಾವು ಚಡ್ಡಿ ದೋಸ್ತ್ ಕಣೋ ಕುಚಿಕೊ.. ಜೀವದ್ ಗೆಳೆಯ… ಜೀವಕ್ಕಿಂತ ಜಾಸ್ತಿ ಕಣೋ..ಎಂಬಂತೆ ಇದ್ದ ಸ್ನೇಹ ದಚ್ಚು ಹಾಗೂ ಕಿಚ್ಚನದ್ದು!! ಆದರೆ, ಏಕೋ ಏನೋ..ಇದ್ದಕ್ಕಿದ್ದಂತೆ ಸ್ನೇಹದ ನಡುವೆ ಬಿರುಕು ಮೂಡಿ ಇಬ್ಬರ ನಡುವೆ ಮಾತುಕತೆ ಬಂದ್ ಆಗಿದ್ದವು.

 

ದರ್ಶನ್‌ ಮೇಲೆ ಚಪ್ಪಲಿ ಎಸೆದ ಪ್ರಕರಣದ ವೇಳೆ ಕಿಚ್ಚ ಸುದೀಪ್‌ ಈ ಕೃತ್ಯ ಎಸಗಿದವರ ವಿರುದ್ದ ಕಿಡಿ ಕಾರಿದ್ದರು. ಸ್ಯಾಂಡಲ್‌ವುಡ್‌ನ ಕುಚಿಕು ಗೆಳೆಯರು ಮತ್ತೆ ಒಂದಾಗಲಿದ್ದಾರೆ ಎಂಬ ಆಶಾಭಾವನೆ ಹುಟ್ಟಿಸಲು ಇದು ಕಾರಣವಾಗಿ ದಚ್ಚು ಮತ್ತು ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ ಲಭ್ಯವಾಗಿತ್ತು.

ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗಬೇಕು ಎಂದು ಆಸೆ ಹೊತ್ತವರಿಗೆ ಕಿಚ್ಚಿನ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಳಿಕ ಗೆಳೆಯರಿಬ್ಬರು ಮನಸ್ತಾಪ ಬಿಟ್ಟು ಕಹಿ ನೆನಪುಗಳ ಬಿಟ್ಟು ಒಂದಾಗಬೇಕು ಎಂಬ ಬೇಡಿಕೆಗಳು ಅಭಿಮಾನಿಗಳ ಬಳಗದಿಂದ ಕೇಳಿ ಬರುತ್ತಲೇ ಇವೆ.

ಈ ನಡುವೆ ದರ್ಶನ್‌, ಸುದೀಪ್‌ ಮತ್ತು ರವಿಚಂದ್ರನ್‌ ಮೂವರು ಜೊತೆಯಾಗಿರುವ ಸೆಲ್ಫಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ಈ ಫೋಟೊ ನೋಡಿದ್ದೆ ಕಿಚ್ಚ, ದಚ್ಚು ಫ್ಯಾನ್ಸ್ ಫುಲ್ ಖುಷ್ ಆಗಿದ್ದರೆ, ಮತ್ತೆ ಕೆಲವು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅರೇ..ಇದು ನಿಜಾನಾ?? ಎಂದು ಬೆರಗಾಗಿದ್ದಾರೆ. ರವಿಚಂದ್ರನ್ ಮನೆಯಲ್ಲಿ ಸ್ನೇಹಿತರು ಒಂದಾದರು ಎಂದು ಫ್ಯಾನ್ಸ್ ಖುಷಿಪಟ್ಟರೆ ಆದರೆ ಮತ್ತೆ ಕೆಲವರು ಇದು ನಿಜವಾದ ಫೋಟೋನಾ ಅಥವಾ ಎಡಿಟ್‌ ಮಾಡಿದ್ದಿರಬೇಕು ಎಂಬ ಅನುಮಾನ ಹೊರ ಹಾಕಿದ್ದಾರೆ.

ಆದ್ರೆ, ಅಸಲಿ ಕಹಾನಿ ಏನಪ್ಪಾ ಅಂದ್ರೆ ರವಿಚಂದ್ರನ್‌, ಕಿಚ್ಚ, ದಚ್ಚು ಸೆಲ್ಫಿ ರಿಯಲ್ ಅಲ್ಲ ಬದಲಿಗೆ ಅಭಿಮಾನಿಗಳು ಎಡಿಟ್ ಮಾಡಿದ ಫೋಟೋ ಆಗಿದ್ದು, ಕುಚುಕು ಗೆಳೆಯರನ್ನು ಒಟ್ಟಿಗೆ ನೋಡಲು ಸಾಧ್ಯವಾಗದೇ ಇದ್ದರೂ ಹೀಗಾದರೂ ಇಬ್ಬರನ್ನೂ ಒಟ್ಟಿಗೆ ನೋಡಬಹುದಲ್ಲ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಸ್ನೇಹ ಮುರಿದು ಬಿದ್ದರು ಕೂಡ ಅಭಿಮಾನಿಗಳು ಇವತ್ತಲ್ಲ ನಾಳೆ ಕುಚುಕು ಜೋಡಿ ಮತ್ತೆ ಒಂದಾಗಲಿದ್ದಾರೆ ಎಂಬ ಭರವಸೆಯ ಜೊತೆಗೆ ಮುನ್ನಡೆಯುತ್ತಿದ್ದಾರೆ.

Leave A Reply

Your email address will not be published.