ಬೆಂಗಳೂರಿನ ವ್ಯಕ್ತಿ ಸಾಕಿರುವ ಕಕೇಷ್ಯನ್ ಶೆಫರ್ಡ್ ಶ್ವಾನಕ್ಕೆ ಬಂತು ಕೋಟಿಗಟ್ಟಲೆ ಆಫರ್! ಬಂದ ಆಫರ್ ನೋಡಿದರೆ ನೀವೂ ಶಾಕ್ ಆಗ್ತೀರಾ!
ನಾಯಿ ಎಲ್ಲರ ಅಚ್ಚು ಮೆಚ್ಚಿನ ಪ್ರಾಣಿ. ಅದೊಂದು ನಿಯತ್ತಿನ ಮುಗ್ಧ ಜೀವಿಯಾದ ಕಾರಣ ಎಲ್ಲರು ಮನೆಯಲ್ಲಿ ಸಾಕುತ್ತಾರೆ. ಇಂದು ಜಗತ್ತಿನಾದ್ಯಂತ ಹಲವು ಶ್ವಾನ ತಳಿಗಳಿವೆ. ಇವುಗಳ ಮೂಲಕ ನಾಯಿ ಸಾಕಣೆಯು ಕೂಡ ಒಂದು ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ. ಈಗಂತೂ ಜಾತಿ ನಾಯಿಗಳಿಗೆ ಎಲ್ಲಿಲ್ಲದ ಬೇಡಿಕೆ. ಒಂದಕ್ಕಿಂತ ಒಂದು ತಳಿಗೆ ದುಬಾರಿ ಬೆಲೆ. ಸದ್ಯ ಈಗ ಸುದ್ಧಿಯಾಗುತ್ತಿರುವ ಈ ಶ್ವಾನದ ಬೆಲೆ ಕೇಳಿದ್ರೆ ನೀವೂ ಒಂದು ಸಲ ಶಾಕ್ ಆಗ್ತೀರಾ!
ಹೌದು ಬೆಂಗಳೂರಿನ ವ್ಯಕ್ತಿ ಸಾಕಿರುವ ‘ಕಕೇಷ್ಯನ್ ಶೆಫರ್ಡ್’ ತಳಿಯ ನಾಯಿಗೆ ಹೈದರಾಬಾದ್ ಬಿಲ್ಡರ್ ಒಬ್ಬರು ಬರೋಬ್ಬರಿ 20 ಕೋಟಿ ಆಫರ್ ನೀಡಿ ಎಲ್ಲರೂ ದಂಗಾಗುವಂತೆ ಮಾಡಿದ್ದಾರೆ. ಆದರೆ ಅವರು ನೀಡಿರುವ ಈ ಆಫರ್ ಶ್ವಾನದ ಘನತೆಗೆ ತಕ್ಕಂತಿದೆ ಎಂಬುದು ಸತ್ಯವಾದ ಮಾತು.
ಯಾಕೆಂದರೆ ‘ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಒಂದೂವರೆ ವರ್ಷದ ಕಕೇಷ್ಯನ್ ಶೆಫರ್ಡ್ ಶ್ವಾನವು ಬರೋಬ್ಬರಿ 100 ಕೆ.ಜಿ ತೂಕವಿದೆ!. ನೋಡಲು ಸಿಂಹದಂತೆಯೇ ಕಾಣುವ ಇದರ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ! ತಿರುವನಂತಪುರಂ ಕೆನಲ್ ಕ್ಲಬ್ ವತಿಯಿಂದ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ಈ ಶ್ವಾನವು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಇದರೊಂದಿಗೆ ಅತ್ಯುತ್ತಮ ಶ್ವಾನವಾಗಿ 32 ಪದಕಗಳನ್ನು ಬಾಚಿಕೊಂಡಿದೆ.
20 ಕೋಟಿ ಆಫರ್ ನೀಡಿದರು ಕೂಡ ಅದನ್ನು ನಿರಾಕರಿಸಿರುವ ಭಾರತೀಯ ಶ್ವಾನ ತಳಿಗಾರರ ಸಂಘದ ಅಧ್ಯಕ್ಷ ಎಸ್. ಸತೀಶ್ ತಮ್ಮ ಪ್ರೀತಿಯ ಶ್ವಾನವನ್ನು ಯಾರಿಗೂ ಕೊಡದೆ ತಾವೇ ಸಾಕುವುದಾಗಿ ತಿಳಿಸಿದ್ದಾರೆ.
ಕಕೇಷಿಯನ್ ಶೆಫರ್ಡ್ ಶ್ವಾನವನ್ನು ಹೆಚ್ಚಾಗಿ ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದಗಳಲ್ಲಿ ಈ ತಳಿಗಳು ಹೆಚ್ಚಾಗಿ ಕಂಡುಬರುತ್ತವೆ. ಅಲ್ಲದೆ ಶ್ವಾನವು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ.