ಮತ್ತೆ ಗಡಿ ಭಾಗದಲ್ಲಿ ಕೇಳಿಸಿದ ಸ್ಯಾಟಲೈಟ್ ಫೋನ್ ಸದ್ದು…!!

Share the Article

ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಗಡಿ ಭಾಗದಲ್ಲಿ ಗುರುವಾರ ಸ್ಯಾಟಲೈಟ್‌ ಫೋನ್‌ ಸಿಗ್ನಲ್‌ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಕರ್ನಾಟಕ ಕೇರಳ ರಾಜ್ಯದ ಗಡಿಯ ಕಾಸರಗೋಡು, ಪಾಣಾಜೆ, ಸ್ವರ್ಗ ಪ್ರದೇಶಗಳಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ ಆಗಿರುವುದು ಪತ್ತೆಯಾಗಿದೆ. ಕೇಂದ್ರ ಗುಪ್ತಚರ ಇಲಾಖೆಯು ಸ್ಯಾಟಲೈಟ್‌ ಫೋನ್‌ನ ಸಿಗ್ನಲ್‌ ಅನ್ನು ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಸ್ಪೆಷಲ್‌ ಬ್ರಾಂಚ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Leave A Reply