ಮತ್ತೆ ಕ್ಯಾತೆ ತೆಗೆದ ನಟ ಚೇತನ್‌ ಅಹಿಂಸಾ | ಈ ಬಾರಿ ಗಾಂಧಿ ಮತ್ತು ನೆಹರು ಟಾರ್ಗೆಟ್

Share the Article

ಸದಾ ಏನಾದರೂ ಒಂದು ಕ್ಯಾತೆ ತೆಗೆದು ನಟ ಚೇತನ್ ವಿವಾದ ಮೈ ಮೇಲೆ ಎಳೆದುಕೊಳ್ಳುವ ಪ್ರಕ್ರಿಯೆ ಇತ್ತೀಚೆಗೆ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ದೈವದ ಬಗ್ಗೆ ಮಾತನಾಡಿ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಸದ್ಯ ಗಾಂಧಿ ಮತ್ತು ನೆಹರೂ ಅವರನ್ನು ವಿರೋಧಿಸಬೇಕು ಎಂದು ನಾಲಿಗೆ ಹರಿ ಬಿಟ್ಟು ಎಲ್ಲರನ್ನು ಬೆರಗು ಮೂಡಿಸಿದ್ದಾರೆ.

ಮಾತು ಆಡಿದರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು.. ಎಂಬ ಮಾತಿನಂತೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡುವ ನಟ ಚೇತನ್ ಕುಮಾರ್ ಇದೀಗ, ಗಾಂಧಿ ಹಾಗೂ ನೆಹರು ಅವರನ್ನು ವಿರೋಧಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ. ಹಿಂದುತ್ವ, ಬ್ರಾಹ್ಮಣ್ಯ, ಸಂಸ್ಕೃತಿಯ ಆಚಾರ ವಿಚಾರಗಳನ್ನು ಪ್ರತಿ ಬಾರಿ ವಿರೋಧಿಸುತ್ತಾ ಬಂದಿರುವ ಚೇತನ್ ಕುಮಾರ್ ವಿರೋಧಿ ಪಡೆ ಹೆಚ್ಚಾಗುತ್ತಿದ್ದರು ಕೂಡ ಕ್ಯಾರೇ ಎನ್ನದೆ ತಮ್ಮ ಯೋಚನೆಗಳನ್ನೂ ಮುಕ್ತವಾಗಿ ವ್ಯಕ್ತಪಡಿಸಿ ವಿವಾದ ಮೈ ಮೇಲೆ ಎಳೆದುಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿ ಬಿಟ್ಟಿದೆ.

ಇಡೀ ದೇಶವೇ ಗೌರವ ಸೂಚಿಸುವ ರಾಷ್ಟ್ರ ಪಿತ ಗಾಂಧಿ ಹಾಗೂ ನೆಹರು ಅವರನ್ನು ವಿರೋಧಿಸಬೇಕು ಎಂದಿದ್ದು, ಈ ಕುರಿತು ನಟ ಚೇತನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರಹ ಒಂದನ್ನು ಪೋಸ್ಟ್‌ ಮಾಡಿದ್ದಾರೆ.

ಒಂದು ಶತಮಾನದವರೆಗೆ, ಉದಾರವಾದಿ ಮಾಧ್ಯಮಗಳು/ರಾಜಕೀಯ ಪಕ್ಷಗಳು/ಬುದ್ದಿವಂತರಂತೆ ತಮ್ಮನ್ನು ತಾವು ಪ್ರದರ್ಶಿಕೊಳ್ಳುವವರು, ಗಾಂಧಿ-ನೆಹರು ಅವರನ್ನು ಭಾರತೀಯ ರಾಷ್ಟ್ರೀಯತೆಯ ಆಧಾರವೆಂದು ಪ್ರದರ್ಶಿಸುವ ಪ್ರಯತ್ನ ನಡೆಸಿದ್ದಾರೆ. ಗಾಂಧಿ ಮತ್ತು ನೆಹರು ಅವರನ್ನು ಮೆರೆಸಿ ಬ್ರಾಹ್ಮಣ್ಯವನ್ನು ʼಭಾರತೀಯ ಸಂಸ್ಕೃತಿʼಯ ಸಾರ ಎಂಬಂತೆ ತೋರಿಸಲಾಗಿದೆ ಎಂದು ಹೇಳಿದ್ದು ಜೊತೆಗೆ ಸಾವರ್ಕರ್‌ ಮತ್ತು ಉಪಾಧ್ಯಾಯರನ್ನು ನಾವು ಸಮಾನತಾವಾದಿಗಳು ವಿರೋಧಿಸುವ ರೀತಿಯಲ್ಲೇ ಗಾಂಧಿ ಮತ್ತು ನೆಹರೂ ಅವರನ್ನು ಕೂಡ ವಿರೋಧಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.