ಚಹಾವನ್ನು ಯಾವ ಸಮಯದಲ್ಲಿ ಕುಡಿಯಬೇಕು ಗೊತ್ತಾ? ಇಲ್ಲಿದೆ ಮಾಹಿತಿ

ಟೀ… ಚಾಯ್… ಹೀಗೇ ನಾನಾ ಹೆಸರಿನಿಂದ ಕರೆಯಲ್ಪಡುವ ಪಾನೀಯವೇ “ಚಹಾ”, ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಚಹಾವನ್ನು ಇಷ್ಟಪಡದೇ ಇರುವವರು ವಿರಳ. ಹೆಚ್ಚಿನವರ ದಿನಚರಿ ಒಂದು ಕಪ್ ಚಹಾ ಸೇವನೆಯಿಂದಲೇ ಆರಂಭವಾಗುತ್ತದೆ. ಟೀ ಕುಡಿಯುವುದರಿಂದ ಹೊಸ ಚೈತನ್ಯದ ಜೊತೆಗೆ ಉಲ್ಲಾಸಕರ ಅನುಭವ ಪಡೆಯುವವರು ಅಧಿಕ ಮಂದಿಯಿದ್ದಾರೆ.

ಸಾಮಾನ್ಯವಾಗಿ ಎಲ್ಲಾರೂ ಬೆಳಂಬೆಳಗ್ಗೆ ಕೇಳೋದು ಒಂದೇ ಮಾತು, ಅದೇ ಚಹಾ ಕುಡ್ದ್ರಾ ಅಂತ. ಚಹಾ ಅಂದ್ರೆ ಎಮೋಷನ್ ಎಂದೇ ಹೇಳಬಹುದು. ಕೆಲವರಿಗೆ ದಿನದಲ್ಲಿ ಹಲವಾರು ಬಾರಿ ಟೀ ಕುಡಿಯುವ ಚಟ. ಟೆನ್ಶನ್, ನಿದ್ದೆಯನ್ನು ಓಡಿಸೋದಿಕ್ಕೆ ಕುಡಿಯುವುದುಂಟು. ಇನ್ನೂ ಕೆಲವರಿಗೆ ದಿನದಲ್ಲಿ ಒಂದು ಬಾರಿಯೂ ಚಹಾ ಕುಡಿಯದೇ ಇದ್ದರೆ ತಲೆನೋವೇ ಬಂದು ಬಿಡುತ್ತದೆ. ಭಾರತೀಯರಲ್ಲಿ ಸುಮಾರು 30 ಪ್ರತಿಶತದಷ್ಟು ಜನರು ಹಸಿರು ಚಹಾ ಅಥವಾ ಇತರ ಗಿಡಮೂಲಿಕೆ ಚಹಾಗಳೊಂದಿಗೆ ದಿನವನ್ನು ಪ್ರಾರಂಭಿಸಲು ಬಯಸುತ್ತಾರೆ. ಚಹಾದ ಸೇವನೆಯು ಕೆಲವರಿಗೆ ಶಕ್ತಿವರ್ಧಕವಾಗಿ ಕೆಲಸ ಮಾಡಿದರೆ, ಇನ್ನೂ ಕೆಲವರಿಗೆ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಇನ್ನೂ, ಈ ಚಹಾವನ್ನು ಯಾವ ಸಮಯದಲ್ಲಿ ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂಬುದು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದ್ರೆ ತಿಳಿದುಕೊಳ್ಳೋಣ.

ಚಹಾದಲ್ಲಿ ಕೆಫೀನ್ ಇದೆ, ಇದು ಹೆಚ್ಚಿನ ಜನರಿಗೆ ತಿಳಿದಿರುವಂತದ್ದೆ. ನೀವು ರಾತ್ರಿ ಮಲಗುವ 10 ಗಂಟೆಗಳ ಮುನ್ನ ಕೆಫೀನ್ ಅನ್ನು ಚಹಾದ ರೂಪದಲ್ಲಿ ಸೇವನೆ ಮಾಡಿದರೆ, ಚಹಾ ದೇಹಕ್ಕೆ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಬೇರೆ ಆರೋಗ್ಯ ಪಾನೀಯಗಳಂತೆ ಇದು ಕೂಡ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಕೆಫೀನ್ ಕುರಿತು ಮಾಡಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಚಹಾವನ್ನು ಮಲಗುವ 10 ಗಂಟೆಯ ಮೊದಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನವಿದೆ?

√ ಮಲಗುವ 10 ಗಂಟೆಗಳ ಮೊದಲು ಚಹಾವನ್ನು ಕುಡಿಯುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ.
√ ದೇಹದಲ್ಲಿ ಆಂತರಿಕ ಊತದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
√ ಇದರ ಸೇವನೆಯಿಂದ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ, ಹಾಗಾಗಿ ನಕಾರಾತ್ಮಕತೆ ಮತ್ತು ದುಃಖ ದೂರಾಗುತ್ತದೆ.
√ ಅಲ್ಲದೆ, ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಹಾಗೂ ಮಲಬದ್ಧತೆಯ ಸಮಸ್ಯೆ ದೂರಾಗುತ್ತದೆ.
√ ಯಕೃತ್ತು ಉತ್ತಮವಾಗಿರುತ್ತದೆ. ಚಹಾ ಸೇವನೆಯಿಂದ ಸಮಯಕ್ಕೆ ಸರಿಯಾಗಿ ಹಸಿವಾಗುತ್ತದೆ.
√ ಒತ್ತಡ ಉಂಟಾಗುವುದಿಲ್ಲ ಹಾಗಾಗಿ ಮೆದುಳು ಶಾಂತವಾಗಿರುತ್ತದೆ.

ಚಹಾ ಯಾವ ಸಮಯದಲ್ಲಿ ಕುಡಿದರೆ ಉತ್ತಮ?

ಈ ಮೇಲೆ ಮಲಗುವ 10 ಗಂಟೆಯ ಮೊದಲು ಚಹಾ ಕುಡಿಯಬೇಕು ಎನ್ನಲಾಗಿದೆ. ನೀವು 10 ಗಂಟೆಗೆ ನಿದ್ರೆ ಮಾಡುತ್ತೀರಾ ಎಂದಿಟ್ಟುಕೊಂಡರೆ, ಆಗ ನಿಮ್ಮ ದೈನಂದಿನ ಚಹಾ ಕುಡಿಯಲು ದಿನದ 12 ರಿಂದ 1 ಗಂಟೆಯ ನಡುವಿನ ಸಮಯ ಉತ್ತಮವಾಗಿದೆ. ಇನ್ನೂ, ಸಂಜೆ ಚಹಾ ಕುಡಿಯುವ ಬಗ್ಗೆ ಹೇಳಬೇಕಾದರೆ, ಜನರು ಹೆಚ್ಚಾಗಿ ಸಂಜೆ ಚಹಾ ಕುಡಿಯುತ್ತಾರೆ. ಆದರೆ ಸಂಜೆ ಚಹಾ ಕುಡಿಯುವುದು ಎಲ್ಲರ ಆರೋಗ್ಯಕ್ಕೂ ಹಾನಿಕಾರಕವಲ್ಲ. ಯಾಕಂದ್ರೆ ಕೆಲವರಿಗೆ ಸಂಜೆಯ ಚಹಾ ಕುಡಿದು ಅಭ್ಯಾಸವಿರುತ್ತದೆ.

ಚಹಾವನ್ನು ಯಾರೆಲ್ಲಾ ಕುಡಿಯಬಹುದು?

√ ಪ್ರತಿದಿನ ಸಂಜೆ ಟೀ ಕುಡಿಯುವ ಚಟ ಇಲ್ಲದವರು.
√ ಅಸಿಡಿಟಿಯ ಸಮಸ್ಯೆ ಇಲ್ಲದವರು.
√ ನಿದ್ರೆಯ ಸಮಸ್ಯೆಗಳನ್ನು ಹೊಂದಿಲ್ಲದವರು.
√ ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವವರು.
√ ಹಾಗೂ ಮಲಬದ್ಧತೆಯ ಯಾವುದೇ ಸಮಸ್ಯೆ ಇಲ್ಲದ ಜನರು ಚಹಾವನ್ನು ಕುಡಿಯಬಹುದು.

Leave A Reply

Your email address will not be published.